ದೆಹಲಿಯ ಹೋಟೆಲ್‌ನಲ್ಲಿ ಮಟನ್ ನೀಡಲಿಲ್ಲವೆಂದು ಪಾನಮತ್ತ ಪೊಲೀಸ್ ಪೇದೆಯಿಂದ ಮಾಲೀಕನಿಗೆ ಥಳಿತ

ಕಾನೂನುದ್ರೋಹಿ ಪೊಲೀಸ್ ! ಇಂತಹ ಪೊಲೀಸರನ್ನು ಕೆಲಸದಿಂದ ವಜಾ ಮಾಡಬೇಕು !

ನವ ದೆಹಲಿ – ಇಲ್ಲಿನ ಚಾವಲಾ ಪೊಲೀಸ್ ಠಾಣೆಯಲ್ಲಿ ಕಾರ್ಯನಿರತ ಪೊಲೀಸ್ ಪೇದೆ ರವೀಂದ್ರ ಕೆಲಸದಲ್ಲಿ ಇರುವಾಗ ಪಾನಮತ್ತನಾಗಿದ್ದ. ಆತ ಒಂದು ಹೋಟೆಲ್ ಮಾಲೀಕನಿಗೆ ಮಧ್ಯಾಹ್ನ ಊಟದಲ್ಲಿ ಮಟನ್ ನೀಡದೇ ಇದ್ದರಿಂದ ಥಳಿಸಿದ್ದಾನೆ. ಪೊಲೀಸರು ರವೀಂದ್ರ ಇವನನ್ನು ಬಂಧಿಸಿದ್ದಾರೆ ಮತ್ತು ತನಿಖೆ ನಡೆಯುವವರೆಗೂ ಆತನನ್ನು ಅಮಾನತ್ತುಗೊಳಿಸಲಾಗಿದೆ. ಈ ಘಟನೆ ದೆಹಲಿಯ ದ್ವಾರಕಾದಲ್ಲಿನ ಸೆಕ್ಟರ್ ೨೩ ರಲ್ಲಿ ನವೆಂಬರ್ ೭ ರಂದು ನಡೆದಿದೆ.