ಕೊರೋನಾ ತಡೆಗಟ್ಟುವ ಲಸಿಕೆಗೆ ಅಗತ್ಯವಾದ ಕಚ್ಚಾ ವಸ್ತುಗಳ ಮೇಲಿನ ರಫ್ತು ನಿಷೇಧವನ್ನು ತೆಗೆದುಹಾಕಲು ಅಮೇರಿಕಾ ನಿರಾಕರಿಸಿದೆ

ಭಾರತದ ಮನವಿಯನ್ನು ಅಮೇರಿಕಾವು ತಿರಸ್ಕರಿಸಿದೆ !

ಭಾರತೀಯ ಲಸಿಕೆ ಉತ್ಪಾದನೆಯ ಮೇಲೆ ವಿಪತ್ತು

ಅಮೆರಿಕ ಭಾರತದ ಸ್ನೇಹಿತ ಎಂಬ ವಾತಾವರಣ ಸೃಷ್ಟಿಯಾಗಿತ್ತು; ಆದರೆ ಬಿಕ್ಕಟ್ಟಿನ ಸಮಯದಲ್ಲಿ ಸಹಾಯ ಮಾಡುವವನು ನಿಜವಾದ ಸ್ನೇಹಿತನಾಗಿರುತ್ತಾನೆ. ಅಮೆರಿಕಾವು ತೋರಿಸಿದ ಈ ಕೃತಘ್ನತೆಯನ್ನು ಗಮನಿಸಿದರೆ, ಅಮೆರಿಕವು ಭಾರತದ ನಿಜವಾದ ಸ್ನೇಹಿತನಾಗಲು ಸಾಧ್ಯವಿಲ್ಲ ಎಂಬುದನ್ನು ಭಾರತೀಯರು ಯಾವಾಗಲೂ ನೆನಪಿನಲ್ಲಿಡಬೇಕು !

ವಾಷಿಂಗ್ಟನ್ (ಅಮೇರಿಕಾ) – ಭಾರತದ ಕೋರಿಕೆಯನ್ನು ಒಪ್ಪುವ ಮೊದಲು ನಾವು ನಮ್ಮ ನಾಗರಿಕರಿಗೆ ಹೆಚ್ಚಿನ ಆದ್ಯತೆ ನೀಡುತ್ತೇವೆ. ಅಮೇರಿಕಾದ ನಾಗರಿಕರ ಬಗ್ಗೆ ನಮಗೆ ವಿಶೇಷ ಜವಾಬ್ದಾರಿ ಇದೆ ಎಂದು ಹೇಳುವ ಮೂಲಕ ಅಮೆರಿಕ, ಕೊರೋನಾ ಲಸಿಕೆಗಳನ್ನು ತಯಾರಿಸಲು ಬೇಕಾದ ಕಚ್ಚಾ ವಸ್ತುಗಳ ಮೇಲಿನ ರಫ್ತು ನಿಷೇಧವನ್ನು ತೆಗೆದುಹಾಕಲು ನಿರಾಕರಿಸಿದೆ. ಕೆಲವು ದಿನಗಳ ಹಿಂದೆ ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಮತ್ತು ಅಮೇರಿಕಾದ ವಿದೇಶಾಂಗ ಕಾರ್ಯದರ್ಶಿ ಆಂಥೋನಿ ಬ್ಲಿಂಕೆನ್ ನಡುವೆ ಈ ವಿಷಯದ ಬಗ್ಗೆ ಚರ್ಚಿಸಲಾಗಿತ್ತು.

ಅದರ ನಂತರ, ಅಮೇರಿಕಾ ಸಕಾರಾತ್ಮಕ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಭಾರತೀಯ ಅಧಿಕಾರಿಗಳು ಭರವಸೆ ವ್ಯಕ್ತಪಡಿಸಿದ್ದರು. ‘ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ’ದ ಅದಾರ ಪುನಾವಾಲಾ ಕೂಡ ಬಿಡೆನ್‌ಗೆ ಟ್ವೀಟ್ ಮಾಡುವ ಮೂಲಕ ಮನವಿ ಮಾಡಿದ್ದರು.

ಅಮೇರಿಕಾದ ನಾಗರಿಕರಿಗೆ ಲಸಿಕೆ ಹಾಕುವುದು ಇದು ಕೇವಲ ಅಮೇರಿಕಾಗೆ ಮಾತ್ರವಲ್ಲ, ಇಡೀ ಜಗತ್ತಿನ ಹಿತಕ್ಕಾಗಿ ಇದೆ ಎಂದು ಅಮೇರಿಕಾದ ವಿದೇಶಾಂಗ ಇಲಾಖೆ ಹೇಳಿದೆ. ಅಮೆರಿಕದ ನಾಗರಿಕರನ್ನು ರಕ್ಷಿಸುವ ಜವಾಬ್ದಾರಿ ನಮ್ಮ ಮೇಲಿದೆ. ಎರಡನೆಯದಾಗಿ, ಕೊರೋನಾದಿಂದ ಸಾವನ್ನಪ್ಪಿದವರಲ್ಲಿ ವಿಶ್ವದಲ್ಲೇ ಅಮೇರಿಕಾದಲ್ಲಿ ಅತಿ ಹೆಚ್ಚು ಇದೆ.

ಅಮೆರಿಕದ ಕೃತಘ್ನತೆ !

ಕಳೆದ ವರ್ಷ ಕೊರೋನಾ ಭೀಕರ ಅಲೆ ಬಂದಾಗ ಕೊರೋನಾ ರೋಗಿಗಳಿಗೆ ಚಿಕಿತ್ಸೆ ನೀಡಲು ಅಗತ್ಯವಿರುವ ‘ಹೈಡ್ರಾಕ್ಸಿಕ್ಲೋರಿಕ್ವಿನ್’ ಎಂಬ ಔಷಧಿಯನ್ನು ಭಾರತ ಅಮೆರಿಕಕ್ಕೆ ರಫ್ತು ಮಾಡಿತ್ತು. ಆಗಿನ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮನವಿಗೆ ಭಾರತ ಕೂಡಲೇ ಸ್ಪಂದಿಸಿತ್ತು. ಭಾರತವು ಮಾನವೀಯತೆಯ ಪ್ರಜ್ಞೆಯಿಂದ ಅಮೆರಿಕಕ್ಕೆ ಸಹಾಯ ಮಾಡಿತ್ತು; ಆದರೆ ಈಗ ಭಾರತವು ತೊಂದರೆಯಲ್ಲಿರುವಾಗ ಅಮೇರಿಕಾ ಕೃತಜ್ಞತೆಯನ್ನು ತೋರಿಸಿದೆ.