ಒಬ್ಬ ಅಪರಾಧಿಗೆ 3 ವರ್ಷಗಳ ಜೈಲು ಶಿಕ್ಷೆ
ಕಣ್ಣೂರು (ಕೇರಳ) – ಕೇರಳದ ತಲಸ್ಸೆರಿಯ ಪ್ರಧಾನ ಸೆಷನ್ಸ್ ನ್ಯಾಯಾಧೀಶ ಕೆ.ಟಿ. ನಿಸಾರ್ ಅಹಮದ್ ಅವರು ಭಾಜಪ ಕಾರ್ಯಕರ್ತ ಎಲಾಂಬಿಲಾಯಿ ಸೂರಜ್ ಹತ್ಯೆ ಪ್ರಕರಣದಲ್ಲಿ ಮಾರ್ಕ್ಸ್‌ವಾದಿ ಕಮ್ಯುನಿಸ್ಟ್ ಪಕ್ಷದ (ಸಿಪಿಎಂ) 9 ಕಾರ್ಯಕರ್ತರನ್ನು ತಪ್ಪಿತಸ್ಥ ಎಂದು ತೀರ್ಪು ನೀಡಿದ್ದಾರೆ. ಈ ಪ್ರಕರಣದಲ್ಲಿ ಸಿಪಿಎಂನ 8 ಕಾರ್ಯಕರ್ತರಿಗೆ ಜೀವಾವಧಿ ಶಿಕ್ಷೆ ಮತ್ತು ತಲಾ 50 ಸಾವಿರ ರೂಪಾಯಿ ದಂಡ ವಿಧಿಸಲಾಗಿದೆ. ಮತ್ತೊಬ್ಬ ಅಪರಾಧಿಗೆ 3 ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು 25 ಸಾವಿರ ರೂಪಾಯಿ ದಂಡ ವಿಧಿಸಲಾಗಿದೆ.
1. ಜೀವಾವಧಿ ಶಿಕ್ಷೆಗೆ ಗುರಿಯಾದವರಲ್ಲಿ 2012ರ ಟಿ.ಪಿ. ಚಂದ್ರಶೇಖರನ್ ಹತ್ಯೆ ಪ್ರಕರಣದಲ್ಲಿ ಈಗಾಗಲೇ ಜೈಲು ಶಿಕ್ಷೆ ಅನುಭವಿಸುತ್ತಿರುವ ಟಿ.ಕೆ. ರಾಜೇಶ್ ಮತ್ತು ಕೇರಳ ಮುಖ್ಯಮಂತ್ರಿಗಳ ಮಾಧ್ಯಮ ಕಾರ್ಯದರ್ಶಿ ಪಿ.ಎಂ. ಮನೋಜ್ ಅವರ ಸಹೋದರ ಪಿ.ಎಂ. ಮನೋರಾಜ್ ಕೂಡ ಸೇರಿದ್ದಾರೆ. (ಇದರ ಅರ್ಥ ಸಿಪಿಎಂ ಕಾರ್ಯಕರ್ತರು ನುರಿತ ಅಪರಾಧಿಗಳಂತೆ ಕೊಲೆ ಮಾಡುತ್ತಾರೆಂದು ಇದರಿಂದ ತಿಳಿದುಬರುತ್ತದೆ! – ಸಂಪಾದಕರು)
2. ಆಗಸ್ಟ್ 7, 2005 ರಂದು ಬೆಳಿಗ್ಗೆ 8.40ಕ್ಕೆ ಮುಜಪ್ಪಿಲಂಗಡ್ ಟೆಲಿಫೋನ್ ಎಕ್ಸ್‌ಚೇಂಜ್ ಮುಂದೆ ಆಟೋ ರಿಕ್ಷಾದಲ್ಲಿ ಬಂದ ಕೆಲವರು ಸೂರಜ್‌ನನ್ನು ಕೊಂದರು. ಸರಕಾರಿ ವಕೀಲರ ಪ್ರಕಾರ ಸಿಪಿಎಂ ತೊರೆದು ಭಾಜಪಗೆ ಸೇರಿದ ನಂತರ ರಾಜಕೀಯ ದ್ವೇಷದಿಂದ ಸೂರಜ್‌ನನ್ನು ಕೊಲೆ ಮಾಡಲಾಗಿದೆ, ಎಂದು ಹೇಳಿದ್ದಾರೆ.
3. ಘಟನೆಗೆ 6 ತಿಂಗಳ ಮೊದಲು ಸೂರಜ್‌ನನ್ನು ಕೊಲೆ ಮಾಡಲು ಪ್ರಯತ್ನಿಸಲಾಗಿತ್ತು. ಆತನ ಎರಡೂ ಕಾಲುಗಳಿಗೆ ಗಾಯಗಳಾಗಿದ್ದು 6 ತಿಂಗಳಿಂದ ಹಾಸಿಗೆ ಹಿಡಿದಿದ್ದನು.
4. ಕೊಲೆ ಮತ್ತು ಸಂಚು ರೂಪಿಸಿದ ಆರೋಪದ ಮೇಲೆ ಸಿಪಿಎಂನ 12 ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಘಟನೆ ನಡೆದ ನಂತರ 2 ಆರೋಪಿಗಳು ಮೃತಪಟ್ಟಿದ್ದಾರೆ.
ಸಂಪಾದಕೀಯ ನಿಲುವು
|