Canada Blames India : ‘ಭಾರತವು ನಮ್ಮ ದೇಶದ ಚುನಾವಣೆಯಲ್ಲಿ ಹಸ್ತಕ್ಷೇಪ ಮಾಡಬಹುದಂತೆ!’ – ಕೆನಡಾ

ಜಸ್ಟಿನ್ ಟ್ರುಡೊ ಕೆಳಗಿಳಿದ ನಂತರವೂ ಕೆನಡಾದ ಭಾರತ ದ್ವೇಷ ಮುಂದುವರೆಕೆ !

ಕೆನಡಾದ ಭದ್ರತಾ ಗುಪ್ತಚರ ಸೇವೆಯ ಉಪನಿರ್ದೇಶಕಿ ವೆನೆಸ್ಸಾ ಲಾಯ್ಡ್

ಒಟ್ಟಾವಾ (ಕೆನಡಾ) – ಖಲಿಸ್ತಾನಿ ಭಯೋತ್ಪಾದಕ ಹರದೀಪ ಸಿಂಗ ನಿಜ್ಜರ ಹತ್ಯೆಯಿಂದ ಭಾರತ ಮತ್ತು ಕೆನಡಾ ನಡುವಿನ ಸಂಬಂಧ ಹದಗೆಟ್ಟಿದೆ. ಈಗ ಕೆನಡಾದ ಗುಪ್ತಚರ ಸಂಸ್ಥೆಯು ಏಪ್ರಿಲ್ 28 ರಂದು ಕೆನಡಾದಲ್ಲಿ ನಡೆಯುವ ಸಾರ್ವತ್ರಿಕ ಚುನಾವಣೆಯಲ್ಲಿ ಭಾರತ ಮತ್ತು ಚೀನಾ ಹಸ್ತಕ್ಷೇಪ ಮಾಡಬಹುದು ಎಂದು ಆರೋಪಿಸಿದೆ.

ಕೆನಡಾದ ಭದ್ರತಾ ಗುಪ್ತಚರ ಸೇವೆಯ ಉಪನಿರ್ದೇಶಕಿ ವೆನೆಸ್ಸಾ ಲಾಯ್ಡ್ ಪ್ರಕಾರ, ಚೀನಾ ಕೃತಕ ಬುದ್ಧಿಮತ್ತೆಯ ಮೂಲಕ ಕೆನಡಾದ ಚುನಾವಣೆಯಲ್ಲಿ ಹಸ್ತಕ್ಷೇಪ ಮಾಡಲು ಪ್ರಯತ್ನಿಸುತ್ತಿದೆ. ಅದೇ ಸಮಯದಲ್ಲಿ, ಭಾರತ ಸರಕಾರವು ಕೆನಡಾದ ಚುನಾವಣೆಯಲ್ಲಿ ಹಸ್ತಕ್ಷೇಪ ಮಾಡುವ ಉದ್ದೇಶವನ್ನು ಹೊಂದಿದೆ. ಭಾರತವು ಆ ಸಾಮರ್ಥ್ಯವನ್ನು ಹೊಂದಿದೆ, ಎಂದು ಹೇಳಿದ್ದಾರೆ.

ಕೆನಡಾದ ಈ ಆರೋಪಕ್ಕೆ ಅಲ್ಲಿನ ಚೀನಾ ಮತ್ತು ಭಾರತದ ರಾಯಭಾರಿಗಳು ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಸಂಪಾದಕೀಯ ನಿಲುವು

ಭಾರತದ ಚುನಾವಣೆಯಲ್ಲಿ ಪಾಶ್ಚಿಮಾತ್ಯ ದೇಶಗಳು ಈವರೆಗೆ ಹಸ್ತಕ್ಷೇಪ ಮಾಡುತ್ತಿದ್ದಾಗ, ಭಾರತವು ಅವರ ದೇಶದ ಚುನಾವಣೆಯಲ್ಲಿ ಹಸ್ತಕ್ಷೇಪ ಮಾಡುತ್ತಿದೆ ಎಂಬ ಆರೋಪ ಹಾಸ್ಯಾಸ್ಪದವಾಗಿದೆ! ಭಾರತವು ತನ್ನ ಶತ್ರು ದೇಶದಲ್ಲಿ ಅಂತಹದ್ದೇನಾದರೂ ಮಾಡುತ್ತಿದ್ದರೆ ಭಾರತೀಯರಿಗೆ ಸಂತೋಷಪಡುತ್ತಿದ್ದರು; ಆದರೆ ವಾಸ್ತವದಲ್ಲಿ ಅಂತಹದ್ದೇನೂ ನಡೆಯುತ್ತಿಲ್ಲ!