ಅಮೇರಿಕದಲ್ಲಿ ಬೂಸ್ಟರ್ ಡೋಸ್ ತೆಗೆದುಕೊಂಡರೂ ೧೪ ಜನರಿಗೆ ‘ಓಮಿಕ್ರಾನ್ ಸೋಂಕು !

ವಾಶಿಂಗ್ಟನ್ (ಅಮೇರಿಕಾ) – ಅಮೇರಿಕದಲ್ಲಿ ಕೊರೊನಾ ಪ್ರತಿಬಂಧಕ ಲಸಿಕೆಯ ಎರಡೂ ಡೋಸ್ ಹಾಗೂ ಬೂಸ್ಟರ್ ಡೋಸ್ ತೆಗೆದುಕೊಂಡ ಬಳಿಕವೂ ಕೆಲವರಿಗೆ ಕೊರೊನಾದ ಹೊಸ ರೂಪಾಂತರಿತ ‘ಓಮಿಕ್ರಾನ್ ಸೋಂಕು ತಗುಲಿದೆ. ಅಮೇರಿಕದ ‘ಸೆಂಟರ್ ಫಾರ್ ಡಿಸೀಜ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ ತನ್ನ ಹೇಳಿಕೆಯಲ್ಲಿ, ಇಲ್ಲಿಯವರೆಗೆ ಅಮೇರಿಕದಲ್ಲಿ ಓಮಿಕ್ರಾನ್ ಸೋಂಕಿನ ೪೩ ಪ್ರಕರಣಗಳು ಕಂಡು ಬಂದಿದ್ದು, ಅದರಲ್ಲಿ ೩೪ ಜನರು ಲಸಿಕೆಯ ಎರಡೂ ಡೋಸ್ ಪಡೆದುಕೊಂಡಿದ್ದರು, ೧೪ ಜನರು ‘ಬೂಸ್ಟರ್ ಡೋಸ್ ಕೂಡ ತೆಗೆದುಕೊಂಡಿದ್ದರು. ಅದರಲ್ಲಿಯೂ ೫ ಜನರು ೧೪ ದಿನಗಳ ಮೊದಲು ‘ಬೂಸ್ಟರ್ ಡೋಸ್ ತೆಗೆದುಕೊಂಡಿದ್ದರು. ಓಮಿಕ್ರಾನ್‌ನ ೪೩ ಸೋಂಕಿತರಲ್ಲಿ ೨೫ ಜನರ ವಯಸ್ಸು ೧೮ ರಿಂದ ೩೯ ವರ್ಷದ ಒಳಗಿದ್ದಾರೆ. ೧೪ ಜನರು ವಿದೇಶ ಪ್ರವಾಸವನ್ನು ಮಾಡಿದ್ದರು. ೬ ಜನರು ಈ ಮೊದಲು ಕೊರೊನಾ ಸೋಂಕಿನಿಂದ ಬಳಲಿದ್ದರು. ಅನೇಕರಲ್ಲಿ ಕೆಮ್ಮು, ಆಯಾಸ ಇಂತಹ ಸೌಮ್ಯ ಲಕ್ಷಣಗಳು ಕಂಡು ಬಂದಿದೆ’, ಎಂದಿದ್ದಾರೆ.