ಸರಕಾರ ಈ ಸಂಘಟನೆಯನ್ನು ನಿಷೇಧಿಸಲು ಪ್ರಯತ್ನಿಸಬೇಕು, ಎಂದು ಜನರಿಗೆ ಅನಿಸುತ್ತದೆ ! – ಸಂಪಾದಕರು
ಬೆಂಗಳೂರು – ಕರ್ನಾಟಕದಲ್ಲಿ ಹಿಜಾಬ್ ಪ್ರಕರಣದ ಹಿಂದೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಈ ಸಂಘಟನೆಯ `ಸೋಶಲ್ ಡೆಮಾಕ್ರಟಿಕ್ ಪಾರ್ಟಿ’ ಈ ರಾಜಕೀಯ ಪಕ್ಷದ ಶಾಖೆಯಾಗಿರುವ `ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ’ದ ಕೈವಾಡವಿದೆ ಎಂದು ನಾನು ಬಹಿರಂಗವಾಗಿ ಹೇಳುತ್ತೇನೆ. ಇದರ ಸಾಕ್ಷಿಗಳು ನಮಗೆ ಸಿಕ್ಕಿವೆ. ಈ ಸಂಘಟನೆಯ ಪ್ರಚೋದನೆಯ ಪರಿಣಾಮವಾಗಿದೆ, ಕೆಲವು ಹೆಣ್ಣುಮಕ್ಕಳು ಹಿಜಾಬ್‍ಗಾಗಿ ಧ್ವನಿ ಎತ್ತಲು ಪ್ರಾರಂಭಿಸಿದರು. ಈ ಮೊದಲು ಈ ರೀತಿಯ ಬೇಡಿಕೆ ಎಂದು ಆಗಿರಲಿಲ್ಲ. ಇದ್ದಕ್ಕಿದ್ದಂತೆ ಗಲಾಟೆ ಎಬ್ಬಿಸಿದ್ದಾರೆ, ಎಂದು ಕರ್ನಾಟಕದ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಇವರು ದೈನಿಕ `ಭಾಸ್ಕರ’ಗೆ ನೀಡಿರುವ ಸಂದರ್ಶನದಲ್ಲಿ ಆರೋಪಿಸಿದ್ದಾರೆ.
Hidden hands behind #HijabRow: Karnataka education minister BC Nagesh
‘Like military, rules have to be followed in institutions too’https://t.co/qF6kVyg5bw
— The Times Of India (@timesofindia) February 7, 2022
ಬಿ.ಸಿ. ನಾಗೇಶ್ ಇವರು ಸಂದರ್ಶನದಲ್ಲಿ ಮಂಡಿಸಿರುವ ಸೂತ್ರಗಳು
1. ಇಂತಹ ಪ್ರಕರಣಗಳ ವಿಚಾರಣೆಗಾಗಿ ಗೃಹ ಸಚಿವಾಲಯದ ಆದೇಶ ಅವಶ್ಯವಿರುತ್ತದೆ. ರಾಜ್ಯದ ಮುಖ್ಯಮಂತ್ರಿ ಮತ್ತು ಗೃಹ ಸಚಿವರನ್ನು ನಾನು ಭೇಟಿಯಾಗಿದ್ದೇನೆ. ಈ ವಿಷಯವಾಗಿ ನಾನು ಅವರ ಜೊತೆ ಮಾತನಾಡಿದ್ದೇನೆ. ವಿಚಾರಣೆಯ ಸಲಹೆ ನೀಡಿದ್ದೇನೆ. ಅದೇ ರೀತಿ ವಿಚಾರಣೆ ನಡೆಯುತ್ತಿದೆ. ಇದರ ಮೊದಲು ಹಿಂಸಾಚಾರ ಹೆಚ್ಚಾಗದಿವುದರ ಕಡೆಗೆ ನಾವು ನಿಗಾ ವಹಿಸಿದ್ದೇವೆ.
2. ಈ ಪ್ರಕರಣದಲ್ಲಿ ನಾವು ಗಲಭೆಯಾಗಲು ಬಿಡುವುದಿಲ್ಲ. ಸಂಪೂರ್ಣ ಪ್ರಕರಣ ನಿಯಂತ್ರಣದಲ್ಲಿದೆ. ಷಡ್ಯಂತ್ರ ಎಷ್ಟೇ ದೊಡ್ಡದಿದ್ದರೂ, ನಾವು ಅದನ್ನೂ ಯಶಸ್ವಿಯಾಗಲು ಬಿಡುವುದಿಲ್ಲ. ಆಡಳಿತ ಜಾಗರೂಕತೆಯಿಂದ ಇದೆ.
3. ಕರ್ನಾಟಕ ಶಿಕ್ಷಣ ಕಾಯಿದೆ 2013 ಮತ್ತು 2018, ಇದು ಶೈಕ್ಷಣಿಕ ಸಂಸ್ಥೆಗಳಿಗೆ ತಮ್ಮ ಸಮವಸ್ತ್ರಗಳನ್ನು ನಿಶ್ಚಯಿಯಿಸುವ ಅಧಿಕಾರ ನೀಡಿದೆ. ಶಾಲೆಯ ವಿಷಯವಾಗಿ ನಮ್ಮ ಧೋರಣೆ ಸ್ಪಷ್ಟವಾಗಿದೆ. ಶಾಲೆಗೆ ಬಂದರೆ ಆ ಶೈಕ್ಷಣಿಕ ಸಂಸ್ಥೆಯ ಸಮವಸ್ತ್ರ ಧರಿಸಬೇಕಾಗುತ್ತದೆ, ಇಲ್ಲವಾದರೆ ನೀವು ಪರ್ಯಾಯ ಹುಡುಕಬೇಕಾಗಬಹುದು.
4. ನಾವು ಶಾಲೆ ಮತ್ತು ಮಹಾವಿದ್ಯಾಲಯಗಳ 200 ಮೀಟರ್ ದೂರದಲ್ಲಿ ಗುಂಪು ಕಟ್ಟುವುದರ ಮೇಲೆ ನಿಷೇಧ ಹೇರಿದ್ದೇವೆ. ಮಹಾವಿದ್ಯಾಲಯದ ಹೊರಗೆ ಹೆಣ್ಣುಮಗಳಿಗೆ ವಿದ್ಯಾರ್ಥಿಗಳು ತಡೆದರು ಅನ್ನುವುದು ತಪ್ಪಾಗುತ್ತದೆ. ವಿಡಿಯೋದಲ್ಲಿ, ಹುಡುಗರು ದೂರ ನಿಂತಿದ್ದಾರೆ. ಹುಡುಗಿಗೆ ಸುತ್ತುವರೆದಿಲ್ಲ ಎಂಬುದು ನೀವು ವಿಡಿಯೋದಲ್ಲಿ ನೋಡಬಹುದು. ಶಿಕ್ಷಣ ಸಚಿವ ಆಗಿದ್ದರಿಂದ, ಮಹಾವಿದ್ಯಾಲಯದ ಪರಿಸರದಲ್ಲಿ `ಅಲ್ಲಾಹು ಅಕ್ಬರ್’ ಅಥವಾ `ಜೈ ಶ್ರೀರಾಮ್’ ಎಂಬ ಘೋಷಣೆಗಳು ಸಹಿಸಲಾಗುವುದಿಲ್ಲ ಎಂದು ಹೇಳಿದರು.