ರಾಜ್ಯ ಸರಕಾರದಿಂದ ’ಮುಂಬೈ ಕರ್ನಾಟಕ’ ಪ್ರದೇಶಕ್ಕೆ ‘ಕಿತ್ತೂರು ಕರ್ನಾಟಕ’ವೆಂದು ನಾಮಕರಣ

ಬೆಳಗಾವಿ – ಸ್ವಾತಂತ್ರ್ಯಪೂರ್ವ ಕಾಲದಲ್ಲಿ ಬೆಳಗಾವಿ, ಕಾರವಾರ, ಧಾರವಾಡ ಮತ್ತು ವಿಜಯಪುರ ಪ್ರದೇಶಗಳು ಮುಂಬೈ ಪ್ರಾಂತದಲ್ಲಿ ಇದ್ದವು. ಸ್ವಾತಂತ್ರ್ಯದ ನಂತರ ಮತ್ತು ೧೯೭೩ ನೇ ಇಸವಿಯಲ್ಲಿ ಕರ್ನಾಟಕ ರಾಜ್ಯದ ನಿರ್ಮಾಣವಾದ ನಂತರ ಪ್ರದೇಶಗಳನ್ನು ‘ಮುಂಬೈ ಕರ್ನಾಟಕ’ವೆಂದು ಗುರುತಿಸಲಾಗುತ್ತಿತ್ತು, ಆದರೆ ಈಗ ಕರ್ನಾಟಕ ಸರಕಾರ ಈ ಭಾಗಕ್ಕೆ ಕಿತ್ತೂರು ಕರ್ನಾಟಕವೆಂದು ನಾಮಕರಣ ಮಾಡಿದೆ. ಹೆಸರನ್ನು ಬದಲಾವಣೆ ಮಾಡುವ ವಿಷಯವಾಗಿ ಸರಕಾರದ ಪ್ರಕ್ರಿಯೆ ಪೂರ್ಣವಾದ ನಂತರ ಕರ್ನಾಟಕ ಸರಕಾರವು ಘೋಷಣೆ ಮಾಡಿದೆ.

ಈ ಮೊದಲು ಕರ್ನಾಟಕ ಸರಕಾರವು ‘ಹೈದರಾಬಾದ್ ಕರ್ನಾಟಕ’ದ ಹೆಸರು ಬದಲಿಸಿ ‘ಕಲ್ಯಾಣ ಕರ್ನಾಟಕ’ ಎಂದು ಮಾಡಿತ್ತು.