ಮುಸ್ಲಿಂ ಯುವತಿಯೊಂದಿಗೆ ಮಾತನಾಡುತ್ತಿದ್ದ ಹಿಂದೂ ಯುವಕನನ್ನು ಅಪಹರಿಸಿದ ಮುಸಲ್ಮಾನರು

ಹಿಂದೂ ಯುವಕನಿಗೆ ಹಿಗ್ಗಾಮುಗ್ಗಾ ಥಳಿತ

ಭಾಗ್ಯನಗರ (ತೆಲಂಗಾಣ) – ತೆಲಂಗಾಣದ ಹನ್ಮಕೊಂಡದಲ್ಲಿ ಹಿಂದೂ ಯುವಕನನ್ನು ಮುಸ್ಲಿಮರ ಗುಂಪೊಂದು ಅಪಹರಿಸಿ ಅಮಾನವೀಯವಾಗಿ ಥಳಿಸಿದೆ. ಆತನನ್ನು ಒತ್ತೆಯಾಳಾಗಿ ಇಟ್ಟು ಬೆದರಿಕೆ ಹಾಕಲಾಯಿತು. ಮುಸ್ಲಿಂ ಯುವತಿಯೊಂದಿಗೆ ಮಾತನಾಡಿದ್ದಕ್ಕಾಗಿ ಆತನನ್ನು ಹಿಂಸಿಸಲಾಯಿತು.

೧. ಈ ಕುರಿತು ವರದಿಯೊಂದರ ಪ್ರಕಾರ, ಮಾರ್ಚ್ ೨೩, ೨೦೨೫ ರಂದು, ಹನ್ಮಕೊಂಡದಲ್ಲಿ ಸಾಯಿಚರಣ್ ಎಂಬ ಹಿಂದೂ ಯುವಕ ಓರ್ವ ಮುಸ್ಲಿಂ ಹುಡುಗಿಯೊಂದಿಗೆ ಮಾತನಾಡುತ್ತಿದ್ದನು. ಸಾಯಿಚರಣ್ ಯಾರೊಂದಿಗೆ ಮಾತನಾಡುತ್ತಿದ್ದನೋ ಆ ಹುಡುಗಿ ಅವನ ಸಹೋದರಿಯ ಸ್ನೇಹಿತೆಯಾಗಿದ್ದಳು.

೨. ಸಾಯಿಚರಣ್ ಮತ್ತು ಆ ಮುಸ್ಲಿಂ ಯುವತಿ ಕೆಲಸದ ಬಗ್ಗೆ ಮಾತನಾಡುತ್ತಿದ್ದರು. ಈ ಸಮಯದಲ್ಲಿ ಯಾರೋ ಅವರ ಸಂಭಾಷಣೆಯ ವಿಡಿಯೋ ಮಾಡಿ ಮುಸ್ಲಿಮರ ಗುಂಪಿಗೆ ಕಳುಹಿಸಿದರು. ನಂತರ ಮುಸ್ಲಿಮರ ಗುಂಪು ಆತನನ್ನು ಅಪಹರಿಸಿದರು.

೩. ನಂತರ ಮುಸ್ಲಿಂ ಯುವಕರು ಆತನನ್ನು ಆ ಮುಸ್ಲಿಂ ಹುಡುಗಿಯ ಮನೆಗೆ ಕರೆದೊಯ್ದರು. ಅಲ್ಲಿ ಆತನನ್ನು ಕೋಣೆಯಲ್ಲಿ ಕೂಡಿ ಹಾಕಿ ದೊಣ್ಣೆ ಮತ್ತು ಕಬ್ಬಿಣದ ರಾಡ್‌ಗಳಿಂದ ಥಳಿಸಿದರು. ಆತನನ್ನು ಒತ್ತೆಯಾಳಾಗಿ ಇಟ್ಟು ಹಿಂಸಿಸಲಾಯಿತು.

೪. ನಂತರ ಸಾಯಿಚರಣ್ ಮುಸ್ಲಿಂ ಹುಡುಗರ ಹಿಡಿತದಿಂದ ತಪ್ಪಿಸಿಕೊಂಡು ಪೊಲೀಸರನ್ನು ಸಂಪರ್ಕಿಸಿದನು.

೫. ಈ ಪ್ರಕರಣದಲ್ಲಿ ಪೊಲೀಸರು ಮೊಹಮ್ಮದ್ ಅಜೀಮ್, ಶೇಖ್ ಅಫ್ಸರ್, ಮೊಹಮ್ಮದ್ ಇರ್ಷಾದ್, ಮುಜ್ಜು ಶಾಬಾಜ್, ಮೊಹಮ್ಮದ್ ಫಯಾಜ್ ಸೇರಿದಂತೆ ೯ ಜನರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಪೊಲೀಸರು ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ಸಂಪಾದಕೀಯ ನಿಲುವು

ಹಿಂದೂ ಯುವಕರು ಮುಸ್ಲಿಂ ಹುಡುಗಿಯರೊಂದಿಗೆ ಮಾತನಾಡಿದರೂ ಮುಸ್ಲಿಮರು ಸಹಿಸುವುದಿಲ್ಲ; ಇದಕ್ಕೆ ವಿರುದ್ಧವಾಗಿ ಮುಸ್ಲಿಂ ಯುವಕರು ಹಿಂದೂ ಹುಡುಗಿಯರೊಂದಿಗೆ ಬಹಿರಂಗವಾಗಿ ‘ಲವ್ ಜಿಹಾದ್’ ಮಾಡುತ್ತಾರೆ ಮತ್ತು ಹಿಂದೂ ಯುವಕರಿಗೆ ಅದರ ಬಗ್ಗೆ ಯಾವುದೇ ಕೋಪ ಬರುವುದಿಲ್ಲ!