ಪಂಜಾಬ್ ನ ಗೋರಕ್ಷ ದಳದ ಗೋರಕ್ಷಕರು ಮಾಹಿತಿ ನೀಡಿದ ನಂತರ ಪೊಲೀಸರಿಂದ ಕ್ರಮ !
ಜಾಲಂಧರ (ಪಂಜಾಬ) – ಇಲ್ಲಿನ ನೇಹಾ ಟೊಕಾ ಎಂಬ ಒಂದು ಮುಚ್ಚಿರುವ ಕಾರ್ಖಾನೆಯಲ್ಲಿ ಗೋಮಾಂಸವನ್ನು ಚಿಕ್ಕ ಪೊಟ್ಟಣಗಳಲ್ಲಿ ತುಂಬುತ್ತಿದ್ದರು. ಪಂಜಾಬ ಗೋರಕ್ಷ ದಳ ಈ ಸಂಘಟನೆಗೆ ಮಾಹಿತಿ ಸಿಗುತ್ತಲೇ ಅದು ಪಂಜಾಬ ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿತು. ಅನಂತರ ಪೊಲೀಸರು ಕಾರ್ಯಾಚರಣೆ ನಡೆಸಿ ೧೩ ಜನರನ್ನು ಬಂಧಿಸಿದ್ದಾರೆ. ಬಂಧಿತರಲ್ಲಿ ಓರ್ವ ವ್ಯಕ್ತಿಯು ಬಿಹಾರಿನವನಾಗಿದ್ದು ಇತರ ಎಲ್ಲರೂ ರೋಹಿಂಗ್ಯಗಳಾಗಿದ್ದರೆ ಎಂಬುದು ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ.
जालंधर – गौ मांस के साथ 12 रोहिंग्या सहित 13 गिरफ्तार
बंद पड़ी फैक्ट्री को किराये पर लेकर दिल्ली का एक मास विक्रेता मुस्लिम व्यापारी इमरान यहां पर गैर कानूनी तरीके से गौ मांस की पैकिंग करवा रहा था
यहां पर गौ मांस को पैक कर के विदेशों में #Punjab #cowslaughter #Rohingya pic.twitter.com/1zHbVBMKLj
— A🕉 (@kofmajhab1) August 7, 2023
೧. ದೆಹಲಿಯಲ್ಲಿನ ಇಮ್ರಾನ ಎಂಬ ವ್ಯಕ್ತಿಯು ಜಾಲಂಧರದಲ್ಲಿ ಕಾನೂನುಬಾಹಿರವಾಗಿ ಗೋಮಾಂಸಗಳನ್ನು ಕಳುಹಿಸುತ್ತಿರುವುದು ವಿಚಾರಣೆಯಿಂದ ಬೆಳಕಿಗೆ ಬಂದಿದೆ.
೨. ಪಂಜಾಬ ಗೋರಕ್ಷ ದಳವು ಈ ಮೊದಲು ರಾಜ್ಯದಲ್ಲಿನ ರಾಜಪುರದಲ್ಲಿಯೂ ಇದೇ ರೀತಿಯಲ್ಲಿ ನಡೆದಿದ್ದ ಅನಧಿಕೃತ ಗೋಮಾಂಸ ಮಾರಾಟದ ವ್ಯವಸಾಯವನ್ನು ಬೆಳಕಿಗೆ ತಂದಿತ್ತು. ‘ಪಾಂಚಜನ್ಯ’ ಎಂಬ ಹಿಂದುತ್ವನಿಷ್ಠ ನಿಯತಕಾಲಿಕೆಯ ಸಂಕೇತಸ್ಥಳದಲ್ಲಿ ಈ ವಾರ್ತೆಯನ್ನು ಪ್ರಸಾರಮಾಡಿದೆ.
೩. ಪಂಜಾಬ ಗೋರಕ್ಷ ದಳದ ಸತೀಶ ಪ್ರಧಾನರವರು ಮಾತನಾಡುತ್ತ, ನಮ್ಮ ಕಾರ್ಯಕರ್ತರು ಈ ಕಾರ್ಖಾನೆಯ ಬಳಿ ತಲುಪುತ್ತಲೇ ಅಲ್ಲಿನ ಕಾವಲುಗಾರನು ಪರಾರಿಯಾದನು. ಪೊಲೀಸರು ದಾಳಿ ನಡೆಸಲು ಬರುತ್ತಿರುವ ಬಗ್ಗೆ ಸೂಚನೆ ಸಿಕ್ಕಿದ್ದರಿಂದ ಮೊದಲೇ ಕೆಲವರು ಪರಾರಿಯಾಗಿದ್ದ್ದರು ಎಂದು ಹೇಳಿದರು.
(ಸೌಜನ್ಯ – VK News)
ಸಂಪಾದಕೀಯ ನಿಲುವುಎಲ್ಲ ವ್ಯವಸ್ಥೆಯು ಕೈಯಲ್ಲಿರುವಾಗ ಪಂಜಾಬ ಪೊಲೀಸರು ಗೋಹಂತಕರ ಮೇಲೆ ಏಕೆ ಕ್ರಮಕೈಗೊಳ್ಳುವುದಿಲ್ಲ ? ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಸ್ವಲ್ಪವೂ ಬೆಲೆ ನೀಡದ ಪೊಲೀಸರು ಮುಸಲ್ಮಾನ ಹಾಗೂ ಕ್ರೈಸ್ತರ ತಥಾಕಥಿತ ಧಾಮಿರ್ಕ ಭಾವನೆಗಳಿಗೆ ನೋವು ಉಂಟಾಗದಂತೆ ಜಾಗರೂಕದಿಂದ ಇರುತ್ತಾರೆ ! ಭಾರತದಲ್ಲಿ ನುಸುಳಿರುವ ರೋಹಿಂಗ್ಯಾ ಮುಸಲ್ಮಾನರು ಹಿಂಸಾಚಾರ ಹಾಗೂ ಕಾನೂನುಬಾಹಿರ ಕೃತ್ಯಗಳಲ್ಲಿ ಸಹಭಾಗಿಯಾಗಿರುವ ಇನ್ನೊಂದು ಉದಾಹರಣೆ ಇದಾಗಿದೆ ! |