ಹಿಂದೂ ಜನಜಾಗೃತಿ ಸಮಿತಿಯ ‘ಹಿಂದೂ ಅಧಿವೇಶನ’, ಅದೇರೀತಿ ‘ಸನಾತನ ಪ್ರಭಾತ’ ಮತ್ತು ‘ಸನಾತನ ಶಾಪ್’ನ ಪುಟಗಳ ಮೇಲೆ ನಿರ್ಬಂಧ !

ಫೇಸ್‌ಬುಕ್‌ನ ಹಿಂದೂದ್ವೇಷ!

  • ಜಿಹಾದಿ ಭಯೋತ್ಪಾದಕ ಸಂಘಟನೆಗಳು, ಜಿಹಾದಿ ಭಯೋತ್ಪಾದಕರು, ಸಮಾಜದಲ್ಲಿ ದ್ವೇಷವನ್ನು ಹಬ್ಬಿಸುವ ನಾಯಕರು ಮುಂತಾದವರ ಪುಟಗಳನ್ನು ಬಂದ್ ಮಾಡುವ ಧೈರ್ಯವನ್ನು ಫೇಸ್‌ಬುಕ್ ತೋರಿಸುವುದಿಲ್ಲ; ಆದರೆ ಕಾನೂನು ಮಾರ್ಗದಿಂದ ರಾಷ್ಟ್ರ ಮತ್ತು ಧರ್ಮಗಳ ಕಾರ್ಯ ಮಾಡುವ ‘ಹಿಂದೂ ಜನಜಾಗೃತಿ ಸಮಿತಿ’ ಮತ್ತು ‘ಸನಾತನ ಪ್ರಭಾತ’ ಇವುಗಳ ಪುಟಗಳನ್ನು ತಕ್ಷಣ ಬಂದ್ ಮಾಡುತ್ತಿದೆ, ಇದರಿಂದ ಫೇಸ್‌ಬುಕ್‌ನ ಹಿಂದೂದ್ವೇಷ ಬೆಳಕಿಗೆ ಬರುತ್ತದೆ !
  • ಹಿಂದೂ ರಾಷ್ಟ್ರಪ್ರೇಮಿ ಮತ್ತು ಧರ್ಮಪ್ರೇಮಿಗಳು ಇದನ್ನು ನ್ಯಾಯಸಮ್ಮತ ರೀತಿಯಲ್ಲಿ ಖಂಡಿಸುತ್ತಾ ಫೇಸ್‌ಬುಕ್‌ನಲ್ಲಿ ಈ ಪುಟಗಳನ್ನು ಪುನಃ ಪ್ರಾರಂಭಿಸಲು ಒತ್ತಡ ಹೇರಬೇಕು !
  • ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಮಾತನಾಡುವವರು ಹಾಗೂ ಕಮ್ಯುನಿಸ್ಟರು ಅಥವಾ ಜಾತ್ಯತೀತವಾದಿಗಳು ಯಾವುದಾದರೂ ಪತ್ರಿಕೆ ಅಥವಾ ಮಾಧ್ಯಮಗಳ ಮೇಲೆ ಅಧಿಕೃತ ಕ್ರಮ ಕೈಗೊಂಡಾಗ ಕೂಗಾಡುತ್ತಾರೆ; ಆದರೆ ಈಗ ಅವರು ‘ಚ’ಕಾರವನ್ನೂ ಎತ್ತುವುದಿಲ್ಲ್ಲ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ! ಇದರಿಂದ ಮತ್ತೊಮ್ಮೆ ಅವರ ದ್ವಿಮುಖ ನೀತಿ ಮತ್ತು ಹಿಂದೂದ್ವೇಷ ಸ್ಪಷ್ಟವಾಗುತ್ತದೆ !

ಮುಂಬಯಿ – ಹಿಂದೂ ಜನಜಾಗೃತಿ ಸಮಿತಿಯ ‘ಹಿಂದೂ ಅಧಿವೇಶನ’, ‘ಸನಾತನ ಪ್ರಭಾತ’ ನಿಯತಕಾಲಿಕೆಯ ‘ಸನಾತನ ಪ್ರಭಾತ’ ಮತ್ತು ಸನಾತನ ಸಾತ್ತ್ವಿಕ ಉತ್ಪನ್ನಗಳನ್ನು ಮಾರಾಟ ಮಾಡುವ ‘ಸನಾತನ ಶಾಪ್’ ನ ಫೇಸ್‌ಬುಕ್ ಪುಟಗಳನ್ನು ಬಂದ್ ಮಾಡಲಾಗಿದೆ (ಅನ್‌ಪಬ್ಲಿಶ್). ವಿಶೇಷವೆಂದರೆ ‘ಸನಾತನ ಪ್ರಭಾತ’ ಮತ್ತು ‘ಸನಾತನ ಶಾಪ್’ ಇವುಗಳ ಪುಟಗಳನ್ನು ಸಂಪೂರ್ಣವಾಗಿ ತೆಗೆದುಹಾಕಲಾಗಿದೆ. ಈ ಬಗ್ಗೆ ಹಿಂದೂ ಜನಜಾಗೃತಿ ಸಮಿತಿ ಅಥವಾ ಸನಾತನ ಪ್ರಭಾತಕ್ಕೆ ಯಾವುದೇ ಮುನ್ಸೂಚನೆ ಅಥವಾ ಕಾರಣವನ್ನು ಫೇಸ್‌ಬುಕ್ ನೀಡಿಲ್ಲ. ‘ಹಿಂದೂ ಅಧಿವೇಶನ’ ಈ ಫೇಸ್‌ಬುಕ್ ಪುಟದ ಸದಸ್ಯರ ಸಂಖ್ಯೆ ೧೪ ಲಕ್ಷ ೪೫ ಸಾವಿರದಷ್ಟು ಇತ್ತು. ಈ ಪುಟವು ‘ವೆರಿಫೈಡ್ ಪೇಜ್’(ಸಂಘಟನೆಯ ಅಧಿಕೃತವಾಗಿ ಅನುಮೋದನೆ ಇರುವ ಪುಟ) ಆಗಿದೆ. ಇದರ ಹೊರತಾಗಿ ಸಮಿತಿಯ ರಾಜ್ಯ ಮಟ್ಟದ ಪುಟಗಳೂ ಕಾರ್ಯನಿರ್ವಹಿಸುತ್ತಿವೆ. ಅದರಲ್ಲಿ ಒಟ್ಟು ೩೪ ರಲ್ಲಿ ೧೮ ಪುಟಗಳನ್ನು ಸಹ ಬಂದ್ ಮಾಡಲಾಗಿದೆ. ಈ ಎಲ್ಲಾ ಪುಟಗಳಿಂದ, ರಾಷ್ಟ್ರ ಮತ್ತು ಧರ್ಮದ ಬಗೆಗಿನ ಘಟನಾವಳಿಗಳು ಅದೇರೀತಿ ಧರ್ಮಶಿಕ್ಷಣದ ನಿಯಮಿತ ‘ಪೋಸ್ಟ್’ ಮಾಡಲಾಗುತ್ತಿತ್ತು. ಈ ಎಲ್ಲ ‘ಪೋಸ್ಟ್’ ಕಾನೂನಿನ ಚೌಕಟ್ಟಿನೊಳಗೆ ಮಾಡಲಾಗುತ್ತಿದೆ ಎಂಬುದು ಸಮಿತಿಯು ಅಭಿಪ್ರಾಯವನ್ನು ವ್ಯಕ್ತಪಡಿಸಿದೆ. ಫೇಸ್‌ಬುಕ್‌ನ ಈ ಒತ್ತಡದ ಪರಿಣಾಮವಾಗಿ ೧೪ ಲಕ್ಷದ ೪೫ ಸಾವಿರ ಸದಸ್ಯರು ಧರ್ಮಶಿಕ್ಷಣ ಮತ್ತು ರಾಷ್ಟ್ರ ಮತ್ತು ಧರ್ಮ ವಾರ್ತೆಯಿಂದ ವಂಚಿತರಾಗಿದ್ದಾರೆ. ಪುಟವನ್ನು ಮರುಪ್ರಾರಂಭಿಸಲು ಸಮಿತಿಯು ಫೇಸ್‌ಬುಕ್‌ಗೆ ಪತ್ರವನ್ನು ಕಳುಹಿಸಿದೆ; ಆದರೆ ಉತ್ತರ ಇನ್ನೂ ಬಂದಿಲ್ಲ. ಅದೇರೀತಿ ಇದರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಆರಂಭಿಸಲಾಗಿದೆ ಎಂದು ಸಮಿತಿ ವತಿಯಿಂದ ಹೇಳಲಾಗಿದೆ.

 

ನಿಯತಕಾಲಿಕೆ ‘ಸನಾತನ ಪ್ರಭಾತ’ನ ‘ಫೇಸ್‌ಬುಕ್ ಪೇಜ್’ದಲ್ಲಿ ೭ ಸಾವಿರದ ೫೦೦ ಕ್ಕೂ ಹೆಚ್ಚು ಸದಸ್ಯರು ಇದ್ದರು. ಈ ಪುಟದಿಂದ, ರಾಷ್ಟ್ರ ಮತ್ತು ಧರ್ಮದ ಮೇಲಿನ ಆಘಾತಗಳು, ಹಾಗೆಯೇ ಧರ್ಮಶಿಕ್ಷಣಗಳು ಮತ್ತು ಸಂತರ ವಿಚಾರಗಳು ಇತ್ಯಾದಿಗಳು ನಿಯಮಿತವಾಗಿ ಪ್ರಸಾರವಾಗುತ್ತಿದ್ದವು.

ಫೇಸ್‌ಬುಕ್‌ನಿಂದ ಉತ್ತರವಿಲ್ಲ !

‘ಸನಾತನ ಶಾಪ್’ ಪುಟದ ಸದಸ್ಯರ ಸಂಖ್ಯೆ ೫ ಸಾವಿರದ ೬೦೦ ಇತ್ತು. ಈ ಪುಟದಿಂದ ಸನಾತನ ವಿವಿಧ ವಿಷಯಗಳ ಗ್ರಂಥಗಳ ಬಗ್ಗೆ ಪೋಸ್ಟ್‌ಗಳನ್ನು ಮಾಡಲಾಗುತ್ತಿತ್ತು. ಇವುಗಳಲ್ಲಿ ಆಯುರ್ವೇದ, ಅಧ್ಯಾತ್ಮ, ಸಾಧನೆ, ಆಪತ್ಕಾಲ, ಹಬ್ಬ-ಧಾರ್ಮಿಕ ಉತ್ಸವಗಳು, ಬಾಲಸಂಸ್ಕಾರ ಇತ್ಯಾದಿ ವಿಷಯಗಳಿವೆ. ‘ಶಾಪ್’ನ ಪುಟವನ್ನು ಫೇಸ್‌ಬುಕ್‌ನಿಂದ ತೆಗೆದುಹಾಕಲಾಗಿದೆ. ಈ ಪುಟವನ್ನು ಮರುಪ್ರಾರಂಭಿಸಲು ಸನಾತನದಿಂದ ಫೇಸ್‌ಬುಕ್‌ಗೆ ಪತ್ರ ಕಳುಹಿಸಲಾಗಿದೆ; ಆದರೆ ಇದುವರೆಗೆ ಫೇಸ್‌ಬುಕ್‌ನಿಂದ ಯಾವುದೇ ಉತ್ತರ ಬಂದಿಲ್ಲ.

೨೦೧೨ ರಲ್ಲಿಯೂ ಹಿಂದೂ ಜನಜಾಗೃತಿ ಸಮಿತಿಯ ಅಧಿಕೃತ ‘ಪೇಜ್’ವನ್ನು ಯಾವುದೇ ಕಾರಣ ನೀಡದೆ ಬಂದ್ ಮಾಡಲಾಗಿತ್ತು. ಕಳೆದ ವರ್ಷ ಸನಾತನ ಸಂಸ್ಥೆಯ ಪುಟ, ಜೊತೆಗೆ ಹಿಂದುತ್ವನಿಷ್ಠ ಶಾಸಕ ಟಿ. ರಾಜಾಸಿಂಗ್ ಅವರ ಅಧಿಕೃತ ಫೇಸ್‌ಬುಕ್ ಪುಟವನ್ನು ಯಾವುದೇ ಕಾರಣವನ್ನು ನೀಡದೆ ಫೇಸ್‌ಬುಕ್ ಬಂದ್ ಮಾಡಿತ್ತು. ಹಿಂದುತ್ವನಿಷ್ಠ ಸಂಪಾದಕ ಶ್ರೀ. ಸುರೇಶ ಚವಾಣಕೆ ಅವರ ‘ಸುದರ್ಶನ್ ನ್ಯೂಸ್’ನ ‘ಫೇಸ್‌ಬುಕ್ ಪೇಜ್’ಅನ್ನು ಸ್ವಲ್ಪ ಸಮಯದ ಹಿಂದೆ ಬಂದ್ ಮಾಡಲಾಗಿತ್ತು.