ಶ್ರೀ ರಾಮಮಂದಿರಕ್ಕಾಗಿ ೪೪ ಪದರದ ಅಡಿಪಾಯ ರಚನೆಯಾಗುತ್ತಿದೆ !
ಶ್ರೀ ರಾಮಜನ್ಮಭೂಮಿಯಲ್ಲಿ ಭವ್ಯವಾದ ಶ್ರೀ ರಾಮಮಂದಿರದ ಕೆಲಸವು ಭರದಿಂದ ಸಾಗಿದೆ. ಪ್ರಸ್ತುತ ದೇವಾಲಯದ ಅಡಿಪಾಯದ ಕೆಲಸ ನಡೆಯುತ್ತಿದೆ. ದೇವಾಲಯಕ್ಕೆ ೪೪ ಪದರದ ಅಡಿಪಾಯ ಹಾಕಲಾಗುತ್ತಿದೆ. ಈವರೆಗೆ ೬ ಪದರಗಳ ಕೆಲಸ ಪೂರ್ಣಗೊಂಡಿದೆ ಎಂದು ಶ್ರೀ ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‍ನ ಪ್ರಧಾನ ಕಾರ್ಯದರ್ಶಿ ಚಂಪತ ರಾಯ್ ಅವರು ಮಾಹಿತಿ ನೀಡಿದರು.