ಅತ್ಯಾಚಾರದ ಪ್ರಕರಣದಲ್ಲಿನ ಸಾಕ್ಷಿದಾರನ ಹತ್ಯೆ

ಕೈರಾನಾದಲ್ಲಿಯ ಅತ್ಯಾಚಾರದ ಪ್ರಕರಣದಲ್ಲಿನ ಸಾಕ್ಷಿದಾರನನ್ನು ಆರೋಪಿಯು ಗುಂಡು ಹಾರಿಸಿ ಹತ್ಯೆ ಮಾಡಿದ್ದಾನೆ. ೨ ವರ್ಷದ ಹಿಂದೆ ಓರ್ವ ಯುವತಿಯ ಮೇಲೆ ಅತ್ಯಾಚಾರ ಮಾಡಿರುವ ಪ್ರಕರಣದಲ್ಲಿ ಇಬ್ಬರನ್ನು ಬಂಧಿಸಲಾಗಿತ್ತು.

ಭಾರತಕ್ಕೇ ಶೌರ್ಯಶಾಲಿ ಇತಿಹಾಸ ಇದ್ದರೂ ಕೂಡ ನಾವು ಕಾಬೂಲಿಗೆ ಸೈನ್ಯ ಕಳಿಸಲು ನಿರಾಕರಿಸಿದೆವು ! – ಡಾ. ಸುಬ್ರಹ್ಮಣ್ಯ ಸ್ವಾಮಿ

ಅಫ್ಘಾನಿಸ್ತಾನದ ಗಡಿ ಭಾರತಕ್ಕೆ (ಪಾಕ ಆಕ್ರಮಿತ ಕಾಶ್ಮೀರಕ್ಕೆ) ಅಂಟಿಕೊಂಡಿದೆ. ಅಫ್ಘಾನಿಸ್ತಾನದಲ್ಲಿ ಭಾರತ ಸಹ ಆಡಳಿತ ನಡೆಸಿದೆ. ಮಹಾಭಾರತ ಕಾಲದಿಂದ ಇತ್ತೀಚಿನ ಮಹಾರಾಜ ರಣಜಿತ್ ಸಿಂಹ ಇವರ ತನಕ ನಾವು ಅಫ್ಘಾನಿಸ್ತಾನದ ಮೇಲೆ ರಾಜ್ಯವಾಳಿದ ಇತಿಹಾಸವಿದೆ.

೧೦ ವರ್ಷಕ್ಕಿಂತ ಕಡಿಮೆ ವಯಸ್ಸಿನ ಹುಡುಗಿಯರು ತಮ್ಮ ತಂದೆಯೊಂದಿಗೆ ಶಬರಿಮಲೈ ದೇವಸ್ಥಾನಕ್ಕೆ ದರ್ಶನಕ್ಕಾಗಿ ಹೋಗಬಹುದು ! – ಕೇರಳ ಉಚ್ಚನ್ಯಾಯಾಲಯ

ಕೇರಳ ಉಚ್ಚನ್ಯಾಯಾಲಯವು ೧೦ ವರ್ಷದೊಳಗಿನ ಹುಡುಗಿಯರಿಗೆ ತಮ್ಮ ತಂದೆಯೊಂದಿಗೆ ಶಬರಿಮಲೈ ದೇವಸ್ಥಾನ ಪ್ರವೇಶಿಸಲು ಅನುಮತಿ ನೀಡಿದೆ. ಈ ಪ್ರಕರಣದಲ್ಲಿ, ೯ ವರ್ಷದ ಹುಡುಗಿಯು ತಾನು ತನ್ನ ತಂದೆಯ ಜೊತೆ ಶಬರಿಮಲೈ ದೇವಸ್ಥಾನಕ್ಕೆ ಹೋಗಬೇಕೆಂದು ಕೋರಿ ಅರ್ಜಿ ಸಲ್ಲಿಸಿದ್ದಳು.

ಅಕ್ರಮವಾಗಿ ಭಾರತೀಯ ಪರಿಚಯಪತ್ರವನ್ನು ತಯಾರಿಸುವ ಬಾಂಗ್ಲಾದೇಶೀ ಗುಂಪಿನ ಬಂಧನ

ಬಾಂಗ್ಲಾದೇಶೀ ನಾಗರಿಕರು ಭಾರತೀಯ ಪರಿಚಯಪತ್ರ (ಪಾಸ್ ಪೋರ್ಟ್) ವನ್ನು ತಯಾರಿಸಿ ಕೊಡುವ ಗುಂಪೊಂದನ್ನು ಠಾಣೆ ಅಪರಾಧ ಶಾಖೆಯು ಬಂಧಿಸಿದೆ. ಬಂಧಿಸಿದ ಆರೋಪಿಗಳಲ್ಲಿ ರಾಜೂ ಅಲಿಯಾಸ್ ಫಾರೂಖ ಸಫಿ ಮೊಲ್ಲಾ (ವಯಸ್ಸು ೨೯ ವರ್ಷ) ಎಂಬುವವನು ಬಾಂಗ್ಲಾದೇಶದ ಮೂಲನಿವಾಸಿಯಾಗಿದ್ದು ಅವನಿಗೆ ನ್ಯಾಯಾಲಯವು ಆಗಸ್ಟ್ ೧೬ರ ವರೆಗೆ ಪೊಲೀಸ್ ಕೊಠಡಿಯನ್ನು ವಿಧಿಸಿದೆ.

ಮೇಘಾಲಯದ ಮುಖ್ಯಮಂತ್ರಿಗಳ ಮನೆಯ ಮೇಲೆ ಪೆಟ್ರೋಲ್ ಬಾಂಬ್‌ನಿಂದ ದಾಳಿ !

ಮೇಘಾಲಯದ ಮುಖ್ಯಮಂತ್ರಿ ಹಾಗೂ ನ್ಯಾಶನಲ್ ಪೀಪಲ್ಸ್ ಪಾರ್ಟಿಯ ಮುಖಂಡರಾದ ಕೊನರಾಡ ಸಂಗಮಾರವರ ನಿವಾಸದ ಮೇಲೆ ಪೆಟ್ರೋಲ್ ಬಾಂಬಿನಿಂದ ದಾಳಿ ನಡೆದಿರುವ ಘಟನೆ ಆಗಸ್ಟ್ ೧೫ರ ರಾತ್ರಿ ನಡೆಯಿತು.

ರಾಷ್ಟ್ರ ಧ್ವಜವನ್ನು ತಲೆಕೆಳಗಾಗಿ ಹರಿಸಿದ್ದಕ್ಕೆ ಕೇರಳದ ಭಾಜಪ ನೇತಾರರ ಮೇಲೆ ಅಪರಾಧ ನೋಂದಾಯಿಸಲಾಗಿದೆ

ಸ್ಥಳೀಯ ಭಾಜಪ ಕಾರ್ಯಾಲಯದಲ್ಲಿ ಧ್ವಜಾರೋಹಣ ಸಮಾರಂಭದ ಸಮಯದಲ್ಲಿ ರಾಷ್ಟ್ರಧ್ವಜವನ್ನು ತಲೆಕೆಳಗಾಗಿ ಆರೋಹಿಸಲಾಗಿರುವ ಪ್ರಕರಣದಲ್ಲಿ ಕೇರಳ ಪೊಲೀಸರು ಭಾಜಪದ ಕೇರಳ ಶಾಖೆಯ ಪ್ರಮುಖ ಕೆ. ಸುರೇಂದ್ರನ್ ಇವರ ಮೇಲೆ ಅಪರಾಧವನ್ನು ದಾಖಲಿಸಿದ್ದಾರೆ.

ಮುಂಬೈನಲ್ಲಿ ಭಯೋತ್ಪಾದಕ ನಿಗ್ರಹ ದಳದಿಂದ ಇಬ್ಬರ ಬಂಧನ !

ಕಾನೂನುಬಾಹಿರ ಅಂತರಾಷ್ಟ್ರೀಯ ಸಂಪರ್ಕ ಕೇಂದ್ರವನ್ನು ನಡೆಸುತ್ತಿರುವ ಸಂಶಯದ ಮೇರೆಗೆ ಪೊಲೀಸರು ರತ್ನಾಗಿರಿಯಿಂದ ಇಬ್ಬರನ್ನು ಬಂಧಿಸಿದ್ದಾರೆ. ಭಯೋತ್ಪಾದಕ ನಿಗ್ರಹ ದಳದಿಂದ ದೊರೆತ ಮಾಹಿತಿಯ ಆಧಾರದಲ್ಲಿ ಈ ಕಾರ್ಯಾಚರಣೆಯನ್ನು ಮಾಡಲಾಗಿದೆ.

ವೀಕ್ಷಿಸಿ ವಿಡಿಯೋ : ‘ಲವ್ ಜಿಹಾದ್’ ಬಗ್ಗೆ ಜಾಗೃತಿ ನಿರ್ಮಿಸುವ ಹಿಂದಿ ಚಲನಚಿತ್ರ ‘ದಿ ಕನ್ವರ್ಷನ್’ನ ಟ್ರೇಲರ್ ಬಿಡುಗಡೆ !

ಲವ್ ಜಿಹಾದ್ ವಿರುದ್ಧ ಚಲನಚಿತ್ರ ನಿರ್ಮಿಸುವ ನಿರ್ದೇಶಕ ವಿನೋದ ತಿವಾರಿ ಮತ್ತು ‘ನೋಸ್ಟ್ರಮ್ ಎಂಟರ್‍ಟೈನ್‍ಮೆಂಟ್’ ಅವರನ್ನು ಎಷ್ಟೇ ಹೊಗಳಿದರೂ ಕಡಿಮೆಯೇ!

ಭಾರತೀಯ ನೌಕಾಪಡೆಯು ವಾಸ್ಕೋದ ಸೇಂಟ್ ಜೆಸಿಂತೊ ದ್ವೀಪದಲ್ಲಿ ಸ್ಥಳೀಯರ ಉಪಸ್ಥಿತಿಯಲ್ಲಿ ಧ್ವಜಾರೋಹಣ ಮಾಡಿದ್ದರಿಂದ ರಾಜ್ಯಾದ್ಯಂತ ದೇಶಭಕ್ತ ನಾಗರಿಕರಿಂದ ಅಭಿಪ್ರಾಯ !

ಸ್ಥಳೀಯರು ಈ ದ್ವೀಪವು ಖಾಸಗಿ ಆಸ್ತಿ ಎಂದು ಹೇಳುತ್ತಾ ಧ್ವಜಾರೋಹಣವನ್ನು ವಿರೋಧಿಸಿದ್ದರು, ಸ್ಥಳೀಯರ ವಿರೋಧದ ನಂತರ ನೌಕಾಪಡೆಯು ಧ್ವಜಾರೋಹಣ ಕಾರ್ಯಕ್ರಮವನ್ನು ರದ್ದುಗೊಳಿಸಿತ್ತು.

ಮಂದಿರ ಪರಿಸರದಲ್ಲಿದ್ದ ದೇವತೆಯ ಚಿತ್ರಗಳನ್ನು ಹರಿಯುವ ನೀರಿನಲ್ಲಿ ವಿಸರ್ಜಿಸಿದ ತೆಲಂಗಾಣದ ಬೋಧನ್(ಜಿಲ್ಲೆ ಇಂದುರ) ದ ಧರ್ಮಪ್ರೇಮಿಗಳು!

ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ತೆಲಂಗಾಣಾದಲ್ಲಿ ಬೋಧನ್‍ದಲ್ಲಿನ ಧರ್ಮ ಪ್ರೇಮಿಗಳ ಸಾಪ್ತಾಹಿಕ ಸಭೆಯನ್ನು ಆಯೋಜಿಸಲಾಗಿತ್ತು.