ಹಿಂದೂಗಳಿಗೆ ರಕ್ಷಣೆ ನೀಡುವುದು, ಸಂಘದ ಶಾಖೆಗಳನ್ನು ವಿಸ್ತರಿಸುವುದು ಮತ್ತು ಹಿಂದೂಹಿತದ ಮಾರ್ಗವನ್ನು ಪ್ರಶಸ್ತಗೊಳಿಸುವುದರ ಮೇಲೆ ಕೇಂದ್ರೀಕರಿಸಲಾಗುವುದು !

ಸರಸಂಘಚಾಲಕ ಮೋಹನ ಭಾಗವತರವರ ಬಂಗಾಲ ಭೇಟಿ

ನಾಗಪುರ – ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕರಾದ ಡಾ. ಮೊಹನ ಭಾಗವತರವರು ನವೆಂಬರ್ ೧೫ ರಿಂದ ೧೭ ಈ ಅವಧಿಯಲ್ಲಿ ಬಂಗಾಲಕ್ಕೆ ಭೇಟಿ ನೀಡಲಿದ್ದಾರೆ. ಚುನಾವಣೆಯ ಬಳಿಕ ಅವರು ಮೊದಲ ಬಾರಿ ಬಂಗಾಲ ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ. ಡಾ. ಭಾಗವತರವರು ವಿಶೇಷವಾಗಿ ಸಂಘದ ದಸರಾ ಉತ್ಸವದಲ್ಲಿ ಮಾತನಾಡುವಾಗ, ಪಶ್ಚಿಮ ಬಂಗಾಲದಲ್ಲಿ ಹಿಂದೂಗಳ ಕೊಲೆ ಮತ್ತು ಅಲ್ಪ ಜನಸಂಖ್ಯೆಯಿಂದ ಆಗುತ್ತಿರುವ ಹಿಂದೂಗಳ ಪಲಾಯನದ ಬಗ್ಗೆ ಚಿಂತೆ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಅವರ ಭೇಟಿಗೆ ವಿಶೇಷ ಮಹತ್ವವಿದೆ. ಬಂಗಾಲದಲ್ಲಿ ಹಿಂದೂಗಳಿಗೆ ರಕ್ಷಣೆ ನೀಡುವುದು, ಸಂಘದ ಶಾಖೆಯನ್ನು ವಿಸ್ತಾರ ಮಾಡುವುದು ಮತ್ತು ವಿವಿಧ ಕ್ಷೇತ್ರದಲ್ಲಿನ ವಿಚಾರವಂತರೊಂದಿಗೆ ಚರ್ಚಿಸಿ ಹಿಂದೂಹಿತದ ಮಾರ್ಗವನ್ನು ಪ್ರಶಸ್ತಗೊಳಿಸುವುದರ ಬಗ್ಗೆ ಗಮನಹರಿಸುವುದಾಗಿ ತಿಳಿಯಲಾಗಿದೆ. ಬಂಗಾಲ ಭೇಟಿಯಲ್ಲಿ ಸರಸಂಘಚಾಲಕರು ಸಂಘದ ಕ್ಷೇತ್ರ ಮತ್ತು ಪ್ರಾಂತ್ಯ ಪ್ರಚಾರಕರ ಸಭೆ ತೆಗೆದುಕೊಳ್ಳಲಿದ್ದಾರೆ ಮತ್ತು ಬಂಗಾಲದಲ್ಲಿನ ಪ್ರಬುದ್ಧ ಜನರೊಂದಿಗೆ ಸಂವಾದ ನಡೆಸಲಿದ್ದಾರೆ.

ಹಿಂದೂಗಳ ಸಂಖ್ಯೆ ಕಡಿಮೆಯಾಗಿ ಮುಸಲ್ಮಾನ ಮತ್ತು ಕ್ರೈಸ್ತರ ಜನಸಂಖ್ಯೆ ಹೆಚ್ಚಿದೆ !

‘ಹಿಂದೆ ಭಾರತದಲ್ಲಿ ಶೇಕಡಾ ೮೮ರಷ್ಟು ಹಿಂದೂಗಳಿದ್ದರು. ಈಗ ಅದು ಕಡಿಮೆಯಾಗಿ ಅದರ ಪ್ರಮಾಣವು ಶೇಕಡಾ ೮೩.೮ ರಷ್ಟಾಗಿದೆ ಹಾಗೂ ಮುಸಲ್ಮಾನರ ಜನಸಂಖ್ಯೆಯು ಶೇ. ೯.೮ ರಿಂದ ಶೇ. ೧೪.೨೩ ರಷ್ಟು ಹೆಚ್ಚಾಗಿದೆ. ಮಣಿಪುರದಲ್ಲಿ ಕ್ರೈಸ್ತರ ಜನಸಂಖ್ಯೆಯು ಶೇ. ೧೩ ರಷ್ಟು ಹೆಚ್ಚಾಗಿದೆ. ಆಸಾಮ, ಪಶ್ಚಿಮ ಬಂಗಾಲ ಮತ್ತು ಬಿಹಾರದಂತಹ ರಾಜ್ಯಗಳಲ್ಲಿ ಮುಸಲ್ಮಾನರ ಜನಸಂಖ್ಯೆಯಲ್ಲಿ ಹೆಚ್ಚಳವು ರಾಷ್ಟ್ರೀಯ ಜನಸಂಖ್ಯೆಯ ವೃದ್ಧಿಯಲ್ಲಿ ಸರಾಸರಿಗಿಂತ ಹೆಚ್ಚಾಗಿರುವುದು ಕಾಣಿಸುತ್ತಿದೆ. ಇದರಿಂದ ಬಾಂಗ್ಲಾದೇಶದಿಂದ ಆಗುವ ಒಳನುಸುಳುವಿಕೆ ಸಾಬೀತಾಗುತ್ತದೆ’, ಎಂದು ಡಾ. ಭಾಗವತರವರು ಹೇಳಿದ್ದರು. ದೇಶದಲ್ಲಿ ೧೯೫೭ ಮತ್ತು ೨೦೧೧ ನೇ ಇಸವಿಯ ಜನಗಣತಿಯನ್ನು ಹೋಲಿಸಿದಾಗ ಸಂಖ್ಯೆಯಲ್ಲಿರುವ ವ್ಯತ್ಯಾಸ ಸ್ಪಷ್ಟವಾಗುತ್ತದೆ.

ನುಸುಳುಖೋರರು ಹಿಂದೂಗಳ ಮತಾಂತರದಿಂದ ಜನಸಂಖ್ಯೆಯಲ್ಲಿ ಮತಾಧಾರಿತ ಅಸಂತುಲನೆ ! ? ಸರಸಂಘಚಾಲಕರು

‘ವಿದೇಶದಿಂದ ಆಗುವ ನುಸುಳುವಿಕೆ ಮತ್ತು ದೇಶದಲ್ಲಾಗುತ್ತಿರುವ ಮತಾಂತರದಿಂದ ಜನಸಂಖ್ಯೆಯಲ್ಲಿ ಮತಾಧಾರಿತ ಅಸಂತುಲನೆ ನಿರ್ಮಾಣವಾಗುತ್ತಿದೆ. ಈ ಪ್ರಕಾರವು ದೇಶದಕ್ಕಾಗಿ ಘಾತಕವಾಗಿದ್ದು ಅದರಿಂದ ಗಂಭೀರವಾದ ಸಮಸ್ಯೆಗಳು ನಿರ್ಮಾಣವಾಗಬಹುದು’, ಎಂದು ಸರಸಂಘಚಾಲಕರಾದ ಡಾ. ಮೊಹನ ಭಾಗವತರವರು ನಾಗಪುರದಲ್ಲಿ ಆಯೋಜಿಸಲಾದ ಸಂಗದ ವಿಜಯದಶಮಿಯ ಕಾರ್ಯಕ್ರಮದಲ್ಲಿ ಮಾತನಾಡುತ್ತಿರುವಾಗ ಹೇಳಿದರು.