ಭಯೋತ್ಪಾದನೆಯನ್ನು ನಿಷೇಧಿಸಲು `ಬ್ರಿಕ್ಸ’ ದೇಶಗಳು ಒಟ್ಟಾಗಿ ಕೆಲಸ ಮಾಡಬಹುದು ! – ಭಾರತ

(ಬ್ರಿಕ್ಸ ದೇಶವೆಂದರೆ ಬ್ರೆಝಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾಗಳ ಸಮೂಹ)

ಜೋಹಾನ್ಸಬರ್ಗ (ದಕ್ಷಿಣ ಆಫ್ರಿಕಾ) – ವಿಶ್ವಸಂಸ್ಥೆಯ ಭಯೋತ್ಪಾದನಾ ನಿಗ್ರಹ ವ್ಯವಸ್ಥೆಯ ಅಡಿಯಲ್ಲಿ ಭಯೋತ್ಪಾದಕರು ಮತ್ತು ಅವರ ಪ್ರತಿನಿಧಿಗಳ ಪಟ್ಟಿಯನ್ನು ನಿರ್ಮಿಸಲು ಬ್ರಿಕ್ಸ ದೇಶ ಸಂಘಟಿತವಾಗಿ ಕೆಲಸ ಮಾಡಬಹುದು. ಅದರಲ್ಲಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ನಿರ್ಬಂಧಗಳ ಸಮಿತಿಯ ನಿರ್ಣಯವು ರಾಜಕಾರಣ ಮತ್ತು ದ್ವಿಮಿಖ ನೀತಿಯಿಂದ ಮುಕ್ತವಾಗಿರಬೇಕು ಎನ್ನುವುದು ಮಹತ್ವದ್ದಾಗಿದೆಯೆಂದು ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ ಡೋವಾಲ ಇವರು ಚೀನಾ ಮತ್ತು ಪಾಕಿಸ್ತಾನದ ಹೆಸರನ್ನು ಹೇಳದೆ ಸಭೆಯಲ್ಲಿ ಮಾತನಾಡಿದರು. ಇಲ್ಲಿ ಬ್ರಿಕ್ಸ ದೇಶಗಳ ರಾಷ್ಟ್ರೀಯ ಭದ್ರತಾ ಸಲಹೆಗಾರರ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು. ಇದರಲ್ಲಿ ಬ್ರೆಝಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾ ದೇಶಗಳು ಒಳಗೊಂಡಿವೆ.

ದೋವಲ್ ತಮ್ಮ ಮಾತನ್ನು ಮುಂದುವರಿಸುತ್ತಾ, ಭಯೋತ್ಪಾದನೆ ರಾಷ್ಟ್ರೀಯ ಶಾಂತಿ ಮತ್ತು ಭದ್ರತೆಗೆ ಇರುವ ಪ್ರಮುಖ ಬೆದರಿಕೆಗಳಲ್ಲಿ ಒಂದಾಗಿದೆ. ಅಫಘಾನಿಸ್ತಾನ ಮತ್ತು ಪಾಕಿಸ್ತಾನದಲ್ಲಿ ಭಯೋತ್ಪಾದಕ ಸಂಘಟನೆಗಳು ಭಯವಿಲ್ಲದೇ ಕಾರ್ಯಾಚರಣೆ ನಡೆಸುತ್ತಿವೆ ಎಂದು ಹೇಳಿದರು.