ಸುರೇಶ ಚಹ್ವಾಣಕೆಯವರೊಂದಿಗೆ ೧೧ ಹಿಂದುತ್ವನಿಷ್ಠರ ಹತ್ಯೆಯ ಮತಾಂಧರ ಷಡ್ಯಂತ್ರವು ಬಹಿರಂಗವಾಗಿದ್ದರಿಂದ ರಾಜ್ಯಸಭೆಯಲ್ಲಿ ಭಾಜಪದ ಸಂಸದರ ಬೇಡಿಕೆ
|
ನವದೆಹಲಿ – ಸುದರ್ಶನ ಟಿವಿಯ ಸಂಪಾದಕರಾದ ಸುರೇಶ ಚಹ್ವಾಣಕೆರವರಿಗೆ ಸಂರಕ್ಷಣೆ ಒದಗಿಸಬೇಕು, ಎಂದು ಭಾಜಪದ ಸಂಸದರಾದ ಕೈಲಾಶ ಸೋನಿಯವರು ಮನವಿರಾಜ್ಯಸಭೆಯಲ್ಲಿ ಮನವಿ ಮಾಡಿದ್ದಾರೆ. ಅವರು ಗುಜರಾತಿನಲ್ಲಿರುವ ಮತಾಂಧರು ಕಿಶನ ಬೋಲಿಯಾ (ಭರವಾಡ)ರವರ ಹತ್ಯೆ ಮಾಡಿರುವ ಬಗ್ಗೆ ಮಾತನಾಡುತ್ತಿದ್ದರು. ಕಿಶನರವರ ಹತ್ಯೆ ಮಾಡಲು ಮೌಲಾನಾ (ಇಸ್ಲಾಮಿ ವಿದ್ವಾಂಸ) ಶಬ್ಬೀರನು ಆರೋಪಿಗಳಿಗೆ ಹೇಳಿದ್ದನು. ಹಾಗೆಯೇ ಶಬ್ಬೀರನು ಆರೋಪಿಗಳಿಗೆ ಇನ್ನೂ ೧೧ ಜನರ ಹತ್ಯೆ ಮಾಡಲು ಹೇಳಿರುವುದು ಬಹಿರಂಗವಾಗಿದೆ. ಇದರಲ್ಲಿ ಸುರೇಶ ಚಹ್ವಾಣಕೆಯವರೊಂದಿಗೆ ಉತ್ತರಪ್ರದೇಶದಲ್ಲಿನ ಡಾಸನಾದಲ್ಲಿನ ದೇವಸ್ಥಾನದ ಮಹಂತರಾದ ಯತಿ ನರಸಿಂಹಾನಂದ, ಬಿ. ಎಸ್. ಪಟೇಲ್, ಪಂಕಜ ಶರ್ಮಾ, ಪುಷ್ಪೆಂದ್ರ ಕುಲಶ್ರೇಷ್ಠ, ಮಹೇಂದ್ರಪಾಲ ಆರ್ಯ, ರಾಹುಲ ಶರ್ಮಾ, ರಾಧೇಶ್ಯಾಮ ಆಚಾರ್ಯ, ಉಪದೇಶ ರಾಣಾ, ಉಪಾಸನಾ ಆರ್ಯ ಮತ್ತು ’ರಾ’ನ ಮಾಜಿ ಅಧಿಕಾರಿಯಾದ ಆರ್. ಎಸ್. ಎನ್. ಸಿಂಹರವರ ಹೆಸರುಗಳೂ ಇದ್ದವು.
Islamists killers of Kishan Bharwad had plotted to kill 11 others including Suresh Chavhanke and Yati Narsinghanand: BJP MP Kailash Soni in Rajya Sabhahttps://t.co/MnEf0dBCcs
— OpIndia.com (@OpIndia_com) February 10, 2022
ಸೋನಿಯವರು ಮುಂದುವರಿದು ’ಮೌಲಾನಾ ಶಬ್ಬೀರನು ವಿಚಾರಣೆಯ ಸಮಯದಲ್ಲಿ ಕಿಶನರವರ ಹತ್ಯೆಯ ಉದ್ದೇಶವು ಧಾರ್ಮಿಕ ಒತ್ತಡವನ್ನು ನಿರ್ಮಿಸಿ ದೇಶದಲ್ಲಿ ಅರಾಜಕತೆ ನಿರ್ಮಾಣ ಮಾಡುವುದಾಗಿತ್ತು. ದೇಶದಲ್ಲಿ ಸದ್ಯ ೫ ರಾಜ್ಯಗಳಲ್ಲಿ ನಡೆಯುತ್ತಿರುವ ಚುನಾವಣೆಯ ಹಿನ್ನೆಲೆಯಲ್ಲಿ ಅರಾಜಕತೆ ನಿರ್ಮಾಣ ಮಾಡುವ ಪ್ರಯತ್ನವಾಗಿತ್ತು’ ಎಂದು ಹೇಳಿದರು.