ಅಲೋಪತಿ ಕುರಿತ ಚರ್ಚೆಯನ್ನು ಕೊನೆಗೊಳಿಸಲು ಅವರ ಇಚ್ಛೆಯಿದೆ ಎಂಬ ಹೇಳಿಕೆ
ಹರಿದ್ವಾರ (ಉತ್ತರಾಖಂಡ) – ನಾನು ಅಲೋಪತಿ ಮತ್ತು ವೈದ್ಯರ ವಿರೋಧಿಯಲ್ಲ. ಇಂಡಿಯನ್ ಮೆಡಿಕಲ ಅಸೋಸಿಯೇಶನ್ ವಿರುದ್ಧ ಹೋಗುವ ಪ್ರಶ್ನೆಯೇ ಇಲ್ಲ; ಆದರೆ ನಾವು ಈ ಕ್ಷೇತ್ರದ ಮಾಫಿಯಾಗಳನ್ನು ವಿರೋಧಿಸುತ್ತೇವೆ. ಅವರು ೨ ರೂಪಾಯಿ ಮೌಲ್ಯದ ಔಷಧಿಗಳನ್ನು ೨೦೦೦ ರೂಪಾಯಿಗಳಿಗೆ ಮಾರಾಟ ಮಾಡುತ್ತಿದ್ದಾರೆ. ಅವರು ಅಗತ್ಯವಿಲ್ಲದಿರುವಾಗಲೂ ಶಸ್ತ್ರಚಿಕಿತ್ಸೆ ಮತ್ತು ಪರೀಕ್ಷೆಗಳನ್ನು ಮಾಡಲು ಸಲಹೆ ನೀಡುತ್ತಿದ್ದಾರೆ. ಔಷಧಿಗಳ ವ್ಯವಹಾರ ಮಾಡುತ್ತಿದ್ದಾರೆ. ನಾವು ಅಲೋಪತಿಯ ಬಗೆಗಿನ ಈ ಚರ್ಚೆಯನ್ನು ಕೊನೆಗೊಳಿಸಲು ಬಯಸುತ್ತೇವೆ ಎಂದು ಯೋಗಋಷಿ ರಾಮದೇವ ಬಾಬಾ ಟ್ವೀಟ್ ಮಾಡಿದ್ದಾರೆ. ಯೋಗಋಷಿ ರಾಮದೇವ ಬಾಬಾ ಇವರು ಅಲೋಪತಿ ಬಗ್ಗೆ ಹೇಳಿಕೆಯನ್ನು ನೀಡಿದ್ದರಿಂದ ಇಂಡಿಯನ್ ಮೆಡಿಕಲ ಅಸೋಸಿಯೇಶನ್ ಅವರನ್ನು ವಿರೋಧಿಸಿತ್ತು. ಅದರ ನಂತರ ಯೋಗಋಷಿ ರಾಮದೇವ ಬಾಬಾ ಅವರು ಅಲೋಪತಿ ಚಿಕಿತ್ಸೆಯ ಬಗ್ಗೆ ೨೫ ಪ್ರಶ್ನೆಗಳನ್ನು ಕೇಳಿದ್ದರು.
ಯೋಗಋಷಿ ರಾಮದೇವ ಬಾಬಾ ಅವರು ತಮ್ಮ ಮಾತನ್ನು ಮುಂದುವರೆಸುತ್ತಾ, ಅಲೋಪತಿಯಲ್ಲಿ ಶಸ್ತ್ರಚಿಕಿತ್ಸೆ ಮತ್ತು ಜೀವ ಉಳಿಸುವ ಔಷಧಿಗಳಿದ್ದರೆ, ಶೇ. ೯೮ ರಷ್ಟು ಕಾಯಿಲೆಗಳನ್ನು ಗುಣಪಡಿಸಲು ಯೋಗ ಮತ್ತು ಆಯುರ್ವೇದಗಳ ಪರ್ಯಾಯ ಮಾರ್ಗವಿದೆ ಯೋಗ ಮತ್ತು ಆಯುರ್ವೇದಕ್ಕೆ ಸ್ಯುಡೊ ಸಾಯನ್ಸ್ ಮತ್ತು ಅಲ್ಟರನೆಟ ಥೆರಪಿ ಎಂದು ಕರೆಯುವುದು ಹಾಸ್ಯಾಸ್ಪದವಾಗಿದೆ. ಈ ಮನಸ್ಥಿತಿಯನ್ನು ದೇಶ ಸಹಿಸುವುದಿಲ್ಲ ಎಂದು ಯೋಗಋಷಿ ರಾಮದೇವ ಬಾಬಾ ಹೇಳಿದರು.