‘ಸನಾತನ ಸಂಸ್ಥೆಯನ್ನೂ ಅಪರಾಧ ಜಗತ್ತಿನೊಂದಿಗೆ (ಭೂಗತಲೋಕ) ಸಂಬಂಧ ಜೋಡಿಸಬೇಕೇ ? (ಅಂತೆ)

ದೇವೇಂದ್ರ ಫಡಣವೀಸ್ ಇವರ ಆರೋಪಕ್ಕೆ ಅಲ್ಪಸಂಖ್ಯಾತರ ಸಚಿವ ನವಾಬ್ ಮಲಿಕ್ ಇವರ ಪ್ರಶ್ನೆ !

ಮುಂಬಯಿ – ನಾನು ಯಾರ ಮೇಲೆಯೂ ಯಾವುದೇ ಒತ್ತಡದಲ್ಲಿ ಅಥವಾ ಯಾರ ಮೇಲಾದರೂ ಒತ್ತಡತಂದು ಯಾವುದೇ ಭೂಮಿಯನ್ನು ತೆಗೆದುಕೊಂಡಿಲ್ಲ. ನನಗೆ ಹಸೀನಾ ಪಾರ್ಕರ್ ಯಾರೆಂದೇ ಗೊತ್ತಿಲ್ಲ. ಹೀಗೆ ಯಾರನ್ನೋ ಯಾರಿಗೋ ಸಂಬಂಧ ಜೋಡಿಸಲಿಕ್ಕಿದ್ದರೆ, ಕೊಂಕಣದಲ್ಲಿರುವ ದಾವೂದ್ ಕಸ್ಕರ್ ಅವನ ಮನೆಯನ್ನು ಸನಾತನ ಸಂಸ್ಥೆ ತೆಗೆದುಕೊಂಡಿದೆ; ಹಾಗಾದರೆ ‘ಸನಾತನಕ್ಕೆ ದಾವುದ್ ಅಥವಾ ಅಪರಾಧ ಜಗತ್ತು(ಭೂಗತ)ದೊಂದಿಗೆ ನಂಟಿದೆ’, ಎಂದು ಹೇಳಬೇಕೇ ?’, ಎಂದು ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷದ ಶಾಸಕ ಮತ್ತು ಮಹಾರಾಷ್ಟ್ರ ರಾಜ್ಯದ ಅಲ್ಪಸಂಖ್ಯಾತರ ಸಚಿವ ನವಾಬ್ ಮಲಿಕ್ ಅವರು ವಿಧಾನಸಭೆಯಲ್ಲಿ ವಿಪಕ್ಷದ ನಾಯಕ ದೇವೇಂದ್ರ ಫಡಣವಿಸ್ ಅವರ ಆರೋಪಕ್ಕೆ ಉತ್ತರ ನೀಡುವಾಗ ಪ್ರಶ್ನಿಸಿದರು.

ದೇವೇಂದ್ರ ಫಡಣವೀಸ್ ಇವರು ನವಾಬ್ ಮಲಿಕ್ ಅಪರಾಧ ಜಗತ್ತಿಗೆ ಸಂಬಂಧಿಸಿದ ವ್ಯಕ್ತಿಗಳಿಂದ ಕಡಿಮೆ ಬೆಲೆಗೆ ಭೂಮಿಯನ್ನು ತೆಗೆದುಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ. ಅದಕ್ಕೆ ಮಲಿಕ ಇವರು ಈ ಮೇಲಿನ ಹೇಳಿಕೆಯನ್ನು ನೀಡಿದ್ದಾರೆ. ಅದೇ ರೀತಿ ನಾಳೆ (ನವೆಂಬರ್ ೧೦) ಬೆಳಗ್ಗೆ ೧೦ ಗಂಟೆಗೆ ದೇವೇಂದ್ರ ಫಡಣವೀಸ್‌ಗೆ ಅಪರಾಧ ಜಗತ್ತಿನೊಂದಿಗಿನ ಏನು ನಂಟಿದೆ ಎಂಬುದನ್ನು ಹಾಗೂ ಮುಖ್ಯಮಂತ್ರಿ ಇರುವಾಗ ಅವರು ಎಲ್ಲ ನಗರವನ್ನು ಒತ್ತೆಯಾಳಾಗಿ ಇರಿಸಿದ್ದರು, ಈ ಬಗ್ಗೆ ಮಾಹಿತಿಯನ್ನು ಬಹಿರಂಗ ಪಡಿಸಲಿದ್ದೇನೆ’, ಎಂದೂ ಮಲಿಕ್ ಹೇಳಿದ್ದಾರೆ.

ದೇವೇಂದ್ರ ಫಡಣವಿಸ್ ಅವರಿಂದ ಆಸ್ತಿ ಖರೀದಿ ವಿಷಯ, ಇದು ಇಲಿ ಹೋಯಿತು ಅಂದರೆ ಹುಲಿ ಹೋಯಿತು ಎಂಬಂತೆ !

ಮಲಿಕ ತಮ್ಮ ಮಾತನ್ನು ಮುಂದುವರೆಸುತ್ತಾ, ಸುಳ್ಳಿನ ಕಂತೆಯನ್ನು ನಿರ್ಮಿಸಿ ಯಾರೊಬ್ಬರ ಘನತೆ ಹಾಳಾಗುತ್ತದೆ ಎಂದು ನಿಮಗೆ ಅನಿಸುತ್ತಿದ್ದರೆ, ನೀವು ತಪ್ಪಾಗಿ ಅರ್ಥೈಸಿಕೊಳ್ಳುತ್ತೀರಿ. ಆಸ್ತಿ ಖರೀದಿ ವ್ಯವಹಾರದ ಎಲ್ಲಾ ದಾಖಲೆಗಳು ಲಭ್ಯವಿವೆ. ದೇವೇಂದ್ರ ಫಡಣವೀಸ್ ಅವರಿಂದ ಆಸ್ತಿ ಖರೀದಿ ವಿಚಾರವನ್ನು ಇಲಿ ಹೋಯಿತು ಅಂದರೆ ಹುಲಿ ಹೋಯಿತು ಎಂಬಂತೆ ಹೇಳಲಾಗುತ್ತಿದೆ. ದೇವೇಂದ್ರ ಫಡಣವೀಸ್‌ಗೆ ಮಾಹಿತಿ ನೀಡಿದವರು ಕಚ್ಚಾ ಆಟಗಾರರಾಗಿದ್ದಾರೆ. ನೀವೇ ಹೇಳಿದ್ದರೆ, ನಾನೇ ಎಲ್ಲ ದಾಖಲೆಗಳನ್ನು ಕೊಡುತ್ತಿದ್ದೆ. ದೇವೇಂದ್ರ ಫಡಣವೀಸ್ ಆಧಾರ ರಹಿತ ಆರೋಪ ಮಾಡಿದ್ದಾರೆ. ಅವರಿಗೆ ನೀಡಿರುವ ಮಾಹಿತಿಯು ತಪ್ಪಾಗಿದೆ. ಫಡಣವೀಸ್ ಯಾವುದೇ ವ್ಯವಸ್ಥೆಯ ಬಳಿ ಹೋಗಲಿ. ನಾನು ತನಿಖೆಗೆ ಸಿದ್ಧನಿದ್ದೇನೆ. ನಾನು ಯಾವುದೇ ಅಪರಾಧ ಜಗತ್ತಿನ ವ್ಯಕ್ತಿಯಿಂದ ಭೂಮಿ ಖರೀದಿಸಿಲ್ಲ. ಎಲ್ಲಿಯೂ ಅಲ್ಪ ಬೆಲೆಗೆ ಭೂಮಿ ಖರೀದಿಸಿಲ್ಲ ಎಂದು ಹೇಳಿದರು.