ಕರಾಡ, ಮಾರ್ಚ್ 19 (ಸುದ್ದಿ) – ಇಲ್ಲಿನ ಪ್ರೀತಿ ಸಂಗಮದಲ್ಲಿರುವ ಕರಾಡದ ಗ್ರಾಮದೇವತೆ ಕೃಷ್ಣಾಮಾಯಿ ದೇವಸ್ಥಾನದಲ್ಲಿ ಕಳ್ಳತನವಾಗಿದೆ. ಮಾರ್ಚ್ 17 ರ ಮುಂಜಾನೆ ದೇವಸ್ಥಾನದ ಅರ್ಚಕರು ಪೂಜೆಗಾಗಿ ದೇವಸ್ಥಾನಕ್ಕೆ ಬಂದಾಗ ಈ ಘಟನೆ ಬೆಳಕಿಗೆ ಬಂದಿದೆ. ಅಂದಾಜು 400 ರಿಂದ 500 ರೂಪಾಯಿ ಚಿಲ್ಲರೆಯನ್ನು ಕಳ್ಳರು ಕದ್ದೊಯ್ದಿದ್ದಾರೆ. ಈ ಬಗ್ಗೆ ಯಾವುದೇ ದೂರು ಬಾರದ ಕಾರಣ ಪ್ರಕರಣ ದಾಖಲಿಸಲಾಗಿಲ್ಲ ಎಂದು ಕರಾಡ ನಗರ ಪೊಲೀಸರು ತಿಳಿಸಿದ್ದಾರೆ. (ಇತರ ಧರ್ಮಗಳ ಶ್ರದ್ಧಾ ಸ್ಥಾನಗಳ ವಿಷಯದಲ್ಲೂ ಪೊಲೀಸರ ನಿಲುವು ಇದೇ ರೀತಿ ಇರುತ್ತಿತ್ತೇ? – ಸಂಪಾದಕರು )
ಈ ಬಗ್ಗೆ ದೇವಸ್ಥಾನದ ಅರ್ಚಕರಾದ ಅವಟೆ ಮಾತನಾಡಿ, “ಮಾರ್ಚ್ 17 ರ ಮುಂಜಾನೆ ಪೂಜೆ ಮಾಡಲು ನಾನು ದೇವಸ್ಥಾನಕ್ಕೆ ಬಂದಾಗ ದೇವಸ್ಥಾನದ ಬಾಗಿಲಿನ ಬೀಗಗಳು ಮುರಿದಿದ್ದವು. ದೇವಸ್ಥಾನದ ಕಾಣಿಕೆ ಹುಂಡಿಯಲ್ಲಿ ಹಣವಿಲ್ಲದಿರುವುದು ಕಂಡುಬಂದಿತು. ಕಳ್ಳರು ದೇವಸ್ಥಾನದ ನದಿಯ ಕಡೆಯ ಬಾಗಿಲಿನ ಬೀಗವನ್ನು ಮುರಿದು ಒಳಗಿನ ಬಾಗಿಲಿನ ಬೀಗವನ್ನು ಮುರಿಯಲು ಪ್ರಯತ್ನಿಸಿರಬೇಕು; ಆದರೆ ಅದು ಯಶಸ್ವಿಯಾಗಲಿಲ್ಲ. ನಂತರ ದೇವಸ್ಥಾನದ ಮುಖ್ಯ ಬಾಗಿಲಿನ ಬೀಗವನ್ನು ಮುರಿದು ಕಳ್ಳರು ದೇವಸ್ಥಾನದೊಳಗೆ ಪ್ರವೇಶಿಸಿರಬೇಕು. ದೇವಸ್ಥಾನದ ಒಂದು ಕಾಣಿಕೆ ಹುಂಡಿಯಲ್ಲಿದ್ದ ಚಿಲ್ಲರೆಯನ್ನು ಅವರು ಕದ್ದೊಯ್ದಿದ್ದಾರೆ. ದೇವಸ್ಥಾನದಲ್ಲಿ ಸಿಸಿಟಿವಿ ಕ್ಯಾಮೆರಾಗಳು ಇಲ್ಲದಿರುವುದರಿಂದ ಇಂತಹ ಕಳ್ಳತನಗಳು ಪದೇ ಪದೇ ನಡೆಯುತ್ತಿವೆ. ಆದ್ದರಿಂದ ಗ್ರಾಮದೇವತೆ ಕೃಷ್ಣಾಮಾಯಿ ದೇವಸ್ಥಾನದ ಭದ್ರತೆಯ ಪ್ರಶ್ನೆ ಮುನ್ನೆಲೆಗೆ ಬಂದಿದೆ. ನಾಗರಿಕರು ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಬೇಕೆಂದು ಒತ್ತಾಯಿಸುತ್ತಿದ್ದಾರೆ.” ಎಂದು ಹೇಳಿದರು. (ಇಂತಹ ಬೇಡಿಕೆ ಏಕೆ ಮಾಡಬೇಕಾಗುತ್ತಿದೆ? ಕೃಷ್ಣಾಮಾಯಿ ದೇವಸ್ಥಾನದಲ್ಲಿ ಪದೇ ಪದೇ ಕಳ್ಳತನವಾಗುತ್ತಿದ್ದರೂ ಇಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಏಕೆ ಅಳವಡಿಸಲಾಗಿಲ್ಲ? ಇದರಿಂದ ಆಡಳಿತವು ಹಿಂದೂ ದೇವಸ್ಥಾನಗಳ ರಕ್ಷಣೆಯಾಗಬೇಕು ಎಂದು ಬಯಸುವುದಿಲ್ಲ ಎಂದು ಹಿಂದೂಗಳು ಅರ್ಥಮಾಡಿಕೊಳ್ಳಬೇಕೇ? – ಸಂಪಾದಕರು)
ಸಂಪಾದಕೀಯ ನಿಲುವುಹಿಂದೂಗಳು ಜಾಗೃತ ಹಾಗೂ ಸಂಘಟಿತರಾಗಿ ದೇವಸ್ಥಾನಗಳನ್ನು ರಕ್ಷಿಸುವುದು ಅವಶ್ಯಕವಾಗಿದೆ ! |