ಭಾಗ್ಯನಗರ (ತೆಲಂಗಾಣಾ) ದಲ್ಲಿನ ಮಹಾವಿದ್ಯಾಲಯದಲ್ಲಿಯೂ ಹಿಜಾಬಾನ್ನು ವಿರೋಧಿಸಲಾಗುತ್ತಿರುವ ಬಗ್ಗೆ ಮುಸಲ್ಮಾನ ವಿದ್ಯಾರ್ಥಿನಿಯ ಆರೋಪ

ಮಹಾವಿದ್ಯಾಲಯವು ಆರೋಪವನ್ನು ತಿರಸ್ಕರಿಸಿದೆ !

ಈಗ ಸಂಪೂರ್ಣ ದೇಶದಲ್ಲಿ ಹಿಂದೂಗಳನ್ನು ಅಪಮಾನ ಮಾಡಲು ಇಂತಹ ಆರೋಪಗಳನ್ನು ಮಾಡಲಾಗುವುದು, ಎಂಬುದನ್ನು ಗಮನದಲ್ಲಿಡಿ ! ಹಿಜಾಬಿನ ಹೆಸರಿನಲ್ಲಿ ನಡೆಯುತ್ತಿರುವ ಷಡ್ಯಂತ್ರವನ್ನು ಅರಿಯಿರಿ !

ಭಾಗ್ಯನಗರ (ತೆಲಂಗಾಣಾ) – ಕರ್ನಾಟಕದ ನಂತರ ಈಗ ಭಾಗ್ಯನಗರದಲ್ಲಿಯೂ ಹಿಜಾಬಿನ ಮೇಲೆ ವಾದ ಆರಂಭವಾಗಿದೆ. ಇಲ್ಲಿನ ಸಿಕಂದರಾಬಾದಿನಲ್ಲಿ ’ಸೇವಕ ಅಕಾಡೆಮಿ ಆಫ್ ರಿಹೇಬಿಲಿಟೇಶನ್ ಸ್ಟಡೀಸ್’ನ ವಿದ್ಯಾರ್ಥಿನಿಯಾಗಿರುವ ಫಾತಿಮಾ ಎಂಬ ವಿದ್ಯಾರ್ಥಿನಿಯು ಟ್ವೀಟ್ ಮಾಡಿ `ನಮ್ಮ ಸಂಸ್ಥೆಯ ಅಧ್ಯಕ್ಷರಾದ ಡಾ. ಪಿ. ಹನುಮಂತ ರಾವರವರು ಮುಸಲ್ಮಾನ ಹುಡುಗಿಯರಿಗೆ ಬುರ್ಖಾ ಧರಿಸಿ ಮಹಾವಿದ್ಯಾಲಯವನ್ನು ಪ್ರವೇಶಿಸಲು ನಿರ್ಬಂಧಿಸಿದ್ದಾರೆ ’ ಎಂದು ಆರೋಪಿಸಿದ್ದಾಳೆ.

ಡಾ. ರಾವರವರೂ ಈ ಆರೋಪವನ್ನು ತಿರಸ್ಕರಿಸಿದ್ದಾರೆ. ಡಾ. ರಾವರವರು ’ನಾವು ಮುಸಲ್ಮಾನ ಹುಡುಗಿಯರ ಮೇಲೆ ಯಾವುದೇ ನಿರ್ಬಂಧವನ್ನು ಹೇರಲಿಲ್ಲ ಅಥವಾ ಯಾವುದೇ ಆಕ್ಷೇಪಾರ್ಹ ಟಿಪ್ಪಣಿಯನ್ನು ಮಾಡಿಲ್ಲ. ನಾವು ಕಳೆದ ೪೫ ವರ್ಷಗಳಿಂದ ಈ ಸಂಸ್ಥೆಯನ್ನು ನಡೆಸುತ್ತಿದ್ದೇವೆ ಹಾಗೂ ಪ್ರತಿವರ್ಷ ನೂರಾರು ಮುಸಲ್ಮಾನ ವಿದ್ಯಾರ್ಥಿನಿಯರು ವಿವಿಧ ವಿಷಯಗಳಲ್ಲಿ ಪದವಿ ಮತ್ತು ಪದವಿಯೋತ್ತರ ವಿಷಯಗಳನ್ನು ತೆಗೆದುಕೊಳ್ಳುತ್ತಾರೆ. ಯಾವಾಗಲೂ ಯಾವುದೇ ವಿದ್ಯಾರ್ಥಿನಿಯು ನಮ್ಮ ವಿರುದ್ಧ ಈ ರೀತಿಯಲ್ಲಿ ತಕರಾರು ಮಾಡಿಲ್ಲ’ ಎಂದು ಹೇಳಿದರು.