ಪಟಿಯಾಲ ಗುರುದ್ವಾರದಲ್ಲಿ ಮಹಿಳೆಯ ಹತ್ಯೆ : ಹಂತಕನ ಬಂಧನ
ಮೇ ೧೪ ರಂದು ಪಟಿಯಾಲಾ ಗುರುದ್ವಾರದಲ್ಲಿ ನಿರ್ಮಲಜಿತ್ ಸಿಂಗ್ ಎಂಬ ವ್ಯಕ್ತಿಯೊಬ್ಬ ಮಹಿಳೆಯನ್ನು ಗುಂಡಿಕ್ಕಿ ಕೊಂದಿದ್ದಾನೆ. ‘ಗುರುದ್ವಾರ ದುಖ್ ನಿವರನ್ ಸಾಹಿಬ್’ನ ಪ್ರದೇಶದ ಸರೋವರದ ಬಳಿ ಮಹಿಳೆ ಕುಳಿತು ಮದ್ಯ ಸೇವಿಸುತ್ತಿದ್ದಳು ಎಂದು ಆರೋಪಿಸಲಾಗಿದೆ.