ಅಮೃತಸರದಲ್ಲಿ ಮತಾಂತರಕ್ಕೆ ಸಂಬಂಧಿಸಿದಂತೆ ನಿಹಾಂಗ್ ಸಿಖ್ಖರಿಂದ ಚರ್ಚ್ ಮೇಲೆ ದಾಳಿ !

ಸಿಖ್ಖರ ಸೋಗಿನಲ್ಲಿ ಮತಾಂತರ ಮಾಡಿದ ಆರೋಪ !

(ಆಯುಧಗಳನ್ನು ಹೊಂದಿರುವ ಯೋಧ ಸಿಖ್ಖರನ್ನು ನಿಹಾಂಗ್ ಸಿಖ್ ಎಂದು ಕರೆಯಲಾಗುತ್ತದೆ)

ಅಮೃತಸರದ ಸುಖ್ಪಾಲ್ ರಾಣಾ ಮಿನಿಸ್ಟ್ರೀಸ್ ಸಭೆಯ ಮೇಲೆ ನಿಹಾಂಗ್ ವೇಷ ಧರಿಸಿದ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ.

ಅಮೃತಸರ – ಇಲ್ಲಿ ಮೇ 21 ರಂದು, ಕ್ರೈಸ್ತರು ಮತಾಂತರಗೊಳಿಸುತ್ತಿದ್ದಾರೆ ಎಂದು ಆರೋಪಿಸಿ ನಿಹಾಂಗ್ ಸಿಖ್ಖರು ರಾಜೇವಾಲ ಗ್ರಾಮದ ಚರ್ಚ್ ವೊಂದರ ಮೇಲೆ ದಾಳಿ ಮಾಡಿದರು. ಅಲ್ಲಿ ನಿಲ್ಲಿಸಿದ್ದ ವಾಹನಗಳನ್ನು ಧ್ವಂಸಗೊಳಿಸಲಾಯಿತು ಮತ್ತು ಅದನ್ನು ವಿರೋಧಿಸಿದ ಚರ್ಚ್‌ಗೆ ಬಂದವರನ್ನು ಥಳಿಸಲಾಯಿತು. ಈ ವೇಳೆ 2 ಮಂದಿ ಗಾಯಗೊಂಡಿದ್ದಾರೆ. ಈ ಘಟನೆಯ ನಂತರ ಆಕ್ರೋಶಗೊಂಡ ಕ್ರೈಸ್ತರು ಪ್ರತಿಭಟನೆ ನಡೆಸಿದರು. ಇಲ್ಲಿ ಕ್ರೈಸ್ತರು ಸಿಖ್ಖರ ವೇಷ ಧರಿಸಿ ಮತಾಂತರ ಮಾಡುತ್ತಿದ್ದಾರೆ ಎಂದು ನಿಹಾಂಗ್ ಸಂಘಟನೆಗಳು ಹೇಳುತ್ತಿವೆ. ಇದಕ್ಕೆ ನಮ್ಮ ಆಕ್ಷೇಪವಿದೆ ಎಂದು ಹೇಳಿದ್ದಾರೆ.

ಚರ್ಚ್ ನ ಪದಾಧಿಕಾರಿಗಳು, ಮೇ 21ರ ಮಧ್ಯಾಹ್ನ ಚರ್ಚ್‌ನಲ್ಲಿ ಪೂಜೆ ನಡೆಯುತ್ತಿದ್ದ ವೇಳೆ ಕೆಲವು ನಿಹಾಂಗ್ ಸಿಖ್ಖರು ಬಂದು ಚರ್ಚ್ ಮೇಲೆ ದಾಳಿ ನಡೆಸಿದ್ದಾರೆ. ಅವರು ಕ್ರೈಸ್ತರ ಬೈಬಲ್ ಅನ್ನು ಅವಮಾನಿಸಿದರು ಮತ್ತು ನಮ್ಮ ವಾಹನಗಳನ್ನು ಧ್ವಂಸಗೊಳಿಸಿದರು ಎಂದು ಹೇಳಿದರು.

ದಾಳಿಕೋರರಿಗೆ ಪ್ರತ್ಯುತ್ತರ ನೀಡಲು ಕ್ರೈಸ್ತರು ಅವರ ಮೇಲೆ ಕಲ್ಲು ತೂರಾಟ ಮಾಡಲಾರಂಭಿಸಿದಾಗ ಆಕ್ರಮಣಕಾರರು ಹೊರಟುಹೋದರು. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸತೀಂದರ್ ಸಿಂಗ್ ಇವರು, ‘ಈ ಪ್ರಕರಣದಲ್ಲಿ ತನಿಖೆ ನಡೆಯುತ್ತಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು’’ಎಂದು ಮಾಹಿತಿ ನೀಡಿದರು.

ಸಂಪಾದಕರ ನಿಲುವು

ಈ ರೀತಿಯನ್ನು ತಡೆಯಲು ಸರಕಾರವು ದೇಶದಲ್ಲಿ ಮತಾಂತರ ನಿಷೇಧ ಕಾಯಿದೆಯನ್ನು ತಂದು ಮತ್ತು ಅದರ ಪರಿಣಾಮಕಾರಿಯಾಗಿ ಕ್ರಮ ಕೈಗೊಳ್ಳುವುದು ಅಗತ್ಯವಾಗಿದೆ !