ಚೀನಾ ತನ್ನ ಸೈನಿಕರ ಸಾವಿನ ಸಂಖ್ಯೆಯನ್ನು ಎಷ್ಟೇ ಮುಚ್ಚಿಟ್ಟರೂ, ಜಗತ್ತಿಗೆ ಸತ್ಯ ತಿಳಿದಿದೆ ಎಂಬುದು ಗಮನದಲ್ಲಿಡಬೇಕು !
ಬೀಜಿಂಗ್ (ಚೀನಾ) – ಕಳೆದ ವರ್ಷ ಲಡಾಖ್‍ನ ಗಲ್ವಾನ್ ಕಣಿವೆಯಲ್ಲಿ ಭಾರತೀಯ ಮತ್ತು ಚೀನಾದ ಸೈನಿಕರ ನಡುವಿನ ಘರ್ಷಣೆಯಲ್ಲಿ ಮೃತಪಟ್ಟ ಚೀನಾದ ಸೈನಿಕರ ಸಂಖ್ಯೆಯ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಬ್ಲಾಗರ್ ನನ್ನು ಚೀನಾ ಬಂಧಿಸಿದೆ. ಆತನಿಗೆ ೮ ತಿಂಗಳು ಶಿಕ್ಷೆ ವಿಧಿಸಲಾಗಿದೆ. ಚೌ ಜಿಮ್ಮಿಂಗ್ ಎಂದು ಬ್ಲಾಗರನ ಹೆಸರಾಗಿದ್ದೂ ಆತನ ಮೇಲೆ ‘ಹುತಾತ್ಮರ ಅವಮಾನ’ ಮಾಡಿದ ಎಂದು ಆರೋಪಿಸಲಾಗಿದೆ. ಚೌ ಅವರು ತಮ್ಮ ಬ್ಲಾಗ್‍ನಲ್ಲಿ, ‘ಭಾರತೀಯ ಸೈನಿಕರಿಂದ ಚೀನಾದ ಸೈನಿಕರು ಭಯಭೀತರಾಗಿದ್ದರು ಮತ್ತು ಅವರನ್ನು ಎದುರಿಸಲು ಸಿದ್ಧರಿರಲಿಲ್ಲ.’ ಈ ಸಂಘರ್ಷದಲ್ಲಿ ಕೇವಲ ನಾಲ್ಕು ಚೀನಾದ ಸೈನಿಕರು ಮಾತ್ರ ಸಾವನ್ನಪ್ಪಿದ್ದಾರೆ ಎಂದು ಚೀನಾ ಅಧಿಕೃತವಾಗಿ ಘೋಷಿಸಿದೆ; ಆದರೆ ಕೆಲವು ವಿದೇಶಿ ಮಾಧ್ಯಮಗಳು ೪೫ ಕ್ಕೂ ಹೆಚ್ಚು ಚೀನಾದ ಸೈನಿಕರನ್ನು ಕೊಲ್ಲಲಾಗಿದೆ ಎಂದು ಹೇಳಿಕೊಂಡಿವೆ. ಎಂದು ಬರೆದಿದ್ದಾರೆ.
ಗಲ್ವಾನ್ ಕಣಿವೆಯಲ್ಲಿ 40 ಚೀನಾ ಯೋಧರು ಹತ: ಮಾಹಿತಿ ಬಿಚ್ಚಟ್ಟಾತನಿಗೆ 8 ತಿಂಗಳು ಜೈಲು!#GalwanValley #China #Indiahttps://t.co/YCLE4ZHKkJ
— Asianet Suvarna News (@AsianetNewsSN) June 1, 2021