ಸೈಫೈ (ಉತ್ತರ ಪ್ರದೇಶ) ದ ಮದ್ಯದಂಗಡಿಗಳ ಹೊರಗೆ ‘ಲಸಿಕೆ ತೆಗೆದುಕೊಂಡವರಿಗೆ ಮಾತ್ರ ಮದ್ಯ ಸಿಗುವುದು’ ಎಂಬ ಸೂಚನೆ !

‘ರೋಗಕ್ಕಿಂತ ಚಿಕಿತ್ಸೆ ಭಯಾನಕ’ ಎಂಬಂತೆ ಇದೆ ! ಇದಕ್ಕಿಂತ ಮದ್ಯದಂಗಡಿಗಳನ್ನು ಮುಚ್ಚಿದರೆ, ಅನೇಕ ಸಮಸ್ಯೆಗಳು ಬಗೆಹರಿಯಬಹುದು, ಎಂದು ಆಡಳಿತವು ಏಕೆ ಅರಿತುಕೊಳ್ಳುವುದಿಲ್ಲ ?

ಸೈಫೈ (ಉತ್ತರ ಪ್ರದೇಶ) – ಇಲ್ಲಿಯ ಮದ್ಯದ ಅಂಗಡಿಯ ಮುಂದೆ ‘ವ್ಯಾಕ್ಸಿನೇಷನ್ ತೆಗೆದುಕೊಂಡಿರುವ ಪ್ರಮಾಣಪತ್ರವಿಲ್ಲದಿದ್ದರೆ, ನಿಮಗೆ ಮದ್ಯ ಸಿಗುವುದಿಲ್ಲ’, ಎಂಬ ಸೂಚನೆಯನ್ನು ಹಾಕಲಾಗಿದೆ. ಹೆಚ್ಚುವರಿ ಜಿಲ್ಲಾಧಿಕಾರಿ ಹೆಮಕುಮಾರ ಸಿಂಗ ಅವರ ಆದೇಶನುಸಾರ ಅಂಗಡಿಗಳ ಹೊರಗೆ ಸೂಚನೆ ಹಾಕಲಾಗಿದೆ. ಅಲಿಗಡದಲ್ಲಿ ವಿಷಕಾರಿ ಮದ್ಯ ಸೇವನೆಯಿಂದ ಮೃತಪಟ್ಟ ನಂತರ ಈ ಸೂಚನೆಯನ್ನು ಹಾಕಲಾಗಿದೆ. ಮೇ ತಿಂಗಳ ಆರಂಭದಲ್ಲಿ, ಅಲಿಗಡನಲ್ಲಿ ೨೫ ಜನರು ವಿಷಕಾರಿ ಮದ್ಯ ಸೇವಿಸಿ ಸಾವನ್ನಪ್ಪಿದರು.