ಬ್ರಿಟನ್ ನ ಭಾರತೀಯ ರಾಯಭಾರಿ ಕಚೇರಿಯ ಮೇಲೆ ದಾಳಿ ಮಾಡಿದ ೧೯ ಖಲಿಸ್ತಾನಿಗಳ ಗುರುತು ಪತ್ತೆ !

ಜಾಲಂಧರ (ಪಂಜಾಬ) – ರಾಷ್ಟ್ರೀಯ ತನಿಖಾ ದಳದಿಂದ ಬ್ರಿಟನ್ ನ ಭಾರತೀಯ ರಾಯಭಾರಿ ಕಚೇರಿಯ ಮೇಲೆ ದಾಳಿ ಮಾಡಿದ ೧೯ ಖಲಿಸ್ತಾನಿಗಳ ಗುರುತು ಪತ್ತೆ ಹಚ್ಚಲಾಗಿದೆ. ಮಾರ್ಚ್ ೧೯, ೨೦೨೩ ರಂದು ೪೫ ಖಲಿಸ್ತಾನಿ ಬೆಂಬಲಿಗರು ಭಾರತೀಯ ರಾಯಭಾರಿ ಕಚೇರಿಯ ಮೇಲೆ ದಾಳಿ ಮಾಡಿದ್ದರು. ಅಮೇರಿಕಾದಲ್ಲಿನ ಸ್ಯಾನ್ ಫ್ರಾನ್ಸಿಸ್ಕೋ ಇಲ್ಲಿಯ ಭಾರತೀಯ ರಾಯಭಾರಿ ಕಚೇರಿಯನ್ನು ಗುರಿ ಮಾಡಿರುವ ೪ ಖಲಿಸ್ತಾನಿಗಳ ಗುರುತು ಪತ್ತೆ ಹಚ್ಚಲಾಗಿದೆ. ಇವರೆಲ್ಲರನ್ನು ಪತ್ತೆ ಹಚ್ಚಿರುವುದರಿಂದ ಖಲಿಸ್ತಾನಿಗಳಿಗಾಗಿ ಪಾಸ್ಪೋರ್ಟ್ ಇಲಾಖೆಯಿಂದ ಮುಂದಿನ ಕ್ರಮ ಕೈಗೊಳ್ಳಲು ಆರಂಭಿಸಲಾಗಿದೆ. ಜುಲೈ ೨, ೨೦೨೩ ರಂದು ಸ್ಯಾನ್ ಫ್ರಾನ್ಸಿಸ್ಕೋದಲ್ಲಿನ ಭಾರತೀಯ ರಾಯಭಾರಿ ಕಟ್ಟಡದಲ್ಲಿ ‘ಸಿಖ ಫಾರ್ ಜಸ್ಟೀಸ್’ ಈ ನಿಷೇಧಿತ ಖಲಿಸ್ತಾನಿ ಸಂಘಟನೆ ಬೆಂಬಲಿಗರು ಪ್ರವೇಶಿಸಿ ಬೆಂಕಿ ಇಟ್ಟರು. ಕೆನಡಾದಲ್ಲಿ ಹತನಾಗಿರುವ ಭಯೋತ್ಪಾದಕ ಹರದೀಪ ಸಿಂಹ ನಿಜ್ಜರ್ ಇವನ ಹತ್ಯೆಯನಂತರ ಈ ಕೃತ್ಯ ನಡೆಸಲಾಯಿತು. ಈ ಬೆಂಕಿ ಅವಘಡದಲ್ಲಿ ಯಾರ ಸಾವು ಸಂಭವಿಸಿಲ್ಲ.