Statement by Delhi High Court: ಸಾರ್ವಜನಿಕ ಸ್ಥಳಗಳಲ್ಲಿ ಸಾಧು, ಫಕೀರ ಮುಂತಾದವರ ಸಮಾಧಿ ನಿರ್ಮಿಸಲು ಅನುಮತಿ; ಸಾರ್ವಜನಿಕ ಹಿತಾಸಕ್ತಿಗೆ ಧಕ್ಕೆ ! – ದೆಹಲಿ ಉಚ್ಚನ್ಯಾಯಾಲಯ

ಸಾಧುಗಳು, ಗುರುಗಳು, ಫಕೀರರು ಮತ್ತು ಇತರ ಧಾರ್ಮಿಕ ವ್ಯಕ್ತಿಗಳಿಗೆ ಸಾರ್ವಜನಿಕ ಭೂಮಿಯಲ್ಲಿ ಪ್ರಾರ್ಥನಾಸ್ಥಳಗಳು ಅಥವಾ ಸಮಾಧಿಗಳನ್ನು ನಿರ್ಮಿಸಲು ಅನುಮತಿ ನೀಡಿದರೆ, ಅದರ ಗಂಭೀರ ಪರಿಣಾಮಗಳಾಗಬಹುದು.

ರಸ್ತೆಯ ನಡುನಡುವೆ ಮಜಾರಗಳು ಕಟ್ಟುತ್ತಿದ್ದರೆ, ಸಭ್ಯ ಸಮಾಜ ಹೇಗೆ ಇರಲು ಸಾಧ್ಯ ?

ನ್ಯಾಯಾಲಯವು ಸರಕಾರದ ಕಿವಿ ಹಿಂಡಿದಂತೆ ಕಟ್ಟಡಗಳಿಗೆ ಒಪ್ಪಿಗೆ ನೀಡಿದವರ ಮೇಲೆಯೂ ಕೂಡ ಕ್ರಮ ಕೈಗೊಳ್ಳಬೇಕೆಂಬ ಜನತೆಯ ಅಪೇಕ್ಷೆ ಆಗಿದೆ !

ಪ್ರಯಾಗರಾಜನಲ್ಲಿ ಓರ್ವ ಪೊಲೀಸ್ ಕಾನ್‌ಸ್ಟೆಬಲ್ ಬಳಿ ಕೋಟ್ಯಂತರ ರೂಪಾಯಿ ಆಸ್ತಿ ಇದೆ ಎಂದು ಮಾಹಿತಿ ಹಕ್ಕು ಕಾರ್ಯಕರ್ತನ ಆರೋಪ

ಪ್ರಯಾಗರಾಜ ಜಿಲ್ಲೆಯ ಓರ್ವ ಪೊಲೀಸ್ ಕಾನ್‌ಸ್ಟೆಬಲ್ ಬಳಿ ಕೋಟಿಗಟ್ಟಲೆ ರೂಪಾಯಿ ಮೌಲ್ಯದ ಆಸ್ತಿ ಹೊಂದಿದ್ದಾರೆ. ಆತನ ಬಳಿ ದುಬಾರಿ ಕಾರುಗಳು ಮತ್ತು ಫ್ಲ್ಯಾಟ್‌ಗಳು, ಜೊತೆಗೆ ಭೂಮಿಯೂ ಇದೆ. ಈ ಬಗ್ಗೆ ತನಿಖೆ ನಡೆಸಬೇಕು, ಎಂದು ಆರ್‌ಟಿಐ ಕಾರ್ಯಕರ್ತ ನೂತನ ಠಾಕೂರ ಅವರು ರಾಜ್ಯದ ಪೊಲೀಸ್ ಮಹಾನಿರ್ದೇಶಕರಿಗೆ ಪತ್ರ ಕಳುಹಿಸಿ ಒತ್ತಾಯಿಸಿದ್ದಾರೆ.