ರೈತರ ಆಂದೋಲನದಿಂದ ಭಾರತೀಯ ಸೇನೆಯ ಮೇಲೆ ಪರಿಣಾಮ ! – ಮೇಘಾಲಯ ರಾಜ್ಯಪಾಲ ಸತ್ಯಪಾಲ ಮಲಿಕ

ಮೇಘಾಲಯ ರಾಜ್ಯಪಾಲ ಸತ್ಯಪಾಲ ಮಲಿಕ

ಜೈಪುರ (ರಾಜಸ್ಥಾನ) – ಸೈನ್ಯದ ಇಬ್ಬರು ಜನರಲ್‍ಗಳು, ರೈತರ ಆಂದೋಲನ ಭಾರತೀಯ ಸೇನೆಯ ಮೇಲೂ ಪರಿಣಾಮ ಬೀರುತ್ತಿದೆ ಎಂದು ಹೇಳಿದ್ದಾರೆ. ಆದ್ದರಿಂದ ಏನು ಬೇಕಾದರೂ ಆಗಬಹುದು. ಇಂದು ನೀವು ಅಧಿಕಾರದ ಗದ್ದುಗೆಯಲ್ಲಿದ್ದೀರಿ ಮತ್ತು ಅಹಂಕಾರದಲ್ಲಿ ಮನಸ್ಸಿಗೆ ಬಂದಂತೆ ಮಾಡುತ್ತಿದ್ದಿರಿ; ಆದರೆ ಇದರ ಪರಿಣಾಮ ಏನಾಗಲಿದೆ ಎಂಬುದು ನಿಮಗೆ ಗೊತ್ತಿಲ್ಲ ಎಂದು ಮೇಘಾಲಯದ ರಾಜ್ಯಪಾಲ ಸತ್ಯಪಾಲ ಮಲಿಕರು ಇಲ್ಲಿ ನಡೆದ ವಿಶ್ವ ಜಾಟ್ ಸಮಾವೇಶದಲ್ಲಿ ಹೇಳಿದ್ದಾರೆ.

1. ಸತ್ಯಪಾಲ ಮಲಿಕ ತಮ್ಮ ಮಾತನ್ನು ಮುಂದುವರೆಸುತ್ತಾ, ಕಾರ್ಗಿಲ್‍ನಲ್ಲಿ ಸರಕಾರವು ಮಾಡಿದ ತಪ್ಪಿಗೆ ರೈತರ ಮಕ್ಕಳು ಬೆಲೆ ತೆರಬೇಕಾಯಿತು. ಕಾರ್ಗಿಲ್ ಯುದ್ಧವಾದಾಗ ರೈತರ 20 ವರ್ಷದ ಮಕ್ಕಳು ಪರ್ವತಗಳನ್ನೇರಿದ್ದರು. ಕಾರ್ಗಿಲ್‍ನಲ್ಲಿ ಶತ್ರುಗಳು ನುಸುಳಿದ್ದು ಸರಕಾರದ ತಪ್ಪಾಗಿತ್ತು, ಎಂದು ನನಗೆ ಅನಿಸುತ್ತದೆ; ಆದರೆ ಇದರ ಬೆಲೆಯನ್ನು ರೈತರ ಸೈನಿಕ ಮಕ್ಕಳು ಯುದ್ಧದಲ್ಲಿ ಪ್ರಾಣವನ್ನು ತ್ಯಜಿಸಿ ತೆರಬೇಕಾಯಿತು. ಈ ಅನ್ಯಾಯ ರೈತರೊಂದಿಗೆ ಮಾತ್ರ ಆಗುತ್ತಿದೆ. ಜನರು ಇದಕ್ಕೆ ಪ್ರತಿಕ್ರಿಯಿಸುತ್ತಿದ್ದಾರೆ; ಆದರೆ ಮುಂದೊಂದು ದಿನ ಈ ಬಗ್ಗೆ ರೈತರಿಂದ ತೀವ್ರ ಆಕ್ರೋಶದ ಅಲೆ ಎದ್ದೇಳಬಾರದು, ಎಂದು ನನಗೆ ಅನಿಸುತ್ತದೆ. ಈವರೆಗೆ ರೈತರು ಕಲ್ಲು ಎತ್ತಿಕೊಂಡಿಲ್ಲ ಎಂದರು,

2. ರೈತರ ಆಂದೋಲನದ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರನ್ನೂ ಭೇಟಿಯಾಗಿದ್ದೇನೆ ಎಂದು ಸತ್ಯಪಾಲ ಮಲಿಕರು ಹೇಳಿದ್ದಾರೆ. ಮಲಿಕರು ತಮ್ಮ ಮಾತನ್ನು ಮುಂದುವರೆಸುತ್ತಾ, `ನನಗೆ ತುಂಬಾ ನೋವಾಗಿತ್ತು ಮತ್ತು ನಾನು ಕೋಪಗೊಂಡಿದ್ದೆನು’. ನಾನು ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿ ಅವರು ಪರಿಸ್ಥಿತಿಯನ್ನು ತಪ್ಪಾಗಿ ಅರ್ಥೈಸಿಕೊಳ್ಳುತ್ತಿದ್ದಾರೆ ಎಂದು ಹೇಳಿದ್ದೆ. ಸಿಕ್ಖರನ್ನು ಅಥವಾ ಜಾಟರನ್ನು ಸೋಲಿಸಲು ಸಾಧ್ಯವಿಲ್ಲ. ರೈತರು ಸುಲಭವಾಗಿ ವಾಪಾಸು ಹೋಗುತ್ತಾರೆ ಎಂದು ನೀವು ಭಾವಿಸುತ್ತಿದ್ದೀರಿ; ಆದರೆ ಅದು ಹಾಗಾಗುವುದಿಲ್ಲ. ಅವರ ಬೇಡಿಕೆಗಳನ್ನು ಒಪ್ಪಿಕೊಳ್ಳಿ” ಎಂದರು.

3. ಮಲಿಕರು ತಮ್ಮ ಮಾತನ್ನು ಮುಂದುವರೆಸುತ್ತಾ, ಒಬ್ಬಿಬ್ಬರ ತಲೆಯಲ್ಲಿ ಅಧಿಕಾರದ ದಾಹ ಎಷ್ಟು ತುಂಬಿದೆ ಎಂದರೆ ಅವರಿಗೆ ಭೂಮಿಯೇ ಕಾಣಿಸುತ್ತಿಲ್ಲ; ಆದರೆ ರಾವಣನಿಗೂ ದುರಹಂಕಾರವಿತ್ತು ಎಂದು ಹಳ್ಳಿಗಳಲ್ಲಿ ಹೇಳಲಾಗುತ್ತದೆ. ಒಂದು ದಿನ ಅವರಿಗೂ ಸಹ (ಅಧಿಕಾರಿಗಳಿಗೆ) ಇದು ಅವರ ತಪ್ಪಾಗಿದೆ ಎಂದು ತಿಳಿಯುವುದು. ಆ ದಿನ ಶೀಘ್ರದಲ್ಲೇ ಬರಲಿದೆ ಎಂದು ನನಗೆ ಅನಿಸುತ್ತಿದೆ, ಎಂದರು

4. ಮಲಿಕ ಇವರು ಸಿಕ್ಖರು ಸಿಟ್ಟಿನಿಂದ ಮಾಡಿದ ಕೃತಿಗಳ ಕೆಲವು ಐತಿಹಾಸಿಕ ಉದಾಹರಣೆಗಳನ್ನು ಸಹ ಉಲ್ಲೇಖಿಸಿದ್ದಾರೆ. ಅವರು, ಮಾಜಿ ಪ್ರಧಾನಿ ಇಂದಿರಾ ಗಾಂಧಿ ಇವರು ಸುವರ್ಣ ಮಂದಿರದಲ್ಲಿ ಖಲಿಸ್ತಾನಿಗಳ ವಿರುದ್ಧ ಸೈನ್ಯ ಕಾರ್ಯಾಚರಣೆ ಕೈಗೊಂಡಿದ್ದರು ಇದರಿಂದ ಸಿಕ್ಖ್ ಸಮುದಾಯಕ್ಕೆ ನೋವಾಗಿತ್ತು. ಇದರ ಬೆಲೆಯನ್ನು ಇಂದಿರಾಗಾಂಧಿಯವರು ತಮ್ಮ ಪ್ರಾಣ ಕೊಟ್ಟು ತೆರಬೇಕಾಯಿತು. ಸೇನಾ ಮುಖ್ಯಸ್ಥ ಜನರಲ್ ಅರುಣ್ ಕುಮಾರ ವೈದ್ಯ ಅವರು ನಿವೃತ್ತಿಯ ನಂತರ ಪುಣೆಯಲ್ಲಿ ಕೊಲ್ಲಲ್ಪಟ್ಟರು. (ಸ್ವಾತಂತ್ರ್ಯ ಪೂರ್ವ ಕಾಲದಲ್ಲಿ) ಜಲಿಯನ್‍ವಾಲಾ ಬಾಗ್ ಹತ್ಯಾಕಾಂಡವನ್ನು ನಡೆಸಿದ ಜನರಲ್ ಡಾಯರ್ ಕೂಡ ಲಂಡನ್‍ನಲ್ಲಿ ಹತ್ಯೆಗೀಡಾದರು ಎಂದು ಹೇಳಿದರು.