ಪಂಜಾಬ್‌ನಲ್ಲಿ ಭಾರತ-ಪಾಕಿಸ್ತಾನ ಗಡಿಯಲ್ಲಿ ಪಾಕಿಸ್ತಾನದ ಡ್ರೋನ್ ಹೊಡೆದುರುಳಿಸಿದ ಸೈನಿಕರು !

೨೧ ಕೋಟಿ ರೂಪಾಯಿಗಳ ಹೆರಾಯಿನ್ ವಶ !

ಅಮೃತಸರ (ಪಂಜಾಬ್) – ಇಲ್ಲಿನ ಅಟಾರಿ ಗಡಿ ಬಳಿಯಲ್ಲಿ ಗಡಿ ಭದ್ರತಾ ಪಡೆಯ ಸೈನಿಕರು ಪಾಕಿಸ್ತಾನದಿಂದ ಬಂದ ಡ್ರೋನ್ ಅನ್ನು ಹೊಡೆದುರುಳಿಸಿದ್ದಾರೆ. ಈ ಡ್ರೋನ್‌ನೊಂದಿಗೆ ಕಳುಹಿಸಲಾಗಿದ್ದ ೨೧ ಕೋಟಿ ರೂಪಾಯಿ ಮೌಲ್ಯದ ಹೆರಾಯಿನ್ ವಶಪಡಿಸಿಕೊಳ್ಳಲಾಗಿದೆ. ಈ ಹಿಂದೆ ಜೂನ್ ೨ ಮತ್ತು ೩ ರಂದು ಕೂಡ ಗಡಿಯಲ್ಲಿ ಡ್ರೋನ್ ಮೂಲಕ ಹೆರಾಯಿನ್ ಅನ್ನು ವಶಪಡಿಸಿಕೊಳ್ಳಲಾಗಿತ್ತು. ಒಟ್ಟು ೮ ಕೆಜಿ ಹೆರಾಯಿನ್ ವಶಪಡಿಸಿಕೊಳ್ಳಲಾಗಿದೆ. ಇದರ ಅಂತರರಾಷ್ಟ್ರೀಯ ಮೌಲ್ಯ ಕೋಟ್ಯಂತರ ರೂಪಾಯಿಗಳಾಗಿದೆ.