ಜಗತ್ತಿನಾದ್ಯಂತ ೧೧೦ ಕೋಟಿ ಜನರು ಧೂಮಪಾನ ಮಾಡುತ್ತಾರೆ !

ಧೂಮಪಾನ ಸಂಬಂಧಿತ ಕಾಯಿಲೆಗಳಿಂದ ೫ ಪುರುಷರಲ್ಲಿ ಒಬ್ಬರ ಮೃತ್ಯುವಾಗುತ್ತದೆ !

ವಿಶ್ವದ ಯಾವುದೇ ದೇಶವು ತಂಬಾಕಿನಿಂದ ಬರುವ ಆದಾಯದ ಬಗ್ಗೆ ವಿಚಾರ ಮಾಡಿ ತಂಬಾಕು ಸಂಬಂಧಿತ ಉತ್ಪನ್ನಗಳನ್ನು ನಿಷೇಧಿಸುವುದಿಲ್ಲ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ ! ಅಲ್ಲದೆ, ಭಾರತದಲ್ಲಿ ಇಲ್ಲಿಯವೆರಗಿನ ರಾಜಕಾರಣಿಗಳು ಜನರಿಗೆ ಸಾಧನೆಯನ್ನು ಕಲಿಸಲಿಲ್ಲ ಹಾಗಾಗಿ ಜನರು ಮದ್ಯ, ತಂಬಾಕು ಇತ್ಯಾದಿಗಳ ವ್ಯಸನಗಳಿಗೆ ಬಲಿಯಾಗಿದ್ದಾರೆ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ !

ನವ ದೆಹಲಿ – ಜಗತ್ತಿನಾದ್ಯಂತ ೧೧೦ ಕೋಟಿ ಜನರು ಧೂಮಪಾನ ಮಾಡುತ್ತಾರೆ. ೧೯೯೦ ರ ನಂತರ, ಜಗತ್ತಿನಾದ್ಯಂತ ಧೂಮಪಾನ ಮಾಡುವವರ ಸಂಖ್ಯೆ ೧೫ ಕೋಟಿಯಷ್ಟು ಹೆಚ್ಚಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಈ ಸಂಖ್ಯೆ ೧೩೦ ಕೋಟಿಗಿಂತ ಹೆಚ್ಚು ಇದೆ. ಪ್ರತಿ ಐದು ಪುರುಷರಲ್ಲಿ ಒಬ್ಬರು ಧೂಮಪಾನ ಸಂಬಂಧಿತ ಕಾಯಿಲೆಗಳಿಂದ ಸಾಯುತ್ತಾರೆ. ಹೊಸ ಅಧ್ಯಯನದಲ್ಲಿ ಈ ಅಂಶ ಬೆಳಕಿಗೆ ಬಂದಿದೆ. ಸಂಶೋಧಕರು ೨೦೪ ದೇಶಗಳ ಅಂಕಿಅಂಶಗಳನ್ನು ವಿಶ್ಲೇಷಿಸುವ ಮೂಲಕ ಈ ತೀರ್ಮಾನಕ್ಕೆ ಬಂದಿದ್ದಾರೆ.

ಅಧ್ಯಯನ ಪ್ರಕಲ್ಪದ ಮುಖ್ಯಸ್ಥ ಮಾರಿಸಾ ರೆಟಸ್ಮಾ ಇವರು, ಜಗತ್ತಿನಾದ್ಯಂತ ಯುವಕರು ವ್ಯಸನಿಯಾಗಿರುವುದು ಕಂಡುಬರುತ್ತದೆ. ೨೦೧೯ ರಲ್ಲಿ ಸುಮಾರು ೮೦ ಲಕ್ಷ ಜನರು ಧೂಮಪಾನದಿಂದ ಸಾವನ್ನಪ್ಪಿದ್ದರು. ಧೂಮಪಾನದಿಂದ ಹೃದ್ರೋಗವಾಗಿ ಸಾವನ್ನಪ್ಪುವವರ ಸಂಖ್ಯೆ ೧೦ ಲಕ್ಷ ೭೦ ಸಾವಿರಕ್ಕಿಂತಲೂ ಹೆಚ್ಚಿದೆ. ಶ್ವಾಸನಾಳದ ಮತ್ತು ಶ್ವಾಸಕೋಶದ ಕ್ಯಾನ್ಸರ್ ನಿಂದ ೧೦ ಲಕ್ಷ ೩೦ ಸಾವಿರ ಜನರು ಸಾವನ್ನಪ್ಪಿದ್ದಾರೆ. ಸುಮಾರು ೧೦ ಲಕ್ಷ ಜನರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.