ಖಲಿಸ್ತಾನಿ ಭಯೋತ್ಪಾದಕ ಗುರುಪತವಂತ ಸಿಂಹ ಪನ್ನುನ ಹೊಸ ವಿಡಿಯೋ ಪ್ರಸಾರ ಅವನು ಬದುಕಿರುವುದೆಂದು ದಾವೆ !

‘ಸಿಖ ಫಾರ್ ಜಸ್ಟಿಸ್’ ಈ ನಿಷೇಧಿತ ಖಲಿಸ್ತಾನಿ ಭಯೋತ್ಪಾದಕ ಸಂಘಟನೆ ಮುಖಂಡ ಗುರುಪತವಂತ ಸಿಂಹ ಪನ್ನು ಇವನು ಅಮೆರಿಕಾದಲ್ಲಿ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿರುವ ಸಮಾಚಾರ ಪ್ರಸಾರಗೊಂಡಿತ್ತು. ಈ ಸಮಾಚಾರವನ್ನು ಯಾರು ಕೂಡ ದೃಢೀಕರಿಸಿರಲಿಲ್ಲ. ಈಗ ಜುಲೈ ೫ ಕ್ಕೆ ಅವನ ಒಂದು ವಿಡಿಯೋ ಪ್ರಸಾರಗೊಂಡಿದೆ.

‘ಕ್ಯಾರಿ ಆನ್ ಜಟ್ಟ 3’ ಸಿನಿಮಾದಲ್ಲಿ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಕ್ಕೆ ಕೇಸ್ ದಾಖಲು!

ಶರ್ಮಾ ಮತ್ತು ಬಂಟಿ ಇವರು, ‘ಕ್ಯಾರಿ ಆನ್ ಜಟ್ಟಾ-3’ ರಲ್ಲಿ ಆಕ್ಷೇಪಾರ್ಹ ದೃಶ್ಯವನ್ನು ತೋರಿಸಲಾಗಿದ್ದೂ ಇದರಲ್ಲಿ ನಟರಾದ ಗಿಪ್ಪಿ ಗ್ರೆವಾಲ್, ಬಿನ್ನು ಧಿಲ್ಲೋನ್ ಮತ್ತು ಗುರ್‌ಪ್ರೀತ್ ಘುಗ್ಗಿ ಬಂದು ಯಜ್ಞಕುಂಡಕ್ಕೆ ನೀರನ್ನು ಸುರಿಯುತ್ತಾರೆ.

ಸ್ವರ್ಣ ಮಂದಿರದಲ್ಲಿ ಖಲಿಸ್ತಾನ ಬೆಂಬಲಿಗರಿಂದ ದೇಶವಿರೋಧಿ ಘೋಷಣೆ !

ಖಲಿಸ್ತಾನಿ ಭಯೋತ್ಪಾದಕ ಭಿಂದ್ರನ್ ವಾಲೆಯವರ ಭಿತ್ತಿಪತ್ರ ರಾರಾಜಿಸಿತು !

ಪಂಜಾಬ್‌ನಲ್ಲಿ ಭಾರತ-ಪಾಕಿಸ್ತಾನ ಗಡಿಯಲ್ಲಿ ಪಾಕಿಸ್ತಾನದ ಡ್ರೋನ್ ಹೊಡೆದುರುಳಿಸಿದ ಸೈನಿಕರು !

ಈ ಡ್ರೋನ್‌ನೊಂದಿಗೆ ಕಳುಹಿಸಲಾಗಿದ್ದ ೨೧ ಕೋಟಿ ರೂಪಾಯಿ ಮೌಲ್ಯದ ಹೆರಾಯಿನ್ ವಶಪಡಿಸಿಕೊಳ್ಳಲಾಗಿದೆ.

ಅಮೃತಸರದಲ್ಲಿ ಮತಾಂತರಕ್ಕೆ ಸಂಬಂಧಿಸಿದಂತೆ ನಿಹಾಂಗ್ ಸಿಖ್ಖರಿಂದ ಚರ್ಚ್ ಮೇಲೆ ದಾಳಿ !

ಮೇ 21 ರಂದು, ಕ್ರೈಸ್ತರು ಮತಾಂತರಗೊಳಿಸುತ್ತಿದ್ದಾರೆ ಎಂದು ಆರೋಪಿಸಿ ನಿಹಾಂಗ್ ಸಿಖ್ಖರು ರಾಜೇವಾಲ ಗ್ರಾಮದ ಚರ್ಚ್ ವೊಂದರ ಮೇಲೆ ದಾಳಿ ಮಾಡಿದರು. ಅಲ್ಲಿ ನಿಲ್ಲಿಸಿದ್ದ ವಾಹನಗಳನ್ನು ಧ್ವಂಸಗೊಳಿಸಲಾಯಿತು ಮತ್ತು ಅದನ್ನು ವಿರೋಧಿಸಿದ ಚರ್ಚ್‌ಗೆ ಬಂದವರನ್ನು ಥಳಿಸಲಾಯಿತು.

ಭಾರತವು ಪಾಕಿಸ್ತಾನದ ಕಳ್ಳಸಾಗಣಿಕೆಯ ೨ ಡ್ರೋನ್‌ಗಳನ್ನು ಹೊಡೆದುರುಳಿಸಿತು

ಗಡಿಯಲ್ಲಿ ಭಾರತೀಯ ಗಡಿ ಭದ್ರತಾ ಪಡೆಯು ಪಾಕಿಸ್ತಾನದ ಕಳ್ಳಸಾಗಣಿಕೆಯ ೨ ಡ್ರೋನ್‌ಗಳನ್ನು ಒಂದೇ ರಾತ್ರಿಯಲ್ಲಿ ಹೊಡೆದುರುಳಿಸಿದೆ. ಈ ಡ್ರೋನ್ ಮೂಲಕ ಹೆರಾಯಿನ್ ಕಳುಹಿಸಲಾಗಿತ್ತು.

ಪಟಿಯಾಲ ಗುರುದ್ವಾರದಲ್ಲಿ ಮಹಿಳೆಯ ಹತ್ಯೆ : ಹಂತಕನ ಬಂಧನ

ಮೇ ೧೪ ರಂದು ಪಟಿಯಾಲಾ ಗುರುದ್ವಾರದಲ್ಲಿ ನಿರ್ಮಲಜಿತ್ ಸಿಂಗ್ ಎಂಬ ವ್ಯಕ್ತಿಯೊಬ್ಬ ಮಹಿಳೆಯನ್ನು ಗುಂಡಿಕ್ಕಿ ಕೊಂದಿದ್ದಾನೆ. ‘ಗುರುದ್ವಾರ ದುಖ್ ನಿವರನ್ ಸಾಹಿಬ್’ನ ಪ್ರದೇಶದ ಸರೋವರದ ಬಳಿ ಮಹಿಳೆ ಕುಳಿತು ಮದ್ಯ ಸೇವಿಸುತ್ತಿದ್ದಳು ಎಂದು ಆರೋಪಿಸಲಾಗಿದೆ.

ಪಾಕಿಸ್ತಾನದಿಂದ 198 ಭಾರತೀಯ ಮೀನುಗಾರರ ಬಿಡುಗಡೆ !

ಪಾಕಿಸ್ತಾನ ಸರಕಾರವು ಮೇ 12 ರಂದು ರಾತ್ರಿ ಇಲ್ಲಿಯ ಅಟಾರಿ ಗಡಿಯಿಂದ ಪಾಕಿಸ್ಥಾನದ ಜೈಲನಲ್ಲಿರುವ ಭಾರತದ 198 ಮೀನುಗಾರರನ್ನು ಬಿಡುಗಡೆಗೊಳಿಸಿದೆ. ಈ ಮೀನುಗಾರರು ಅಂತರರಾಷ್ಟ್ರೀಯ ಸಮುದ್ರ ಗಡಿಯನ್ನು ದಾಟಿ ಪಾಕಿಸ್ತಾನದ ಗಡಿಯಲ್ಲಿ ನುಸುಳಿರುವ ಆರೋಪದ ಮೇಲೆ ಬಂಧಿಸಲಾಗಿತ್ತು.

ಸುವರ್ಣ ಮಂದಿರ ಪರಿಸರದಲ್ಲಿ ಬಾಂಬ್ ಸ್ಫೋಟ ಪ್ರಕರಣದಲ್ಲಿ 5 ಮಂದಿಯ ಬಂಧನ

ನಗರದ ಸುವರ್ಣ ಮಂದಿರ ಪ್ರದೇಶದಲ್ಲಿ ನಡೆದ ಕಡಿಮೆ ತೀವ್ರತೆಯ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದಂತೆ 5 ಜನರನ್ನು ಬಂಧಿಸಲಾಗಿದೆ. ಈ ಕುರಿತು ಮಾಹಿತಿ ನೀಡಿದ ರಾಜ್ಯ ಪೊಲೀಸ್ ಮಹಾನಿರ್ದೇಶಕ ಗೌರವ ಯಾದವ್, ಬಂಧಿತ 5 ಮಂದಿ ರಾಜ್ಯದಲ್ಲಿ ಶಾಂತಿ ಕದಡಲು ಬಯಸಿದ್ದರು’, ಎಂದಿದ್ದಾರೆ.

ಪಾಕಿಸ್ತಾನಿ ಡ್ರೋನ್ ಪುನಃ ಅಮೃತಸರದಲ್ಲಿ ನುಗ್ಗಿತು; ಒಂದೂವರೆ ಕೇಜಿ ಹೆರಾಯಿನ್ ಜಪ್ತಿ

ನಿರಂತರವಾಗಿ ಭಾರತದಲ್ಲಿ ಕಿತಾಪತಿ ಮಾಡುವ ಪಾಕಿಸ್ತಾನಕ್ಕೆ ಭಾರತ ಎಂದು ಪಾಠವನ್ನು ಕಲಿಸಲಿದೆ ?