ಕಾಶ್ಮೀರದ ಕುರಿತು ಭಾರತವು ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನವನ್ನು ಪುನಃ ತರಾಟೆಗೆ ತೆಗೆದುಕೊಂಡಿತು

ನ್ಯೂಯಾರ್ಕ್ (ಅಮೇರಿಕಾ) – ಜಮ್ಮು-ಕಾಶ್ಮೀರವು ಭಾರತದ ಅವಿಭಾಜ್ಯ ಅಂಗವಾಗಿತ್ತು, ಇದೆ ಮತ್ತು ಯಾವಾಗಲೂ ಇರುತ್ತದೆ. ಪಾಕಿಸ್ತಾನವು ಜಮ್ಮು ಮತ್ತು ಕಾಶ್ಮೀರದ ಭೂಪ್ರದೇಶವನ್ನು ಅಕ್ರಮವಾಗಿ ನಿಯಂತ್ರಿಸುತ್ತಿದೆ, ಅದನ್ನು ಅದು ಬಿಟ್ಟುಕೊಡಬೇಕು ಎಂದು ವಿಶ್ವಸಂಸ್ಥೆಯಲ್ಲಿ ಭಾರತವು ಪಾಕಿಸ್ತಾನವನ್ನು ತರಾಟೆಗೆ ತೆಗೆದುಕೊಂಡಿತು. ಪಾಕಿಸ್ತಾನವು ಎಂದಿನಂತೆ ಇಲ್ಲಿ ಜಮ್ಮು ಮತ್ತು ಕಾಶ್ಮೀರದ ವಿಷಯವನ್ನು ಪ್ರಸ್ತಾಪಿಸಿದಾಗ ಭಾರತವು ಎಂದಿನಂತೆ ಪಾಕಿಸ್ತಾನವನ್ನು ತರಾಟೆಗೆ ತೆಗೆದುಕೊಂಡಿತು.
ವಿಶ್ವಸಂಸ್ಥೆಯಲ್ಲಿ ಭಾರತದ ರಾಯಭಾರಿ ಪಿ. ಹರೀಶ್ ಅವರು ಮಾತನಾಡಿ, ಪಾಕಿಸ್ತಾನದ ಪ್ರತಿನಿಧಿಯು ಮತ್ತೊಮ್ಮೆ ಭಾರತೀಯ ಕೇಂದ್ರಾಡಳಿತ ಪ್ರದೇಶವಾದ ಜಮ್ಮು ಮತ್ತು ಕಾಶ್ಮೀರದ ಬಗ್ಗೆ ಅನುಚಿತ ಹೇಳಿಕೆ ನೀಡಿದ್ದಾರೆ. ಇಂತಹ ಸುಳ್ಳು ಹೇಳಿಕೆಗಳನ್ನು ನಿಜವೆಂದು ಪರಿಗಣಿಸಲು ಸಾಧ್ಯವಿಲ್ಲ. ಅಲ್ಲದೆ, ಪಾಕಿಸ್ತಾನ ಪ್ರಾಯೋಜಿತ ಗಡಿಯಾಚೆಗಿನ ಭಯೋತ್ಪಾದನೆಯನ್ನು ಬೆಂಬಲಿಸಲು ಸಾಧ್ಯವಿಲ್ಲ. ನಾವು ಪಾಕಿಸ್ತಾನಕ್ಕೆ, ತನ್ನ ಸಂಕುಚಿತ ಮತ್ತು ವಿಭಜಿಸುವ ನೀತಿಯನ್ನು ಮುಂದುವರಿಸಲು ವಿಶ್ವಸಂಸ್ಥೆಯಂತಹ ವೇದಿಕೆಯನ್ನು ಬಳಸಬಾರದು, ಸಲಹೆ ನೀಡುತ್ತೇವೆ.
ಮಹಿಳೆಯರನ್ನು ಹೊರತುಪಡಿಸಿ ಶಾಂತಿ ಸ್ಥಾಪನೆ ಅಸಾಧ್ಯ
ಹರೀಶ್ ಅವರು ಮಹಿಳಾ ಶಾಂತಿಪಾಲಕರ ಪಾತ್ರದ ಬಗ್ಗೆ ಮಾತನಾಡುತ್ತಾ, ಮಹಿಳೆಯರನ್ನು ಹೊರತುಪಡಿಸಿ ಶಾಂತಿ ಸ್ಥಾಪನೆ ಅಸಾಧ್ಯ. ಮಹಿಳೆಯರು ಶಾಂತಿ ಸ್ಥಾಪಿಸಬಹುದೇ? ಎಂಬುದು ಈಗ ಪ್ರಶ್ನೆಯಲ್ಲ. ಬದಲಾಗಿ ಮಹಿಳೆಯರನ್ನು ಹೊರತುಪಡಿಸಿ ಶಾಂತಿ ಸ್ಥಾಪಿಸಲು ಸಾಧ್ಯವೇ ? ಎಂಬುದು ಪ್ರಶ್ನೆಯಾಗಿದೆ.
ಸಂಪಾದಕೀಯ ನಿಲುವುಪಾಕಿಸ್ತಾನಕ್ಕೆ ಮಾತಿನಿಂದ ಅಲ್ಲ, ಶಸ್ತ್ರಾಸ್ತ್ರಗಳ ಭಾಷೆ ಮಾತ್ರ ಅರ್ಥವಾಗುವುದರಿಂದ ಭಾರತವು ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನು ಮುಕ್ತಗೊಳಿಸುವುದು ಅವಶ್ಯಕ! |