‘ಕ್ಯಾರಿ ಆನ್ ಜಟ್ಟ 3’ ಸಿನಿಮಾದಲ್ಲಿ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಕ್ಕೆ ಕೇಸ್ ದಾಖಲು!

ನಟರು ಯಜ್ಞಕುಂಡದಲ್ಲಿ ನೀರು ಬಿಡುವ ದೃಶ್ಯ !

ಜಲಂಧರ್ (ಪಂಜಾಬ್) – ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿರುವ ‘ಕ್ಯಾರಿ ಆನ್ ಜಟ್ಟಾ 3’ ಚಿತ್ರದ ನಿರ್ಮಾಪಕರ ವಿರುದ್ಧ ಇಲ್ಲಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಸಂಬಂಧ ಶಿವಸೇನಾ ಹಿಂದ್ ಯುವ ಸಮಿತಿ ಅಧ್ಯಕ್ಷ ಇಶಾಂತ್ ಶರ್ಮಾ ಮತ್ತು ಪಂಜಾಬ್ ಶಿವಸೇನೆ ಅಧ್ಯಕ್ಷ ಸುನಿಲ್ ಕುಮಾರ್ ಬಂಟಿ ದೂರು ದಾಖಲಿಸಿದ್ದಾರೆ.

ಶರ್ಮಾ ಮತ್ತು ಬಂಟಿ ಇವರು, ‘ಕ್ಯಾರಿ ಆನ್ ಜಟ್ಟಾ-3’ ರಲ್ಲಿ ಆಕ್ಷೇಪಾರ್ಹ ದೃಶ್ಯವನ್ನು ತೋರಿಸಲಾಗಿದ್ದೂ ಇದರಲ್ಲಿ ನಟರಾದ ಗಿಪ್ಪಿ ಗ್ರೆವಾಲ್, ಬಿನ್ನು ಧಿಲ್ಲೋನ್ ಮತ್ತು ಗುರ್‌ಪ್ರೀತ್ ಘುಗ್ಗಿ ಬಂದು ಯಜ್ಞಕುಂಡಕ್ಕೆ ನೀರನ್ನು ಸುರಿಯುತ್ತಾರೆ. ಇದು ಹಿಂದೂ ಸಂಪ್ರದಾಯಗಳಿಗೆ ಮಾಡಿದ ಅವಮಾನವಾಗಿದೆ. ಹಿಂದೂ ಧರ್ಮದಲ್ಲಿ ಯಾವುದೇ ಆಚರಣೆ ಅಥವಾ ಪೂಜೆಯನ್ನು ಮಾಡಿದಾಗ, ಹವನವನ್ನು ಮೊದಲು ಮಾಡಲಾಗುತ್ತದೆ. ಈ ದೃಶ್ಯದ ಬಗ್ಗೆ ದೂರು ದಾಖಲಾಗಿದೆ. ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿರುವ ಪ್ರಕರಣದಲ್ಲಿ ನಿರ್ಮಾಪಕರ ವಿರುದ್ಧ 295 ನೇ ಕಲಂ ಅಡಿಯಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಲಾಗಿದೆ. ಪಂಜಾಬ್ ನಲ್ಲಿ ವಾತಾವರಣವನ್ನು ಹಾಳು ಮಾಡುವ ಪ್ರಯತ್ನ ನಡೆದರೆ 153 ನೇ ವಿಧಿಯನ್ನು ಅನ್ವಯಿಸಬೇಕು ಎಂದು ಆಗ್ರಹಿಸಲಾಗಿದೆ. ಚಿತ್ರದ ನಿರ್ದೇಶಕರಾದ ಕಂಗ್ ಮತ್ತು ಗುರುಪ್ರೀತ್ ಘುಗ್ಗಿ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಅವರ ಮನೆ ಮುಂದೆ ಪ್ರತಿಭಟನೆ ನಡೆಸುವುದಾಗಿ ಶರ್ಮಾ ಮತ್ತು ಬಂಟಿ ಎಚ್ಚರಿಕೆ ನೀಡಿದ್ದಾರೆ.

ಸಂಪಾದಕೀಯ ನಿಲುವು

ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡುವ ಬಗ್ಗೆ ಯಾವುದೇ ಕಠಿಣ ಕಾನೂನು ಇಲ್ಲದಿರುವುದರಿಂದ ಮತ್ತೆ ಮತ್ತೆ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ವಿವಿಧ ರೀತಿಯಲ್ಲಿ ಘಾಸಿ ಮಾಡಗುತ್ತಿದೆ ! ಈ ಪರಿಸ್ಥಿತಿಯು ಹಿಂದೂ ರಾಷ್ಟ್ರವನ್ನು ಅನಿವಾರ್ಯವಾಗಿಸುತ್ತದೆ !