ಗ್ವಾಂಗದೊಂಗ ನಗರದಲ್ಲಿ ಸಂಚಾರ ನಿಷೇಧ
ಬೀಜಿಂಗ್ (ಚೀನಾ) – ಕೊರೊನಾ ಆರಂಭವಾದ ಚೀನಾದಲ್ಲಿ ಕೊರೋನಾ ಸೋಂಕು ಮತ್ತೆ ಹರಡುತ್ತಿದೆ. ಕೊರೋನಾ ರೋಗಿಗಳು ಮತ್ತೆ ಕಾಣಿಸಿಕೊಂಡಿದ್ದರಿಂದ ಚೀನಾದ ಗ್ವಾಂಗದೊಂಗ ಪ್ರದೇಶದಲ್ಲಿ ಹಲವಾರು ನಿರ್ಬಂಧಗಳನ್ನು ಹೇರಲಾಗಿದೆ.
Covid-19 in China: parts of Guangzhou city shut down as province battles latest outbreak https://t.co/4Dn5CrSZW6
— SCMP News (@SCMPNews) May 29, 2021
೧. ರೈಟರ್ಸ್ ಪ್ರಕಾರ, ಮೇ ೩೧ ರಂದು ಚೀನಾದಲ್ಲಿ ೨೩ ಹೊಸ ಕೊರೊನಾ ಪೀಡಿತರು ಕಂಡುಬಂದಿದ್ದಾರೆ. ಅದರ ಹಿಂದಿನ ದಿನ, ೨೭ ಹೊಸ ರೋಗಿಗಳು ಕಂಡುಬಂದಿದ್ದಾರೆ. ಈ ಪೈಕಿ ೧೨ ರೋಗಿಗಳು ದಕ್ಷಿಣ ಗ್ವಾಂಗದೊಂಗ ಪ್ರದೇಶದವರಾಗಿದ್ದಾರೆ. ಈ ಪ್ರಾಂತ್ಯವು ಹಾಂಗ್ ಕಾಂಗ್‍ನ ಹತ್ತಿರದಲ್ಲಿದೆ. ಆದ್ದರಿಂದ ಈ ಪ್ರದೇಶದಲ್ಲಿ ಸಂಚಾರ ನಿಷೇಧದಂತಹ ಸ್ಥಿತಿ ಇದೆ. ಈ ಪ್ರಾಂತ್ಯದ ರಾಜಧಾನಿಯಾದ ಗ್ವಾಂಗಝೂನಲ್ಲಿ ಸಂಚಾರವನ್ನು ನಿಷೇಧಿಸಲಾಗಿದೆ.
೨. ಚೀನಾದ ಸರಕಾರಿ ವರ್ತಮಾನಪತ್ರಿಕೆ ಗ್ಲೊಬಲ ಟೈಮ್ಸ್ ತನ್ನ ವರದಿಯಲ್ಲಿ, ಗ್ವಾಂಗಝೂನಲ್ಲಿ ಕೊರೋನಾ ಸೋಂಕು ವೇಗವಾಗಿ ಹರಡುತ್ತಿದೆ; ಆದ್ದರಿಂದ ಅಲ್ಲಿಯ ಮಾರುಕಟ್ಟೆಗಳು, ಮಕ್ಕಳ ಆರೈಕೆ ಕೇಂದ್ರಗಳು ಮತ್ತು ಮನರಂಜನಾ ಕೇಂದ್ರಗಳನ್ನು ಮುಚ್ಚಲಾಗಿದೆ. ಉಪಾಹಾರಗೃಹಗಳು, ಶಾಲೆಗಳು ಇತ್ಯಾದಿಗಳನ್ನು ಮುಚ್ಚಲಾಗಿದೆ ಎಂದು ತಿಳಿಸಿದೆ.