ಆಂಧ್ರಪ್ರದೇಶ ಸರಕಾರ ಮತ್ತು ಪೊಲೀಸರಿಗೆ ಚಾಟಿ ಬೀಸಿದ ಸರ್ವೋಚ್ಚ ನ್ಯಾಯಾಲಯ !

ಹಿಂದುತ್ವನಿಷ್ಠ ಸಂಸದ ರಘುರಾಮ ಕೃಷ್ಣಮ್ ರಾಜು ಅವರ ತಥಾಕಥಿತ ಆಕ್ಷೇಪಾರ್ಹ ಭಾಷಣವನ್ನು ಪ್ರಸಾರ ಮಾಡಿದ್ದಕ್ಕಾಗಿ ೨ ಸುದ್ದಿ ಚಾನೆಲ್‍ಗಳ ಮೇಲೆ ದೇಶದ್ರೋಹದ ಪ್ರಕರಣ ದಾಖಲು !

ದೇಶದ್ರೋಹದ ವ್ಯಾಖ್ಯಾನವನ್ನು ನಿರ್ಧರಿಸುವ ಸಮಯ ಬಂದಿದೆ ಎಂದು ಸರ್ವೋಚ್ಚ ನ್ಯಾಯಾಲಯದ ಅಭಿಪ್ರಾಯ !

ವೈ.ಎಸ್.ಆರ್. ಕಾಂಗ್ರೆಸ್ ಸರಕಾರದ ಕ್ರೈಸ್ತಪ್ರೇಮವನ್ನು ಬಹಿರಂಗಪಡಿಸಿದ ತನ್ನದೇ ಪಕ್ಷದ ಸಂಸದನನ್ನು ಅಧಿಕಾರವನ್ನು ದುರುಪಯೋಗಿಸಿ ಬಂಧಿಸಿತು. ಇದು ಸರಕಾರದ ಮೊಗಲ್‍ಶಾಹಿ ಆಗಿದ್ದು ಇದು ಪ್ರಜಾಪ್ರಭುತ್ವಕ್ಕೆ ಮಾಡಿದ ಅವಮಾನವೇ ಆಗಿದೆ. ಇದಕ್ಕಾಗಿ ನ್ಯಾಯಾಲಯವು ಸಂಬಂಧಪಟ್ಟವರನ್ನು ಶಿಕ್ಷಿಸಬೇಕು !

ನವ ದೆಹಲಿ – ಸರಕಾರವನ್ನು ಟೀಕಿಸುವುದು ದೇಶದ್ರೋಹವಲ್ಲ. ಸರಕಾರದ ಟೀಕೆಗಳನ್ನು ದೇಶದ್ರೋಹದ ಕೃತ್ಯವೆಂದು ಪರಿಗಣಿಸಲಾಗುವುದಿಲ್ಲ. ದೇಶದ್ರೋಹದ ವ್ಯಾಖ್ಯಾನವನ್ನು ನಿರ್ಧರಿಸುವ ಸಮಯ ಬಂದಿದೆ ಎಂದು ಸರ್ವೋಚ್ಚ ನ್ಯಾಯಾಲಯವು ಆಂಧ್ರಪ್ರದೇಶ ಸರಕಾರ ಮತ್ತು ಪೊಲೀಸರ ವಿರುದ್ಧ ಚಾಟಿ ಬೀಸಿದೆ. ಆಂಧ್ರಪ್ರದೇಶದಲ್ಲಿ ಎರಡು ಸ್ಥಳೀಯ ತೆಲುಗು ಸುದ್ದಿ ವಾಹಿನಿಗಳಾದ `ಟಿವಿ ೫’ ಮತ್ತು ‘ಎಬಿಎನ್ ಆಂಧ್ರ ಜ್ಯೋತಿ’ಯ ವಿರುದ್ಧ ದೇಶದ್ರೋಹದ ಕಲಂನ ಅಡಿಯಲ್ಲಿ ದೂರು ದಾಖಲಿಸಲಾಗಿದೆ. ಈ ಆರೋಪಿಗಳನ್ನು ಖುಲಾಸೆಗೊಳಿಸುವಂತೆ ಕೋರಿ ಸುದ್ದಿ ಸಂಸ್ಥೆಗಳು ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದವು. ನ್ಯಾಯಾಲಯವು ಮೇಲಿನ ಮಾತುಗಳಿಂದ ಚಾಟಿ ಬೀಸಿದೆ ಜೊತೆಗೆ ಎರಡೂ ಸುದ್ದಿ ವಾಹಿನಿಗಳ ವಿರುದ್ಧ ಯಾವುದೇ ದಂಡನಾತ್ಮಕ ಕ್ರಮ ತೆಗೆದುಕೊಳ್ಳದಂತೆ ಆಂಧ್ರ ಸರಕಾರ ಮತ್ತು ಪೊಲೀಸರಿಗೆ ಆದೇಶ ನೀಡಿತು. ಈ ಎರಡೂ ಸುದ್ದಿ ವಾಹಿನಿಗಳು ವೈಎಸ್‍ಆರ್ ಕಾಂಗ್ರೆಸ್‍ನ ಹಿಂದುತ್ವನಿಷ್ಠ ಸಂಸದ ರಘುರಾಮ ಕೃಷ್ಣಮ್ ರಾಜು ಅವರ ತಥಾಕಥಿತ ಆಕ್ಷೇಪಾರ್ಹ ಭಾಷಣವನ್ನು ಪ್ರಸಾರ ಮಾಡಿದ್ದವು. ಈ ಪ್ರಕರಣದಲ್ಲಿ ರಾಜು ಅವರನ್ನು ಬಂಧಿಸಲಾಗಿತ್ತು. ನಂತರ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು.

ನ್ಯಾಯಾಲಯವು, ಪ್ರಸಾರ ಮಾಧ್ಯಮಗಳು ಮತ್ತು ಭಾಷಣ ಸ್ವಾತಂತ್ರ್ಯದ ಬಗ್ಗೆ ಈಗ ಭಾರತೀಯ ದಂಡ ಸಂಹಿತೆಯ ಸೆಕ್ಷನ್ ೧೨೪ ಅ ಮತ್ತು ೧೫೩ ರ ನಿಯಮಗಳ ವ್ಯಾಖ್ಯೆಯನ್ನು ನಿರ್ಧರಿಸುವ ಅವಶ್ಯಕತೆ ಇದೆ, ಎಂದು ನಮಗೆ ಅನಿಸುತ್ತಿದೆ. ಸುದ್ದಿ ವಾಹಿನಿಗಳು ಏನನ್ನಾದರೂ ಹೇಳುತ್ತಿದ್ದರೆ ಅದನ್ನು ದೇಶದ್ರೋಹ ಎಂದು ಹೇಳಲಾಗುವುದಿಲ್ಲ. ದೇಶದ್ರೋಹದ ಕಲಂನ ವ್ಯಾಖ್ಯಾನಿಸುವ ಸಮಯ ಬಂದಿದೆ. ಸರಕಾರದ ಮೇಲಾಗುವ ಟೀಕೆಗಳನ್ನು ದೇಶದ್ರೋಹವೆಂದು ಪರಿಗಣಿಸಲಾಗುವುದಿಲ್ಲ ಎಂದು ನ್ಯಾಯಾಲಯವು ಹೇಳಿದೆ.