Microplastics affect male fertility : ಮೈಕ್ರೋಪ್ಲಾಸ್ಟಿಕ್ ಗಳಿಂದ ಪುರುಷರ ಫಲವತ್ತತೆ ಕ್ಷಮತೆಯ ಮೇಲೆ ಪರಿಣಾಮ ಬೀರುತ್ತವೆ ! – ಸಂಶೋಧನೆ

(ಮೈಕ್ರೋಪ್ಲಾಸ್ಟಿಕ್ ಎಂದರೆ ಪ್ಲಾಸ್ಟಿಕ್‌ನ ಸೂಕ್ಷ್ಮ ಕಣಗಳು !)

ನ್ಯೂ ಮೆಕ್ಸಿಕೋ (ಮೆಕ್ಸಿಕೋ) – ‘ಟಾಕ್ಸಿಕೊಲಾಜಿಕಲ್ ಸೈನ್ಸ’ ಜರ್ನಲ್‌ನಲ್ಲಿ ಪ್ರಕಟವಾದ ಹೊಸ ಅಧ್ಯಯನದಲ್ಲಿ, ಪ್ರತಿಯೊಬ್ಬ ಮಾನವನ ಅಂಡಕೋಶದಲ್ಲಿ ಮೈಕ್ರೋಪ್ಲಾಸ್ಟಿಕ್ ಎಂದು ಕಂಡುಬಂದಿದೆ. ಪ್ಲಾಸ್ಟಿಕ ಮಾಲಿನ್ಯವು ಪುರುಷರ ಫಲವತ್ತತೆಯ ಮೇಲೆ ಬೀರುವ ಸಂಭವನೀಯ ಪರಿಣಾಮಗಳ ಬಗ್ಗೆ ಸಂಶೋಧನೆಯು ಚಿಂತೆಯನ್ನು ಹೆಚ್ಚಿಸಿದೆ. ನ್ಯೂ ಮೆಕ್ಸಿಕೋ ವಿಶ್ವವಿದ್ಯಾಲಯದ ಸಂಶೋಧಕರು ನಾಯಿಗಳು ಮತ್ತು ಮಾನವರ ಅಂಗಾಂಶದ ಮಾದರಿಗಳನ್ನು ವಿಶ್ಲೇಷಿಸಿದ್ದಾರೆ ಮತ್ತು ಎಲ್ಲದರಲ್ಲೂ ಮೈಕ್ರೋಪ್ಲಾಸ್ಟಿಕ್ ಕಂಡುಬಂದಿದೆ. ಈ ಅಧ್ಯಯನದಲ್ಲಿ, ‘ಪುರುಷ ಫಲವತ್ತತೆಯ ಸಂಭವನೀಯ ಪರಿಣಾಮಗಳು’ ಬಗ್ಗೆ ನಿರ್ದಿಷ್ಟವಾಗಿ ಮಂಡಿಸಲಾಗಿದೆ. ಇದು ಮುಂದಿನ ತನಿಖೆಗೆ ಪ್ರೇರೇಪಿಸುತ್ತದೆ.

1. ‘ಯು.ಎನ್.ಎಂ. ಕಾಲೆಜ್ ಆಫ್ ನರ್ಸಿಂಗ್’ನ ಪ್ರೊಫೆಸರ್ ಜಾನ್ ಯು ನೇತೃತ್ವದ ಸಂಶೋಧನಾ ತಂಡವು 47 ನಾಯಿ ಮತ್ತು 23 ಮಾನವ ಅಂಡಕೋಶಗಳಲ್ಲಿ 12 ರೀತಿಯ ಮೈಕ್ರೋಪ್ಲಾಸ್ಟಿಕ್‌ಗಳನ್ನು ಕಂಡು ಹಿಡಿದಿರುವ ಬಗ್ಗೆ ವರದಿ ಮಾಡಿದೆ.

2. ಯು ಇವರು ಮಾತನಾಡಿ, ಇತ್ತೀಚೆಗೆ ಫಲವತ್ತತೆಯು ಕಡಿಮೆಯಾಗುತ್ತಿರುವದರ ಬಗ್ಗೆ ನೀವು ವಿಚಾರ ಮಾಡಿದ್ದೀರಾ ? ಏನಾದೂ ಹೊಸ ಕಾರಣವಿರಬೇಕು ಎಂದು ಹೇಳಿದರು.

3. ಸಾಮಾನ್ಯವಾಗಿ ಕಂಡುಬರುವ ಪ್ಲಾಸ್ಟಿಕ್ ಪ್ರಕಾರವೆಂದರೆ ‘ಪಾಲಿಥಿಲೀನ್’, ಇದನ್ನು ಸಾಮಾನ್ಯವಾಗಿ ಪ್ಲಾಸ್ಟಿಕ್ ಕವರ್‍‌ಗಳು ಮತ್ತು ಬಾಟಲಿಗಳಲ್ಲಿ ಬಳಸಲಾಗುತ್ತದೆ.

4. ಯು ಅವರು, ಪ್ರಾರಂಭದಲ್ಲಿ ನನಗೆ ಮೈಕ್ರೋಪ್ಲಾಸ್ಟಿಕ್‌ಗಳು ಸಂತಾನೋತ್ಪತ್ತಿ ವ್ಯವಸ್ಥೆಯನ್ನು ಪ್ರವೇಶಿಸಬಹುದೇ ಅಥವಾ ಇಲ್ಲವೇ ಎಂಬ ಬಗ್ಗೆ ಅನುಮಾನವಿತ್ತು. ಮೊದಲ ಬಾರಿಗೆ ನನಗೆ ನಾಯಿಗಳ ಕುರಿತಾದ ವರದಿ ದೊರೆತಾಗ ಆಶ್ಚರ್ಯವಾಯಿತು. ಹಾಗೆಯೇ ಮಾನವನ ಕುರಿತಾದ ವರದಿ ಸಿಕ್ಕಾಗ, ಮತ್ತಷ್ಟು ಆಶ್ಚರ್ಯವಾಯಿತು ಎಂದು ಹೇಳಿದರು.

5. ಈ ಸಂಶೋಧನೆಯಿಂದ ಮೈಕ್ರೋಪ್ಲಾಸ್ಟಿಕ್‌ಗಳು ಪರಿಸರದಲ್ಲಿ ಹೆಚ್ಚಿನ ಪ್ರಮಾಣದಲ್ಲಿದೆ. ಅವು ಮಾನವ ದೇಹದ ಅತ್ಯಂತ ಸೂಕ್ಷ್ಮ ಭಾಗಗಳಲ್ಲಿಯೂ ತಲುಪುತ್ತದೆ ಎಂಬುದು ಗಮನಕ್ಕೆ ಬರುತ್ತದೆ. ಪುರುಷರ ಫಲವತ್ತತೆಯ ಮೇಲೆ ಮೈಕ್ರೋಪ್ಲಾಸ್ಟಿಕ್‌ಗಳು ಯಾವ ಪರಿಣಾಮಗಳನ್ನು ಬೀರುತ್ತವೆ ಎಂಬುದನ್ನು ನಿರ್ಧರಿಸಲು ಹೆಚ್ಚಿನ ಸಂಶೋಧನೆಯ ಅಗತ್ಯವಿದೆ; ಆದರೆ ಸಂಶೋಧನೆಯು ಸಾರ್ವಜನಿಕ ಆರೋಗ್ಯ ಕಾಳಜಿಯನ್ನು ಮಾತ್ರ ಹೆಚ್ಚಿಸಿದೆ ಎಂದು ಹೇಳಿದರು.

ಸಂಪಾದಕೀಯ ನಿಲುವು

  • ಮೈಕ್ರೋಪ್ಲಾಸ್ಟಿಕ್‌ಗಳಿಂದ ತಾಯಿಯ ಎದೆಹಾಲಿನ ಮೇಲೆ ದುಷ್ಪರಿಣಾಮ ಬೀರುತ್ತದೆ, ಹಾಗೆಯೇ ಮಾನಸಿಕ ಆರೋಗ್ಯದ ಮೇಲೆಯೂ ನಕಾರಾತ್ಮಕ ಪರಿಣಾಮ ಬೀರುತ್ತವೆ ಎಂದು ಈ ಮೊದಲೇ ಸಂಶೋಧನೆಗಳು ನಡೆದಿದ್ದವು. ಈಗ ಪುರುಷರ ಫಲವತ್ತತೆಯ ಮೇಲೆ ಅದರ ಪರಿಣಾಮವಾಗುತ್ತಿದ್ದು, ಇದು ಮಾನುಕುಲಕ್ಕೆ ಅಪಾಯಕಾರಿಯಾಗಿದೆ. ಈ ಕುರಿತು ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಳ್ಳುವ ಆವಶ್ಯಕತೆಯಿದೆ !
  • ಮಾನವನು ಹೇಗೆ ವಿವಿಧ ಅತ್ಯಾದುನಿಕ ಸಂಶೋಧನೆಗಳನ್ನು ಕಂಡು ಹಿಡಿಯುತ್ತಿದ್ದಾನೆ ಅದೇ ರೀತಿ ಅವನ ಜೀವನಮಟ್ಟ ಅಧೋಗತಿಯನ್ನು ತಲುಪುತ್ತಿದೆ. ಮೈಕ್ರೋಪ್ಲಾಸ್ಟಿಕ್‌ಗಳ ಪರಿಣಾಮ ಅದರದೇ ಫಲಿತಾಂಶವೆಂದು ಹೇಳಬೇಕಾಗುವುದು. ಇದು ಆಧುನಿಕ ವಿಜ್ಞಾನದ ಮಾನವನ ಕೊಡುಗೆಯಾಗಿದೆ !