ಕ್ಯಾಮೆರಾ ಕಣ್ಣಲ್ಲಿ ಸರೆಯಾದ ಕಾರ್ಯಾಲಯದ ಭದ್ರತಾ ಸಿಬ್ಬಂದಿಯ ಮೇಲೆ ಭೂತದ ಕಾಟ ?

ಆರ್ಮೇನಿಯಾ (ಕೊಲಂಬಿಯಾ) ನಗರದ ಮಹಾಪೌರರ ಹೇಳಿಕೆ

  • ಕೊಲಂಬಿಯಾದಲ್ಲಿ ತಥಾಕಥಿತ ಪ್ರಗತಿಪರ ಸಂಘಟನೆಗಳು ಇರುತ್ತಿದ್ದರೆ ಅಲ್ಲಿಯೂ ಅಂಧಶ್ರಧ್ಧೆ ನಿರ್ಮೂಲನ ಕಾನೂನು ಜಾರಿಗೆ ತಂದು ಮಹಾಪೌರರನ್ನು ಬಂದಿಸಿ ಸೆರೆಮನೆಯಲ್ಲಿ ಹಾಕುವಂತೆ ಬೇಡಿಕೆಯನ್ನು ಮಾಡುತ್ತಿದ್ದರು.- ಸಂಪಾದಕ
  • ‘ಭೂತಗಳು ಅಸ್ತತ್ವದಲ್ಲಿ ಇಲ್ಲ’, ಎಂದು ಭಾರತದ ತಥಾಕಥಿತ ಬುದ್ಧಿ ಪ್ರಾಮಾಣ್ಯವಾದಿಗಳು ನಿಶ್ಚಯಿಸಿರುವುದರಿಂದ ಅವರು ಈ ವಿಷಯದ ಬಗ್ಗೆ ಸಂಶೋಧನೆಗೆ ಸಿದ್ಧರಿಲ್ಲ; ಆದರೆ ಸಂಶೋಧನಾ ವೃತ್ತಿಯ ಪಾಶ್ಚಿಮಾತ್ಯರು ಈ ವಿಷಯದಲ್ಲಿ ನಿರಂತರ ಸಂಶೋಧನೆಯ ನಿಲುವಿನಲ್ಲಿ ಇರುತ್ತಾರೆ. – ಸಂಪಾದಕ
ಜೋಸ್ ಮ್ಯಾನ್ಯುಯಲ್ ರಿಯೋಯ ಮೊರಾಲೆಸ್

ಬೋಗೋಟಾ (ಕೊಲೊಂಬಿಯ) – ಕೊಲಂಬಿಯಾದಲ್ಲಿ ಆರ್ಮೇನಿಯ ಎಂಬ ನಗರದ ಮಹಾಪೌರ ಜೋಸ್ ಮ್ಯಾನ್ಯುಯಲ್ ರಿಯೋಯ ಮೊರಾಲೆಸ್ ಇವರು ಒಂದು ಸಿಸಿಟಿವಿ ಚಿತ್ರೀಕರಣದ ವೀಡಿಯೋ ಫೇಸ್‌ಬುಕ್‌ನಲ್ಲಿ ಪ್ರಸಾರ ಮಾಡಿದರು. ಮಹಾಪೌರ ಮೊರಾಲೆಸ್ ಇವರು ‘ರಾತ್ರಿಯ ಸಮಯದಲ್ಲಿ ಒಂದು ಭೂತ ನನ್ನ ಕಾರ್ಯಾಲಯದ ಮೇಲೆ ದಾಳಿ ಮಾಡಿತು. ಅದು ಭದ್ರತಾ ಸಿಬ್ಬಂದಿಯನ್ನು ಥಳಿಸಿತು’, ಎಂದು ಹೇಳಿದ್ದಾರೆ. ‘ಈ ಅಸಾಮಾನ್ಯ ಶಕ್ತಿಯನ್ನು ತಡೆಯುವಲ್ಲಿ ಸ್ಥಳಿಯ ಬಿಷಪ್ ಮತ್ತು ಇತರ ಧಾರ್ಮಿಕ ನಾಯಕರನ್ನು ಕಾರ್ಯಾಲಯಕ್ಕೆ ಆಮಂತ್ರಿಸಲಿದ್ದೇವೆ’, ಎಂದು ಸಹ ಹೇಳಿದರು. (ಭೂತ ಬಾಧೆಯನ್ನು ದೂರ ಮಾಡುವ ಎಷ್ಟು ಉಪಾಯಗಳು ಹಿಂದೂ ಧರ್ಮದಲ್ಲಿವೆಯೋ ಅಷ್ಟು ಬೇರೆ ಯಾರಲ್ಲಿಯೂ ಇಲ್ಲ – ಸಂಪಾದಕ)

(ಸೌಜನ್ಯ : Danny Adivo)

೧. ಮಹಾಪೌರರು ಬಹಿರಂಗಪಡಿಸಿರುವ ಈ ವೀಡಿಯೋದಲ್ಲಿ ಅದೃಶ್ಯ ಶಕ್ತಿ ಭದ್ರತಾ ಸಿಬ್ಬಂದಿಯನ್ನು ಗೋಡೆಗೆ ಅಪ್ಪಳಿಸುತ್ತಿರುವುದು ಕಾಣುತ್ತಿದೆ. ಭದ್ರತಾ ಸಿಬ್ಬಂದಿಯ ಹತ್ತಿರ ಯಾರೂ ಇರಲಿಲ್ಲ. ಆದರೂ ಆತ ಗೋಡೆಗೆ ಅಪ್ಪಳಿಸಿ ನಂತರ ಭೂಮಿಯ ಮೇಲೆ ಬಿದ್ದಿರುವುದು ವೀಡಿಯೋದಲ್ಲಿ ಕಾಣುತ್ತಿದೆ.

೨. ಈ ವೀಡಿಯೋದ ಬಗ್ಗೆ ಅನೇಕರು ಸಂಶಯ ವ್ಯಕ್ತಪಡಿಸಿದ್ದರೆ, ಕೆಲವರು ‘ಈ ಘಟನೆ ಸತ್ಯ ಇರಬಹುದು’ ಎಂದು ಹೇಳಿ ಬೆಂಬಲಿಸಿದ್ದಾರೆ.