ಅಲಿಗಡ ಮುಸ್ಲಿಂ ವಿದ್ಯಾಪೀಠದಲ್ಲಿ ಹಿಜಾಬ್‍ಅನ್ನು ಬೆಂಬಲಿಸಲು ಪ್ರತಿಭಟನೆ !

ಯಾರಿಗೆ ಸಮವಸ್ತ್ರ ಬದಲು ಹಿಜಾಬ್ ಧರಿಸಿ ಶಾಲೆ ಮತ್ತು ಮಹಾವಿದ್ಯಾಲಯಗಳಿಗೆ ಬರುವುದಿದ್ದರೆ, ಅವರು ಅಫಘಾನಿಸ್ತಾನಕ್ಕೆ ಹೋಗಬೇಕು, ಎಂದು ಯಾರಾದರೂ ಹೇಳಿದರೆ ತಪ್ಪೇನೂ ಇಲ್ಲ ?- ಸಂಪಾದಕರು 

ನವದೆಹಲಿ – ಕರ್ನಾಟಕದ ಉಡುಪಿಯಲ್ಲಿನ ಮಹಾವಿದ್ಯಾಲಯದ ಹಿಜಾಬ್ ಪ್ರಕರಣದ ಪ್ರತಿಧ್ವನಿ ದೇಶಾದ್ಯಂತ ಹರಡುತ್ತಿದೆ. ಅಲಿಗಡ ಮುಸ್ಲಿಂ ವಿದ್ಯಾಪೀಠದಲ್ಲಿ ವಿದ್ಯಾರ್ಥಿನಿಯರು ಹಿಜಬ್‍ಗೆ ಬೆಂಬಲಿಸಿ ಪ್ರತಿಭಟನೆ ನಡೆಸಿದರು. `ಹಿಜಾಬ್ ಇದು ಮುಸಲ್ಮಾನ ಮಹಿಳೆಯರ ಅಧಿಕಾರವಿದ್ದು ಅದನ್ನು ಯಾರೂ ಕಸಿದುಕೊಳ್ಳಲು ಸಾಧ್ಯವಿಲ್ಲ’, ಎಂದು ಪ್ರತಿಭಟನಕಾರರಿಂದ ಹೇಳಲಾಗುತ್ತಿತ್ತು. ಈ ಸಮಯದಲ್ಲಿ ಯಾವುದೇ ಅಹಿತಕರ ಘಟನೆ ನಡೆಯಬಾರದೆಂದು ದೊಡ್ಡಪ್ರಮಾಣದಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.

1. ರಾಜಸ್ಥಾನದ ಜೈಪುರಿನ ಚಾಕಸುವಿನಲ್ಲಿ ಕಸ್ತೂರಿ ದೇವಿ ಮಹಾವಿದ್ಯಾಲಯದಲ್ಲಿ ಕೆಲವು ವಿದ್ಯಾರ್ಥಿನಿಯರು ಹಿಜಾಬ್ ಮತ್ತು ಬುರ್ಖಾ ಧರಿಸಿ ಬಂದಿದ್ದರು. ಅವರನ್ನು ಪ್ರವೇಶದ್ವಾರದಲ್ಲೇ ತಡೆಯಲಾಯಿತು. ಅವರಿಗೆ ಸಮವಸ್ತ್ರ ಧರಿಸಿ ಬರಲು ಸೂಚಿಸಲಾಗಿತ್ತು. ಆದ್ದರಿಂದ ವಿವಾದ ನಡೆದು, ಆ ಸಮಯದಲ್ಲಿ ಹುಡುಗಿಯರು ಪೋಷಕರನ್ನು ಕರೆಸಿದರು. ಅದರ ನಂತರ ಹೆಣ್ಣುಮಕ್ಕಳಿಗೆ ಪ್ರವೇಶ ನೀಡಲಾಗಲಿಲ್ಲ. ಇದರ ಮಾಹಿತಿ ದೊರೆಯುತ್ತಲೇ ಪೊಲೀಸರು ದಾಖಲಾದರೂ ಮತ್ತು ಅವರ ಹಸ್ತಕ್ಷೇಪದಿಂದ ವಿವಾದ ಬಗೆಹರಿಸಲಾಯಿತು.

2. ಜಮ್ಮುವಿನಲ್ಲಿ ಆರ್.ಎಫ್.ಎ.- ಡೋಗರಾ ಫ್ರೆಂಟ್‍ನ ಕಾರ್ಯಕರ್ತೆಯರು ಹಿಜಾಬ್ ವಿರೋಧದಲ್ಲಿ ಪ್ರತಿಭಟನೆಗಳನ್ನು ನಡೆಸಿದರು `ಶೈಕ್ಷಣಿಕ ಸಂಸ್ಥೆಗಳು ರಾಜಕೀಯ ಆಖಾಡಾ ಮಾಡಬಾರದು. ಶಾಲೆ-ಮಹಾವಿದ್ಯಾಲಯಗಳಲ್ಲಿ ಹಿಜಾಬ್ ಅಥವಾ ಕೇಸರಿ ಶಾಲು, ಇವುಗಳಲ್ಲಿ ಯಾವುದಕ್ಕೂ ಅನುಮತಿ ನೀಡಬಾರದು, ಎಂಬ ಈ ಕಾರ್ಯಕರ್ತರು ಒತ್ತಾಯಿಸಿದರು.