Woman Killed Husband With Muslim Lover’s Help : ಮುಂಬಯಿ: ಮುಸ್ಲಿಂ ಪ್ರಿಯಕರನ ಸಹಾಯದಿಂದ ಪತಿಯ ಹತ್ಯೆಗೈದ ಹಿಂದೂ ಮಹಿಳೆ !

ಇಬ್ಬರು ಮುಸ್ಲಿಮರು ಮತ್ತು ಹಿಂದೂ ಮಹಿಳೆಯ ಬಂಧನ !

ಮುಂಬಯಿ – ಹಿಂದೂ ಮಹಿಳೆಯೊಬ್ಬಳು ತನ್ನ ಪ್ರಿಯಕರ ಶಾರುಖ್‌ಗಾಗಿ ತನ್ನ ಪತಿ ಚಂದ್ರಶೇಖರ್‌ನ ಕತ್ತು ಹಿಸುಕಿ ಕೊಲೆ ಮಾಡಿದ್ದಾಳೆ. ಈ ಕೊಲೆಗೆ ಮೊಯಿನುದ್ದೀನ್ ಖಾನ್ ಎಂಬಾತ ಸಹಾಯ ಮಾಡಿದ್ದಾನೆ. ಈ ಪ್ರಕರಣದಲ್ಲಿ ಪೊಲೀಸರು ಇಬ್ಬರು ಮಾತಾಂಧರನ್ನು ಮತ್ತು ಮಹಿಳೆಯನ್ನು ಬಂಧಿಸಿದ್ದಾರೆ.

ಪತಿಯ ಮರಣದ ಬಗ್ಗೆ ಪೊಲೀಸರಿಗೆ ಹೇಳುವಾಗ ಆಕೆ, ಪತಿ ರಾತ್ರಿ ಹೊರಗೆ ಹೋಗಿ ಮರಳಿ ಬಂದು ಮಲಗಿದನು. ಬೆಳಿಗ್ಗೆ ಎದ್ದು ನೋಡಿದಾಗ ಆತ ಸತ್ತಿರುವುದು ತಿಳಿಯಿತು; ಆದರೆ ಪೊಲೀಸರಿಗೆ ಮೃತ ಚಂದ್ರಶೇಖರ್ ಅವರ ಕತ್ತು ಹಿಸುಕಿದ ಗುರುತುಗಳು ಕಂಡುಬಂದವು. ಅನುಮಾನ ಬಂದ ಪೊಲೀಸರು ಮಹಿಳೆಯ ವಿಚಾರಣೆ ನಡೆಸಿದರು. ಆಕೆಯ ಮೊಬೈಲ್ ನಲ್ಲಿ ಶಾರುಖ್‌ನ ನಂಬರ್ ಪತ್ತೆಯಾಯಿತು. ಪೊಲೀಸರು ಶಾರುಖ್ ಮತ್ತು ಮೊಯಿನುದ್ದೀನ್ ಅವರನ್ನು ಬಂಧಿಸಿದರು. ವಿಚಾರಣೆಯ ಬಳಿಕ ತಾವು ಕೊಲೆ ಮಾಡಿರುವುದಾಗಿ ಅವರು ಒಪ್ಪಿಕೊಂಡರು.

ಸಂಪಾದಕೀಯ ನಿಲುವು

  • ‘ಲವ್ ಜಿಹಾದ್’ ಘಟನೆಗಳು ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿದ್ದರೂ, ಮತಾಂಧ ಪ್ರೀತಿಯಲ್ಲಿ ಕುರುಡಾಗಿ ತನ್ನ ಪತಿಯನ್ನೇ ಕೊಲ್ಲುವ ಹಂತಕ್ಕೆ ಹಿಂದೂ ಮಹಿಳೆ ಹೋಗಿರುವುದು ದುರದೃಷ್ಟಕರ !
  • ಹಿಂದೂ ಮಹಿಳೆಯು ಮತಾಂಧರಿಗಾಗಿ ಪತಿಯನ್ನು ಕೊಲ್ಲುವ ಮಹಾಪಾಪವನ್ನು ಮಾಡಲು ಧರ್ಮಶಿಕ್ಷಣದ ಕೊರತೆಯೇ ಕಾರಣ !