ವಕ್ಫ್ ಮಂಡಳಿಯು ಕಲಂ 43 ರ ದುರುಪಯೋಗಪಡಿಸಿಕೊಂಡಿದೆ ಎಂದು ನ್ಯಾಯಾಲಯ ಹೇಳಿಕೆ !
ಪುಣೆ – ‘ಹಾಜಿ ಮಹಮ್ಮದ ಜವಾದ ಇಸ್ಪಹಾನಿ ಇಮಾಮಬಾರಾ ಟ್ರಸ್ಟ್’ ಅನ್ನು ವಕ್ಫ್ ಸಂಘಟನೆ ಎಂಬ ನೋಂದಣಿಯನ್ನು ಉಳಿಸಿಕೊಳ್ಳುವ ಮಹಾರಾಷ್ಟ್ರ ರಾಜ್ಯ ವಕ್ಫ್ ನ್ಯಾಯಮಂಡಳಿಯ 2023ರ ತೀರ್ಮಾನವನ್ನು ಮುಂಬಯಿ ಉಚ್ಚ ನ್ಯಾಯಾಲಯವು ರದ್ದುಗೊಳಿಸಿದೆ. 1995ರ ವಕ್ಫ್ ಕಾಯ್ದೆಯ ಕಲಂ 43 ರ ಅಡಿಯಲ್ಲಿ ಇಮಾಮಬಾರಾ ಸಾರ್ವಜನಿಕ ಟ್ರಸ್ಟ್ ಅನ್ನು ವಕ್ಫ್ ಎಂದು ನೋಂದಾಯಿಸುವಂತೆ ವಕ್ಫ್ ಮಂಡಳಿಯು 2016 ರಲ್ಲಿ ಆದೇಶ ಹೊರಡಿಸಿತ್ತು. ನ್ಯಾಯಾಲಯದ ತೀರ್ಪಿನ ಪ್ರಕಾರ, ವಕ್ಫ್ ಮಂಡಳಿಯು ಕಲಂ 43 ಅನ್ನು ದುರುಪಯೋಗಪಡಿಸಿಕೊಂಡಿರುವುದು ಕಂಡುಬಂದಿದೆ. ಅದರಲ್ಲಿ ಹಿಂದಿನ ಕಾನೂನುಗಳ ಪ್ರಕಾರ ಮಾನ್ಯತೆ ಪಡೆದ ಕೆಲವು ವಕ್ಫ್ ಗಳನ್ನು 1995 ರ ಕಾಯ್ದೆಯ ಅಡಿಯಲ್ಲಿ ಈಗಾಗಲೇ ನೋಂದಾಯಿಸಲಾಗಿದೆ ಎಂದು ಘೋಷಿಸಲಾಗಿದೆ.
1. ‘ಮುಸ್ಲಿಂ ಸಾರ್ವಜನಿಕ ಟ್ರಸ್ಟ್’ ಅನ್ನು ಕೇವಲ ಮಹಾರಾಷ್ಟ್ರ ಸಾರ್ವಜನಿಕ ಟ್ರಸ್ಟ್ ಕಾಯ್ದೆ, 1950 ರ ಅಡಿಯಲ್ಲಿ ಮಾತ್ರ ನೋಂದಾಯಿಸಲಾಗಿದೆ; ಆದ್ದರಿಂದ ಅದಕ್ಕೆ ಕೂಡಲೇ ವಕ್ಫ್ ಸ್ಥಾನಮಾನ ಸಿಗುವುದಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
2. ದೂರುದಾರರಿಗೆ ನ್ಯಾಯಾಲಯವು ವಕ್ಫ್ ನ್ಯಾಯಮಂಡಳಿಯಲ್ಲಿ ಹೊಸ ಅರ್ಜಿಯನ್ನು ಸಲ್ಲಿಸಲು ಅನುಮತಿ ನೀಡಿದೆ ಮತ್ತು ಬಾಕಿ ಉಳಿದಿರುವ ವಿವಾದಗಳನ್ನು ಸ್ವತಂತ್ರವಾಗಿ ಪರಿಹರಿಸಲು ನಿರ್ದೇಶಿಸಿದೆ.
3. ಉಚ್ಚ ನ್ಯಾಯಾಲಯದ ಪ್ರಭಾವದಿಂದ ಮುಕ್ತವಾಗಿ ತನ್ನದೇ ಆದ ಸ್ವಂತ ನಿರ್ಧಾರವನ್ನು ತೆಗೆದುಕೊಳ್ಳುವಂತೆ ನ್ಯಾಯಾಲಯವು ನ್ಯಾಯಮಂಡಳಿಗೆ ನಿರ್ದೇಶಿಸಿದೆ.
4. ಪುಣೆಯ ಒಂದು ನಿರ್ದಿಷ್ಟ ಮುಸ್ಲಿಂ ಸಮುದಾಯಕ್ಕಾಗಿ ಮಸೀದಿಯನ್ನು ಹೊಂದಿರುವ ಈ ಪ್ರಮುಖ ಆಸ್ತಿ ಇಮಾಮಬಾರಾ 1953 ರಲ್ಲಿ ಮೊದಲ ಬಾರಿಗೆ ‘ಮುಸ್ಲಿಂ ಸಾರ್ವಜನಿಕ ಟ್ರಸ್ಟ್’ ಎಂದು ನೋಂದಣಿಯಾಗಿತ್ತು.
5. ಟ್ರಸ್ಟ್ ನಲ್ಲಿನ ಅವ್ಯವಸ್ಥೆಯ ಆರೋಪಗಳಿಂದಾಗಿ ‘ವಕ್ಫ್ ಸಂಸ್ಥೆ’ ಎಂದು ನೋಂದಾಯಿಸಲು ವಕ್ಫ್ ಮಂಡಳಿಗೆ ಅರ್ಜಿ ಸಲ್ಲಿಸಲಾಯಿತು. ವಕ್ಫ್ ಮಂಡಳಿಯ 2016 ರ ಆದೇಶದಿಂದಾಗಿ ಟ್ರಸ್ಟಿಗಳಿಗೆ ವಕ್ಫ್ ನ್ಯಾಯಮಂಡಳಿಯ ಮುಂದೆ ನಿರ್ಣಯವನ್ನು ಪ್ರಶ್ನಿಸಬೇಕಾಯಿತು. ಆದರೆ 2023 ರಲ್ಲಿ
ನ್ಯಾಯಮಂಡಳಿ ಅವರ ಅರ್ಜಿಯನ್ನು ತಿರಸ್ಕರಿಸಿತು. ಆದ್ದರಿಂದ ಟ್ರಸ್ಟಿಗಳು ಉಚ್ಚ ನ್ಯಾಯಾಲಯದಲ್ಲಿ ಸಿವಿಲ್ ಪರಿಶೀಲನಾ ಅರ್ಜಿಯನ್ನು ಸಲ್ಲಿಸಬೇಕಾಯಿತು.