ಅಯೋಧ್ಯೆಯ ಶ್ರೀರಾಮಮಂದಿರದ ಮಾರ್ಗದಲ್ಲಿರುವ ವೃತ್ತಕ್ಕೆ ಲತಾಮಂಗೇಶ್ಕರ್ ಇವರ ಹೆಸರು ನೀಡುವೆವು ! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಘೋಷಣೆ
ಲತಾ ಮಂಗೇಶ್ಕರ್ ಇವರು ರಾಮ ಭಕ್ತರಾಗಿದ್ದರು. ಆದ್ದರಿಂದ ಅಯೋಧ್ಯೆಯಲ್ಲಿ ಭವ್ಯವಾದ ಶ್ರೀ ರಾಮಮಂದಿರ ನಿರ್ಮಾಣವಾಗುವಾಗ ಲತಾಜಿಯ ಸ್ಮರಣೆ ಆಗಬೇಕೆಂದು ನಮಗೆ ಅನಿಸುತ್ತದೆ. ಅದಕ್ಕಾಗಿ ಶ್ರೀ ರಾಮ ಮಂದಿರಕ್ಕೆ ಹೋಗುವ ಮುಖ್ಯ ಮಾರ್ಗದಲ್ಲಿರುವ ಒಂದು ವೃತ್ತಕ್ಕೆ ಭಾರತ ರತ್ನ ಲತಾ ಮಂಗೇಶ್ಕರ್ ಇವರ ಹೆಸರು ನೀಡಲಾಗುವುದು. ಇದು ನಮ್ಮ ಸರಕಾರದ ಸಂಕಲ್ಪವಾಗಿದೆ, ಎಂದು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಇಲ್ಲಿಯ ಸಾರ್ವಜನಿಕ ಸಭೆಯಲ್ಲಿ ಘೋಷಣೆ ಮಾಡಿದರು.