ಕೊರೋನಾ ಲಸಿಕೆ ತುಂಬಿದ್ದ ಸಿರಿಂಜ್ ಅನ್ನು ಎಸೆದು ಬಿಡುತ್ತಿದ್ದ ಆರೋಗ್ಯ ಸಿಬ್ಬಂದಿ ನೇಹಾ ಖಾನ ಇವರ ಮೇಲೆ ಅಪರಾಧ ದಾಖಲು

ಇದನ್ನು ಈಗ ‘ಜಿಹಾದ್’ ಎಂದು ಕರೆಯಬೇಕೆ ?

ಅಲಿಗಡ (ಉತ್ತರಪ್ರದೇಶ) – ಇಲ್ಲಿಯ ಜಮಾಲಪುರದ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ಕಸದ ತೊಟ್ಟಿಯಲ್ಲಿ ಕೊರೊನಾ ಲಸಿಕೆ ತುಂಬಿದ ೨೯ ಸಿರಿಂಜ್‍ಗಳು ಪತ್ತೆಯಾಗಿವೆ. ಪೊಲೀಸರು ಇಲ್ಲಿಯ ವ್ಯಾಕ್ಸಿನೇಷನ್ ವಿಭಾಗದ ಮುಖ್ಯಸ್ಥೆ ನೇಹಾ ಖಾನ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಅಲ್ಲದೆ ಈ ಬಗ್ಗೆ ತನಿಖೆ ನಡೆಸಲು ಇಬ್ಬರು ಸದಸ್ಯರ ಸಮಿತಿಯನ್ನು ನೇಮಿಸಿದ ನಂತರ ಸಮಿತಿಯು ತನಿಖಾ ವರದಿಯನ್ನು ಸಲ್ಲಿಸಿದೆ.

ಈ ಕೇಂದ್ರದಲ್ಲಿರುವ ನೇಹಾ ಖಾನ್ ಅವರ ಸಹೋದ್ಯೋಗಿಗಳ ಪ್ರಕಾರ, ನೇಹಾ ಖಾನ್ ಜನರ ಕೈಗೆ ಸಿರಿಂಜ್ ಅನ್ನು ಮಾತ್ರ ಚುಚ್ಚುತ್ತಿದ್ದರು; ಆದರೆ ಆಕೆ ಲಸಿಕೆ ನೀಡುತ್ತಿರಲಿಲ್ಲ ಮತ್ತು ನಂತರ ಲಸಿಕೆ ತುಂಬಿದ ಸಿರಿಂಜನ್ನು ಕಸದ ಬುಟ್ಟಿಗೆ ಎಸೆದು ಬಿಡುತ್ತಿದ್ದರು. ಈ ಬಗ್ಗೆ ಆಕೆಗೆ ಕೇಳಿದಾಗ, ‘ನನ್ನ ಮೂಡ್ ಸರಿ ಇಲ್ಲ’ ಎಂದು ಹೇಳಿ ಹೊರಟುಹೋದಳು. (ಇಂತಹ ‘ಮೂಡಿ’ ಆರೋಗ್ಯ ಕಾರ್ಯಕರ್ತರಿಗೆ ಸರಕಾರವು ಹೊರಗಿನ ದಾರಿ ತೋರಿಸುವುದು ಅಪೇಕ್ಷಿತವಿದೆ ! – ಸಂಪಾದಕ) ಅಲ್ಲಿಯವರೆಗೆ ೨೯ ಸಿರಿಂಜನ್ನು ಎಸೆದು ಬಿಡಲಾಗಿತ್ತು.