ದೆಹಲಿ ವಿಮಾನ ನಿಲ್ದಾಣದಿಂದ ಖಲಿಸ್ತಾನಿ ಭಯೋತ್ಪಾದಕನ ಬಂಧನ

  • ಪಂಜಾಬ್‌ನಲ್ಲಿ ಧಾರ್ಮಿಕ ಮುಖಂಡರ ಹತ್ಯೆಗೆ ಸಂಚು ರೂಪಿಸಿದ್ದ !

  • ಲೂಧಿಯಾನದಿಂದ ಸಹಚರನ ಬಂಧನ

ಅಮೃತಸರ (ಪಂಜಾಬ್) – ಪಂಜಾಬ್ ಪೊಲೀಸರು ಭಯೋತ್ಪಾದಕ ಸಂಘಟನೆ ‘ಖಲಿಸ್ತಾನ್ ಲಿಬರೇಶನ್ ಫೋರ್ಸ್’ ನ ಭಯೋತ್ಪಾದಕ ಹರಜಿತ್ ಸಿಂಗ್ ನನ್ನು ದೆಹಲಿ ವಿಮಾನ ನಿಲ್ದಾಣದಿಂದ ಬಂಧಿಸಿದ್ದಾರೆ. ಅವನು ಸ್ಪೇನ್ ದೇಶದ ಪ್ರಜೆಯಾಗಿದ್ದಾನೆ, ಅವನ ಸಹಚರ ಅಮರಿಂದರ್ ಸಿಂಗ್ ಅಲಿಯಾಸ್ ಬಂಟಿಯನ್ನು ಪೊಲೀಸರು ಲೂಧಿಯಾನದಿಂದ ಬಂಧಿಸಿದ್ದಾರೆ.

ಪೊಲೀಸ್ ಅಧಿಕಾರಿ ಶ್ರೀ. ಅಶ್ವನಿ ಕಪುರ ಇವರು, ಹರಜಿತ್ ಸಿಂಗ್ ಗುರುದಾಸಪುರದ ಘನಶಾಮಪುರ ಗ್ರಾಮದ ನಿವಾಸಿಯಾಗಿದ್ದು, ಒಂದು ತಿಂಗಳ ಹಿಂದೆ ಭಾರತಕ್ಕೆ ಬಂದಿದ್ದನು ಎಂದು ಹೇಳಿದ್ದಾರೆ. ಈತ ಭಯೋತ್ಪಾದನಾ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಬಗ್ಗೆ ಪಂಜಾಬ್ ಪೊಲೀಸರಿಗೆ ಮಾಹಿತಿ ಸಿಕ್ಕಿತ್ತು. ಹರಜಿತ್ ಮತ್ತು ಅಮರಿಂದರ್ ಸಾಮಾಜಿಕ ಜಾಲತಾಣಗಳ ಮೂಲಕ ಪರಸ್ಪರ ಸಂಪರ್ಕದಲ್ಲಿದ್ದರು. ಹರಜಿತ ಧಾರ್ಮಿಕ ಮುಖಂಡರ ಹತ್ಯೆಗಾಗಿ ಹಲವು ಬಾರಿ ಅಮರಿಂದರ್ ನಿಗೆ ಸ್ಪೇನ್ ನಿಂದ ಹಣವನ್ನು ಕಳುಹಿಸಿದ್ದ.