ಮಹಾರಾಷ್ಟ್ರದ ಮುಖ್ಯಮಂತ್ರಿ ಇಂಗ್ಲೆಂಡ್ ಗೆ ಹೋಗಿ ‘ವಾಘ ನಖ’ ಹಸ್ತಾಂತರಿಸುವ’ ಒಪ್ಪಂದಕ್ಕೆ ಸಹಿ ಮಾಡುವರು !

ಬ್ರಿಟಿಷರು ಭಾರತದಿಂದ ಕೊಂಡೊಯ್ದಿರುವ ಛತ್ರಪತಿ ಶಿವಾಜಿ ಮಹಾರಾಜರ ‘ಹುಲಿ ಉಗುರು’ ಭಾರತಕ್ಕೆ ಹಿಂತಿರುಗಿ ತರುವುದಕ್ಕಾಗಿ ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ ಶಿಂದೆ ಮತ್ತು ರಾಜ್ಯದ ಸಾಂಸ್ಕೃತಿಕ ಕಾರ್ಯ ಸಚಿವ ಸುಧೀರ ಮುನಗಂಟಿವಾರ ಇವರು ಸೆಪ್ಟೆಂಬರ್ ೨೯ ರಂದು ಇಂಗ್ಲೆಂಡಿಗೆ ಹೋಗುವರು.

ಎಲ್ಲಿಯವರೆಗೆ ಸಮಾಜದಲ್ಲಿ ಭೇದಭಾವ ಇರುವುದೋ, ಅಲ್ಲಿಯವರೆಗೂ ಮೀಸಲಾತಿ ಇರಬೇಕು ! – ಪ.ಪೂ. ಸರಸಂಘಚಾಲಕ ಡಾ. ಮೋಹನಜಿ ಭಾಗವತ

ಇಂದಿಗೂ ಸಮಾಜದಲ್ಲಿ ಭೇದಭಾವ ಪಾಲನೆಯಾಗುತ್ತಿದೆ. ದೇವಸ್ಥಾನದಲ್ಲಿ ಪ್ರವೇಶ ನೀಡುವುದಿಲ್ಲ. ಉದ್ಯೋಗಗಳಲ್ಲಿ ಕದ್ದು ಮುಚ್ಚಿ ಜಾತೀಯತೆ ಮಾಡಲಾಗುತ್ತದೆ. ಇದು ಸಾಮಾಜಿಕ ವಾಸ್ತವವಾಗಿದೆ.

ಚುನಾವಣಾ ಪ್ರಮಾಣಪತ್ರದಲ್ಲಿ 2 ಅಪರಾಧಗಳನ್ನು ದಾಖಲಿಸದಿರುವ ಪ್ರಕರಣ

ಮಹಾರಾಷ್ಟ್ರ ರಾಜ್ಯದ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರ 2014 ರ ಚುನಾವಣಾ ಪ್ರಮಾಣಪತ್ರದಲ್ಲಿ 2 ಅಪರಾಧಗಳನ್ನು ದಾಖಲಿಸದೇ ಇರುವ ಪ್ರಕರಣದ ತೀರ್ಪು ಸೆಪ್ಟೆಂಬರ್ 5 ರಂದು ನಡೆಯಬೇಕಿತ್ತು; ಆದರೆ ನ್ಯಾಯಾಲಯ ತೀರ್ಪಿನ ದಿನಾಂಕವನ್ನು ಸೆಪ್ಟೆಂಬರ್ 8 ಎಂದು ನಿಗದಿಪಡಿಸಿದೆ.

ಸಪ್ಟೆಂಬರ್ ನಲ್ಲಿ ಧಾರ್ಮಿಕ ಮತ್ತು ಜನಾಂಗೀಯ ಘರ್ಷಣೆ ಹೆಚ್ಚಾಗುವ ಸಾಧ್ಯತೆ ! – ಜ್ಯೋತಿಷಿ ಸಿದ್ದೇಶ್ವರ ಮಾರಾಟಕರ

ಸಪ್ಟೆಂಬರ್ ೨೦೨೩ ರಲ್ಲಿ ಧಾರ್ಮಿಕ ಮತ್ತು ಜನಾಂಗೀಯ ಘರ್ಷಣೆ ಹೆಚ್ಚಾಗುವ ಸಾಧ್ಯತೆಯಿದ್ದು ದೇವಸ್ಥಾನ ಮತ್ತು ಮಸೀದಿ ಅಥವಾ ಹಿಂದೂ ಮುಸ್ಲಿಮ ಇವರ ವಿವಾದದಿಂದ ಹಿಂಸಾಚಾರ, ಅಗ್ನಿ ಅವಘಡ ನಡೆಸುವ ಪ್ರಯತ್ನಗಳು ಈ ಸಮಯದಲ್ಲಿ ಸಂಭವಿಸಬಹುದು

‘ಭಾರತದಲ್ಲಿ ಮುಸಲ್ಮಾನರು ಇರುವುದರಿಂದಲೇ ನೀವು ಹಿಂದೂಗಳಾಗಿದ್ದೀರಿ ! (ಅಂತೆ) – ನಟ ಕಿರಣ ಮಾನೆ

ನಟ ಕಿರಣ ಮಾನೆ ಇವರು ‘ಹಾಲಿವುಡ್’ನ (ಇಂಗ್ಲಿಷ್ ಚಲನಚಿತ್ರ ನಿರ್ಮಾಣ) ‘ದ ಡಾರ್ಕ್ ನೈಟ್’ ಈ ಚಲನಚಿತ್ರದಲ್ಲಿ ‘ಜೋಕರ್’ ಹೆಸರಿನ ಖಲನಾಯಕನ ಮತ್ತು ಹಾಲಿವುಡ್ ನಲ್ಲಿಯ ನಾಯಕ ಬ್ಯಾಟ್ಮ್ಯಾನ್ ಇವರ ಸಂಭಾಷಣೆಯಲ್ಲಿ ಈ ಮರಾಠಿ ವಾಕ್ಯ ಸೇರಿಸಿ ಅದನ್ನು ಸ್ವತಃ ಫೇಸ್ಬುಕ್ ನಲ್ಲಿ ಪ್ರಸಾರ ಮಾಡಿದ್ದಾರೆ.

AI ತಂತ್ರಜ್ಞಾನದ ಮೂಲಕ ಅಶ್ಲೀಲ ಫೋಟೊ ತೆಗೆದಿರುವ ಬಗ್ಗೆ ಇನ್ನೂ ೨೩ ಯುವತಿಯರ ಆರೋಪ !

AI ತಂತ್ರಜ್ಞಾನದ (ಆರ್ಟಿಫಿಶಿಯಲ್ ಇಂಟಿಲಿಜೆನ್ಸಿ) ಮೂಲಕ ನಮ್ಮ ಅಶ್ಲೀಲ ಫೋಟೊಗಳನ್ನು ತಯಾರಿಸಿದ್ದಾರೆ, ಎಂದು ಇನ್ನೂ ೨೩ ಯುವತಿಯರು ಮುಂದೆ ಬಂದು ಹೇಳಿದ್ದಾರೆ. ಅವರ ಅಶ್ಲೀಲ ಫೋಟೊಗಳನ್ನು ಅಶ್ಲೀಲ ವೆಬ್ ಸೈಟ್ ನಲ್ಲಿ ಪ್ರಸಾರವಾಗಿವೆ.

‘ಒಂದು ದೇಶ, ಒಂದು ಚುನಾವಣೆ’ ಇದು ಭಾಜಪದ ರಾಜಕೀಯ ನೀತಿ ! – ಶಾಸಕ ಸಂಜಯ ರಾವುತ

ಸಪ್ಟೆಂಬರ್ ಒಂದರಂದು ಮುಂಬಯಿಯಲ್ಲಿ ನಡೆದಿರುವ ಎಲ್ಲಾ ವಿರೋಧಿ ಪಕ್ಷದ ಇಂಡಿಯಾ ಈ ಮೈತ್ರಿಕೂಟದ ಸಭೆಯ ಸ್ಥಳದಲ್ಲಿ ಸಂಜಯ ರಾವುತ ಅವರು ಪ್ರಸಾರ ಮಾಧ್ಯಮಗಳ ಜೊತೆ ಹೇಳಿದ್ದಾರೆ.

‘ಇಂಡಿಯಾ ಮೈತ್ರಿಕೂಟ’ದ ಸಭೆಗಾಗಿ ಕೋಟ್ಯಂತರ ರೂಪಾಯಿ ಖರ್ಚು ! – ಕೈಗಾರಿಕಾ ಸಚಿವ ಉದಯ ಸಾಮಂತ

ಭಾಜಪದ ವಿರುದ್ಧ ಒಟ್ಟುಗೂಡಿದ ದೇಶದ ವಿವಿಧ ರಾಜಕೀಯ ಪಕ್ಷಗಳ ‘ಇಂಡಿಯಾ ಮೈತ್ರಿಕೂಟ’ದ ಸಭೆಯನ್ನು ಆಗಸ್ಟ್ 31 ಮತ್ತು ಸೆಪ್ಟೆಂಬರ್ 1 ರಂದು ಮುಂಬಯಿಯ ‘ಗ್ರ್ಯಾಂಡ್ ಹಯಾತ್’ ಈ ಫೈಸ್ಟಾರ್ ಹೊಟೇಲ್‌ನಲ್ಲಿ ಆಯೋಜಿಸಲಾಯಿತು.

ಆಂಬಿವಲಿ (ಪಾಲಘರ)ಯ ಇರಾನಿ ವಸಾಹತುವಿನಲ್ಲಿ ಕಳ್ಳನನ್ನು ಹಿಡಿದ ಪೊಲೀಸರ ಮೇಲೆ ಕಲ್ಲು ತೂರಾಟ !

ಫಿರೋಜನು ಒಬ್ಬ ವ್ಯಕ್ತಿಗೆ 1 ಲಕ್ಷ ರೂಪಾಯಿ ವಂಚಿಸಿದ್ದನು. ಈ ಪ್ರಕರಣದಲ್ಲಿ ಅಂಧೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ತನಿಖೆಯಲ್ಲಿ ಫಿರೋಜ್ ಹಲವು ಅಪರಾಧಗಳನ್ನು ಮಾಡಿ ಪರಾರಿಯಾಗಿರುವುದು ಪತ್ತೆಯಾಗಿದೆ.