ದೇವಸ್ಥಾನದ ಗೋಡೆಗಳ ಮೇಲೆ ಬೈಬಲ್ಲಿನಲ್ಲಿನ ಮೂರ್ತಿ ಪೂಜೆ ವಿರೋಧದಲ್ಲಿನ ವಾಕ್ಯಗಳು ಕೂಡ ಬರೆದಿದ್ದರು !
ನವದೆಹಲಿ – ಅಮೇರಿಕಾ ಖಂಡದ ಹತ್ತಿರ ಇರುವ ದ್ವೀಪಗಳ ದೇಶವಾಗಿರುವ ತ್ರಿನಿದಾದ ಮತ್ತು ಟೋಬ್ಯಾಗೋದಲ್ಲಿನ ತ್ರಿನಿದಾದದಲ್ಲಿ ಹಿಂದೂಗಳ ೨ ದೇವಸ್ಥಾನದಲ್ಲಿ ವಿದ್ವಾಂಸಕೃತ್ಯ ನಡೆಸಿರುವ ಘಟನೆ ಕಳೆದ ವಾರದಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ. ಕಾಉವಾ ಮತ್ತು ಪೇನಲ ಈ ಪ್ರದೇಶದಲ್ಲಿ ಈ ಘಟನೆಗಳು ನಡೆದಿವೆ.
Two Hindu temples vandalised and idols smashed within days in Trinidad, Biblical verses written on Kali Mandir walls, Ganesh Mandir lootedhttps://t.co/rNoRnGyoU7
— OpIndia.com (@OpIndia_com) October 1, 2022
೧. ಕಾಉವಾ ದಲ್ಲಿನ ಕಾರ್ಲೀ ಬೆಯಲ್ಲಿ ಶ್ರೀ ಮಹಾಕಾಳಿ ದೇವಸ್ಥಾನದಲ್ಲಿ ದುಷ್ಕರ್ಮಿಗಳಿಂದ ಮೂರ್ತಿಯ ನಾಶ ಮಾಡಿದರು ಹಾಗೂ ಮೂರ್ತಿಯ ಮೇಲೆ ಆಲಿವ್ ಎಣ್ಣೆ ಸಹ ಸುರಿಯಲಾಗಿದೆ. ಇದರ ಜೊತೆಗೆ ದೇವಸ್ಥಾನದ ಗೋಡೆಗಳ ಮೇಲೆ ಬೈಬಲ್ಲಿನಲ್ಲಿನ ವಾಕ್ಯಗಳನ್ನು ಬರೆಯಲಾಗಿದೆ. ಈ ವಾಕ್ಯಗಳಲ್ಲಿ ಮೂರ್ತಿ ಪೂಜೆ ಮಾಡುವವರಿಗೆ ಎಚ್ಚರಿಕೆ ನೀಡಲಾಗಿದೆ. ಈ ಬಗ್ಗೆ ದೇವಸ್ಥಾನದ ಅರ್ಚಕರು ಪಂಡಿತ ಸತ್ಯಾನಂದ ಮಹಾರಾಜ್ ಇವರು, ಈ ಘಟನೆಯ ಬಗ್ಗೆ ಪೊಲೀಸ ಠಾಣೆಯಲ್ಲಿ ದೂರು ದಾಖಲಿಸಿದರು ಎಂದು ಹೇಳಿದರು.
೨. ಪೇನಲ ಪ್ರದೇಶದಲ್ಲಿನ ಶ್ರೀ ಗಣೇಶ ದೇವಸ್ಥಾನದಲ್ಲಿ ವಿದ್ವಾಂಸಕೃತ್ಯ ನಡೆಸಿ ಇತರ ಮೂರ್ತಿಗಳ ಮೇಲಿನ ವಸ್ತ್ರಗಳನ್ನು ತೆಗೆದು ಹಾಕಿದ್ದರು. ವಿದ್ವಾಂಸಕ ಕೃತ್ಯ ನಡೆಸುವವರು ದೇವಸ್ಥಾನದ ಹಿಂದಿನ ಬಾಗಿಲು ಮುರಿದು ಒಳಗೆ ನುಗ್ಗಿ ಅನಾಹುತ ನಡೆಸಿದ್ದಾರೆ. ಹೂಂಡಿ ಕೂಡ ಹಾನಿ ಮಾಡಿದ್ದಾರೆ. ಪೊಲೀಸರು, ಕಳ್ಳತನದ ಉದ್ದೇಶದಿಂದ ಈ ಘಟನೆ ನಡೆದಿರಬಹುದೆಂಬ ಅನುಮಾನವಿದೆ ಎಂದು ಹೇಳಿದರು.
ಸಂಪಾದಕೀಯ ನಿಲುವುಹಿಂದು ಬಹುಸಂಖ್ಯಾತ ಭಾರತದಲ್ಲಿ ಹಿಂದೂಗಳ ದೇವಸ್ಥಾನಗಳು ಧ್ವಂಸ ಮಾಡಲಾಗುತ್ತದ್ದರೇ ವಿದೇಶದಲ್ಲಿನ ಅಲ್ಪಸಂಖ್ಯಾತರಿರುವ ಹಿಂದೂಗಳ ದೇವಸ್ಥಾನಗಳು ಧ್ವಂಸ ಮಾಡಲಾಗುತ್ತದೆ, ಇದರಲ್ಲಿ ಆಶ್ಚರ್ಯವೇನು ಇಲ್ಲ ! ಈ ಪರಿಸ್ಥಿತಿ ಬದಲಾಯಿಸುವುದಕ್ಕೆ ಭಾರತವು ಇಸ್ರೈಲ್‌ನಂತೆ ತನ್ನ ವರ್ಚಸ್ಸು ಮತ್ತು ಭಯ ನಿರ್ಮಾಣ ಮಾಡುವುದು ಅವಶ್ಯಕವಾಗಿದೆ ! |