ಜಗತ್ತಿನಲ್ಲೇ ಮೊದಲಬಾರಿ ಜಂಕ್ ಫುಡ್ ಗೆ ಸಂಬಂಧಿಸಿದಂತೆ ಕಾನೂನು ರೂಪಿಸಿದ ಕೊಲಂಬಿಯಾ !

ಈಗ ಕಾನೂನಿನ ಪ್ರಕಾರ ‘ಜಂಕ್ ಫುಡ್’ ಪದಾರ್ಥಗಳ ಮೇಲೆ ಶೇಕಡ ೧೦ ರಿಂದ ೨೦ ರಷ್ಟು ತೆರಿಗೆ !

(‘ಜಂಕ್ ಫುಡ್’ ಎಂದರೆ ಬರ್ಗರ್, ಪಿಜ್ಜಾ, ವೆಫರ್ಸ್ ಮುಂತಾದವುಗಳ ಸಮಾವೇಶ)

ಭೂಗೋಟಾ (ಕೊಲಂಬಿಯಾ) – ದಕ್ಷಿಣ ಅಮೆರಿಕಾ ಖಂಡದಲ್ಲಿನ ಕೊಲಂಬಿಯಾ ದೇಶದಲ್ಲಿ ಇತ್ತೀಚಿಗೆ ‘ಜಂಕ್ ಫುಡ್’ ಸಂಬಂಧಿತ ಕಾನೂನು ರೂಪಿಸಲಾಗಿದೆ. ಜಗತ್ತಿನಲ್ಲಿ ಈ ರೀತಿಯ ಕಾನೂನು ರೂಪಿಸುವಲ್ಲಿ ಕೊಲಂಬಿಯಾ ಮೊದಲ ದೇಶವಾಗಿದೆ. ಜಂಕ್ ಫುಡ್ ನಿಂದ ನಾಗರಿಕರ ಆರೋಗ್ಯದ ಮೇಲೆ ಆಗುವ ವಿಪರೀತ ಪರಿಣಾಮದಿಂದ ಈ ಕಾನೂನು ರೂಪಿಸಲಾಗಿದೆ. ಇದರಲ್ಲಿ ಜಂಕ್ ಫುಡ್ ಮೇಲೆ ತೆರಿಗೆ ವಿಧಿಸಲಾಗುವುದು. ಈಗ ಶೇಕಡ ೧೦ ಮತ್ತು ನಂತರ ಶೇಕಡ ೨೦ ರಷ್ಟು ತೆರಿಗೆ ವಿಧಿಸಲಾಗುವುದು.

ಜಂಕ್ ಫುಡ್ ಪದಾರ್ಥದಲ್ಲಿ ಉಪ್ಪು ಮತ್ತು ಸ್ಯಾಚುರೇಟೆಡ್ ಫ್ಯಾಟ್ ಇದು ಹೆಚ್ಚಿನ ಪ್ರಮಾಣದಲ್ಲಿ ಇರುತ್ತದೆ. ಅದರ ಜೊತೆಗೆ ಇದರಲ್ಲಿ ಸಾಸ್, ಜೆಲ್ಲಿ, ಜಾಮ್, ಪ್ಯುರಿ ಮುಂತಾದವುಗಳನ್ನು ಬಳಸಲಾಗುತ್ತದೆ. ಇಂತಹ ಪದಾರ್ಥದ ಪ್ಯಾಕೆಟ್ ಮೇಲೆ ಕೂಡ ಆರೋಗ್ಯ ಸಂಬಂಧಿತ ಎಚ್ಚರಿಕೆ ಕೂಡ ನೀಡಲಾಗಿರುತ್ತದೆ. ಕೊಲಂಬಿಯಾದಲ್ಲಿ ಪ್ರತಿಯೊಬ್ಬ ವ್ಯಕ್ತಿ ಪ್ರತಿದಿನ ೧೨ ಗ್ರಾಮ್ ಉಪ್ಪು ಸೇವಿಸುತ್ತಾನೆ, ಇದು ಎಲ್ಲಕ್ಕಿಂತ ಹೆಚ್ಚಾಗಿದೆ. ಇದರಿಂದ ರಕ್ತದೊತ್ತಡ, ಬೊಜ್ಜು ಮುಂತಾದ ಆರೋಗ್ಯದ ಸಮಸ್ಯೆಗಳು ನಿರ್ಮಾಣವಾಗುತ್ತವೆ.

ಸಂಪಾದಕೀಯ ನಿಲುವು

‘ಜಂಕ್ ಫುಡ್’ನಿಂದ ಆರೋಗ್ಯದ ಮೇಲೆ ವಿಪರೀತ ಪರಿಣಾಮವಾಗುತ್ತದೆ. ಇದು ಜಗತ್ತಿಗೆ ಗೊತ್ತಿದ್ದರೂ ಇನ್ನೂ ಸಹ ಇದನ್ನು ಗಂಭೀರವಾಗಿ ಪರಿಗಣಿಸದೆ ಇರುವುದು ಲಜ್ಜಾಸ್ಪದ !