ಶಿಯಾ ಧರ್ಮಗುರುಗಳಿಂದ ಪುಸ್ತಕವನ್ನು ನಿಷೇಧಿಸುವಂತೆ ಒತ್ತಾಯ
ಲಕ್ಷ್ಮಣಪುರಿ (ಉತ್ತರಪ್ರದೇಶ) – ಉತ್ತರಪ್ರದೇಶ ಶಿಯಾ ವಕ್ಫ್ ಬೋರ್ಡಿನ ಮಾಜಿ ಅಧ್ಯಕ್ಷ ವಾಸಿಮ ರಿಜಿವಿ ಇವರು ಗಾಜಿಯಾಬಾದನಲ್ಲಿನ ಡಾಸನಾದ ಶ್ರೀ ಮಹಾಕಾಳಿ ದೇವಸ್ಥಾನಕ್ಕೆ ಹೋಗಿ ದೇವಿಯ ದರ್ಶನ ಪಡೆದರು. ಅದರ ನಂತರ ಅವರು ಇಲ್ಲಿಯ ಮಹಂತ ಯತಿ ನರಸಿಂಹಾನಂದ ಸರಸ್ವತಿ ಇವರ ಹಸ್ತದಿಂದ ಅವರ ‘ಮೊಹಮ್ಮದ್’ ಎಂಬ ಪುಸ್ತಕದ ಪ್ರಕಾಶನ ಮಾಡಿದರು. ವಾಸಿಮ್ ರಿಜವಿ ಕೆಲವು ತಿಂಗಳ ಹಿಂದೆ ಕುರಾನದಿಂದ ೨೬ ಆಯತಗಳನ್ನು ತೆಗೆದುಹಾಕುವಂತೆ ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ನ್ಯಾಯಾಲಯವು ಈ ಮನವಿಯನ್ನು ತಿರಸ್ಕರಿಸಿ ಅವರಿಗೆ ೫೦ ಸಾವಿರ ರೂಪಾಯಿ ದಂಡ ವಿಧಿಸಿತ್ತು.
(ಸೌಜನ್ಯ : Zee Uttar Pradesh UttaraKhand)
ಶಿಯಾ ಧರ್ಮಗುರು ಮೌಲಾನಾ ಸೈಫ ಅಬ್ಬಾಸ್ ಇವರು ರಿಜವಿ ಇವರ ಹೊಸ ಪುಸ್ತಕದ ಮೇಲೆ ನಿಷೇಧ ಹೇರುವಂತೆ ಒತ್ತಾಯಿಸಿದ್ದಾರೆ. ಅವರು, ರಿಜವಿ ಇವರು ಜಗತ್ತಿನ ಎಲ್ಲಾ ಮುಸಲ್ಮಾನರ ಧಾರ್ಮಿಕ ಭಾವನೆಗೆ ನೋವುಂಟು ಮಾಡಿದ್ದಾರೆ. ಅವರು ಕೂರಾನ್‌ನ ತೇಜೋವಧೆ ಮಾಡಿದ್ದಾರೆ. ಸರಕಾರವು ರಿಜವಿ ಇವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ನಾವು ಸರಕಾರದ ಬಳಿ ಒತ್ತಾಯಿಸುತ್ತೇವೆ ಎಂದು ಹೇಳಿದರು.
(ಸೌಜನ್ಯ : Vishalviews)
ಇಸ್ಲಾಂನ ಪ್ರಸಾರ ಹೇಗಾಯಿತು ಮತ್ತು ಅದರ ಉದ್ದೇಶವೇನು ? ಎಂಬುದು ಈ ಪುಸ್ತಕದಿಂದ ಗಮನಕ್ಕೆ ಬರಲಿದೆ ! – ವಸಿಮ ರಿಜವಿ
‘ಮೊಹಮ್ಮದ್’ ಈ ಪುಸ್ತಕ ವಿಷಯವಾಗಿ ವಸಿಮ ರಿಜವಿಯವರು ಹೇಳುತ್ತಾ, ಇಸ್ಲಾಂ ಜಗತ್ತಿನಲ್ಲಿ ಏಕೆ ಬಂದಿದೆ ? ಮತ್ತು ಅದರ ಹಿಂದೆ ಭಯೋತ್ಪಾದಕ ವಿಚಾರ ಏಕಿದೆ ? ಇದರ ಮಾಹಿತಿಯು ಪುಸ್ತಕದಲ್ಲಿ ನೀಡಲಾಗಿದೆ. ಈ ಪುಸ್ತಕದಲ್ಲಿ ಮಹಮ್ಮದ್ ಪೈಗಂಬರ್ ಇವರ ಚರಿತ್ರೆ ನೀಡಲಾಗಿದೆ. ಈ ಪುಸ್ತಕವು ಮತಾಂತರ ತಡೆಯುವಲ್ಲಿ ಸಹಾಯಕವಾಗಬಹುದು. ಈ ಪುಸ್ತಕದಲ್ಲಿ ಇಸ್ಲಾಮಿಕ ಮೂಲಭೂತವಾದಿ ವಿಚಾರವನ್ನು ತಿಳಿಸಲಾಗಿದೆ. ಇಸ್ಲಾಂ ಹೇಗೆ ಹರಡಿತು ? ಮತ್ತು ಅದರ ಉದ್ದೇಶವೇನು ? ಇದೆಲ್ಲವೂ ಈ ಪುಸ್ತಕದಿಂದ ತಿಳಿದುಕೊಳ್ಳಬಹುದು ಎಂದು ಹೇಳಿದ್ದಾರೆ.