ಇಸ್ಲಾಮ್ ನ ಕಟ್ಟರವಾದ ಸಿದ್ಧಾಂತದಿಂದ ಬೇಸತ್ತು ಪತ್ನಿ ಮತ್ತು ಮಕ್ಕಳೊಂದಿಗೆ ಸನಾತನ ಧರ್ಮ ಸ್ವೀಕಾರ!

ಸಹಾರನಪುರ (ಉತ್ತರಪ್ರದೇಶ) – ಇಲ್ಲಿನ ಶಹಜಾದ್ ಹೆಸರಿನ ಮುಸಲ್ಮಾನ ವ್ಯಕ್ತಿಯೊಬ್ಬರು ತಮ್ಮ ಸಂಪೂರ್ಣ ಕುಟುಂಬದೊಂದಿಗೆ ಘರ್ ವಾಪ್ಸಿ ಆಗಿದ್ದಾರೆ. ಬೆಹಡೀ ಗ್ರಾಮದಲ್ಲಿ ವಾಸಿಸುವ 40 ವರ್ಷದ ಶಹಜಾದ್ ತಮ್ಮ ಪತ್ನಿ ಮತ್ತು ಮಕ್ಕಳೊಂದಿಗೆ ಸನಾತನ ಧರ್ಮವನ್ನು ಸ್ವೀಕರಿಸಿದರು. ಶಹಜಾದ್ ಅವರ ಹೊಸ ಹೆಸರನ್ನು ‘ಶಂಕರ’ ಎಂದು ಇಡಲಾಗಿದೆ. ತಮ್ಮ ಶ್ರದ್ಧೆ ಮತ್ತು ನಂಬಿಕೆಯ ಆಧಾರದ ಮೇಲೆಯೇ ತಾವು ಈ ನಿರ್ಧಾರವನ್ನು ತೆಗೆದುಕೊಂಡಿರುವುದಾಗಿ ಅವರು ಹೇಳಿದ್ದಾರೆ.

1. ಹರಿದ್ವಾರದಲ್ಲಿ ಧರ್ಮಾಚಾರ್ಯ ಅರುಣ ಕೃಷ್ಣ ಮಹಾರಾಜ ಅವರ ಉಪಸ್ಥಿತಿಯಲ್ಲಿ ಶಹಜಾದ್ ಮತ್ತು ಅವರ ಕುಟುಂಬದವರು ವೈದಿಕ ಪರಂಪರೆಯಂತೆ ಸನಾತನ ಧರ್ಮವನ್ನು ಸ್ವೀಕರಿಸಿದರು.
2. ಜೂನ್ 19 ರಂದು ಶಂಕರ ತಮ್ಮ ಕುಟುಂಬದೊಂದಿಗೆ ಸಹಾರನಪುರಕ್ಕೆ ಮರಳಿದರು. ಗ್ರಾಮಸ್ಥರು ತಿಲಕವನ್ನಿಟ್ಟು ಮತ್ತು ಹಾರಗಳನ್ನು ಹಾಕಿ ಕುಟುಂಬವನ್ನು ಸ್ವಾಗತಿಸಿದರು. ಗ್ರಾಮಕ್ಕೆ ತಲುಪಿದ ನಂತರ ಕುಟುಂಬದವರು ಮೊಟ್ಟಮೊದಲಿಗೆ ಭಗವಾನ್ ಶಿವನ ದೇವಸ್ಥಾನಕ್ಕೆ ತೆರಳಿ ಪೂಜೆ-ಅರ್ಚನೆ ಮಾಡಿದರು.
3. ಕುಟುಂಬದ ಸದಸ್ಯರ ಹೆಸರುಗಳನ್ನೂ ಸಹ ಬದಲಾಯಿಸಲಾಗಿದೆ. ಪತ್ನಿ ರಜಿಯಾಳ ಹೆಸರು ಸಾವಿತ್ರಿ, ಮಗ ರಿಹಾನ್ ನ ಹೆಸರು ರುದ್ರ, ಮಗಳು ಮುಸ್ಕಾನಳ ಹೆಸರು ರುಕ್ಮಿಣಿ ಮತ್ತು ಇನ್ನೊಬ್ಬ ಮಗಳು ರೋಜಿಯ ಹೆಸರು ದೀಕ್ಷಾ ಎಂದು ಇಡಲಾಗಿದೆ.
4. ಶಂಕರ ಅವರ ಹೇಳಿಕೆಯ ಪ್ರಕಾರ, ಅವರಿಗೆ ಮೊದಲಿನಿಂದಲೂ ಸನಾತನ ಧರ್ಮದ ಮೇಲೆ ಶ್ರದ್ಧೆಯಿತ್ತು ಮತ್ತು ಅವರು ಇಸ್ಲಾಮ್ ನ ಕಟ್ಟರವಾದ ವಿಚಾರಧಾರೆಗೆ ಬೇಸತ್ತಿದ್ದರು.
5. ಶಂಕರ ಅವರು ತಿಳಿಸಿರುವಂತೆ, ಅವರು ಅನೇಕ ಬಾರಿ ಪೂಜೆ-ಪಾಠ ಮತ್ತು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದರು. ಈ ಕಾರಣಕ್ಕಾಗಿ ಮೌಲಾನಾಗಳು (ಇಸ್ಲಾಮ್ ವಿದ್ವಾಂಸರು) ಅವರ ವಿರುದ್ಧ ಫತ್ವಾಗಳನ್ನು ಹೊರಡಿಸುತ್ತಿದ್ದರು.
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”
ಭೋಜಶಾಲೆಯ ಪ್ರಕರಣದಲ್ಲಿ ಮಧ್ಯಪ್ರದೇಶ ಉಚ್ಚ ನ್ಯಾಯಾಲಯದ ತೀರ್ಪಿಗೆ ತಡೆ ನೀಡಲು ಸರ್ವೋಚ್ಚ ನ್ಯಾಯಾಲಯದ ನಿರಾಕರಣೆ
ಮೇವು ಹಗರಣ ಪ್ರಕರಣದಲ್ಲಿ ಲಾಲು ಪ್ರಸಾದ್ ಯಾದವ್ ಅವರಿಗೆ ಮಂಜೂರಾದ ಜಾಮೀನು ರದ್ದುಗೊಳಿಸಲು ಸುಪ್ರೀಂ ಕೋರ್ಟ್ ನ ನಿರಾಕರಣೆ
ಭಗವಾನ್ ಜಗನ್ನಾಥರ ರಥಯಾತ್ರೆಗೂ ಮುನ್ನ ಗುಜರಾತ್ನಲ್ಲಿ ೫ ಭಯೋತ್ಪಾದಕರ ಬಂಧನ
ನ್ಯಾಯಾಧೀಶರ ಕುರ್ಚಿಯ ಮೇಲೆ ಮಾಟಮಂತ್ರ ಮಾಡಿದ ಆರೋಪದಡಿ ಮಹಿಳೆಯ ಬಂಧನ