ಶ್ರೀ ರಾಮಮಂದಿರಕ್ಕಾಗಿ ೪೪ ಪದರದ ಅಡಿಪಾಯ ರಚನೆಯಾಗುತ್ತಿದೆ !

ಅಯೋಧ್ಯೆ (ಉತ್ತರ ಪ್ರದೇಶ) – ಶ್ರೀ ರಾಮಜನ್ಮಭೂಮಿಯಲ್ಲಿ ಭವ್ಯವಾದ ಶ್ರೀ ರಾಮಮಂದಿರದ ಕೆಲಸವು ಭರದಿಂದ ಸಾಗಿದೆ. ಪ್ರಸ್ತುತ ದೇವಾಲಯದ ಅಡಿಪಾಯದ ಕೆಲಸ ನಡೆಯುತ್ತಿದೆ. ದೇವಾಲಯಕ್ಕೆ ೪೪ ಪದರದ ಅಡಿಪಾಯ ಹಾಕಲಾಗುತ್ತಿದೆ. ಈವರೆಗೆ ೬ ಪದರಗಳ ಕೆಲಸ ಪೂರ್ಣಗೊಂಡಿದೆ ಎಂದು ಶ್ರೀ ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‍ನ ಪ್ರಧಾನ ಕಾರ್ಯದರ್ಶಿ ಚಂಪತ ರಾಯ್ ಅವರು ಮಾಹಿತಿ ನೀಡಿದರು. ಅವರು ಕೆಲಸ ನೋಡಲು ಇಲ್ಲಿಗೆ ಬಂದಾಗ ‘ದೇವಾಲಯದ ಅಡಿಪಾಯದ ಕೆಲಸ ಮುಂದಿನ ಆಗಸ್ಟ್ ವೇಳೆಗೆ ಪೂರ್ಣಗೊಳ್ಳುತ್ತದೆ’, ಎಂದು ಹೇಳಿದ್ದಾರೆ.

೧. ‘ತೌಕ್ತೆ’ ಮತ್ತು ‘ಯಾಸ್’ ಚಂಡಮಾರುತಗಳಿಂದ ಉಂಟಾದ ಮಳೆಯಿಂದ ಕೆಲವು ದಿನ ಇಲ್ಲಿ ಕೆಲಸ ನಿಲ್ಲಿಸಲಾಗಿತ್ತು. ಇದು ಜೂನ್ ೧ ರಿಂದ ಮತ್ತೆ ಆರಂಭವಾಗಿದೆ.

೨. ಶ್ರೀ ರಾಮಮಂದಿರದ ಅಡಿಪಾಯಕ್ಕಾಗಿ ಉತ್ಖನನದಿಂದ ತೆಗೆದಿದ್ದ ಮಣ್ಣನ್ನು ಮನೆಮನೆಗಳಿಗೆ ಸಾಗಿಸುವ ಕೆಲಸವನ್ನು ಪ್ರಾರಂಭಿಸಲಾಗಿತ್ತು. ಪ್ರತಿದಿನ ರಾಮಲಲ್ಲಾದ ದರ್ಶನ ಮಾಡಲು ಬರುವ ಭಕ್ತರು ಇಲ್ಲಿಂದ ಮಣ್ಣನ್ನು ಮನೆಗೆ ತೆಗೆದುಕೊಂಡು ಹೋಗುತ್ತಿದ್ದರು; ಆದರೆ ಕೊರೊನಾದಿಂದಾಗಿ ಕಳೆದ ಕೆಲವು ದಿನಗಳಿಂದ ಭಕ್ತರು ಬರುವುದನ್ನು ನಿಲ್ಲಿಸಿದ್ದಾರೆ.