ವಕ್ಫ್ ಮತ್ತು ‘ಪೂಜಾ ಸ್ಥಳ’ ಕಾನೂನುಗಳನ್ನು ರದ್ದುಗೊಳಿಸಿ! – ನ್ಯಾಯವಾದಿ ವಿಷ್ಣು ಶಂಕರ ಜೈನ್, ಸುಪ್ರೀಂ ಕೋರ್ಟ್

ನಾಗಪುರದಲ್ಲಿ ಮಹಾರಾಷ್ಟ್ರ ಮಂದಿರ-ನ್ಯಾಸ ಪರಿಷತ್ತು

ಎಡದಿಂದ ಡಾ. ಪರಿಣಯ ಫುಕೆ, ಪೂ. ಭಾಗೀರಥಿ ಮಹಾರಾಜ, ಪೂ. ಅಶೋಕ ಪಾತ್ರಿಕರ್, ಪೂ. ಸುರೇಶ ಕುಲಕರ್ಣಿ, ನ್ಯಾಯವಾದಿ ವಿಷ್ಣು ಶಂಕರ ಜೈನ್, ಶ್ರೀ. ಸುನೀಲ್ ಘನವಟ್, ಶ್ರೀಮಂತ ರಾಜೇ ಮುಧೋಜಿ ಭೋಸಲೆ

ನಾಗಪುರ, ಮಾರ್ಚ್ 25 (ವಾರ್ತೆ) – ಒಂದು ಕಡೆ ಪೂಜಾ ಸ್ಥಳ (‘ಪ್ಲೇಸಸ್ ಆಫ್ ವರ್ಶಿಪ್’) ಕಾನೂನಿನಿಂದ ಹಿಂದೂಗಳ ನ್ಯಾಯ ಕೇಳುವ ಹಕ್ಕನ್ನು ಕಸಿದುಕೊಳ್ಳಲಾಗಿದೆ, ಮತ್ತೊಂದೆಡೆ ‘ವಕ್ಫ್’ ಕಾನೂನು ಹಿಂದೂಗಳ ಭೂಮಿಯನ್ನು ಬಲವಂತವಾಗಿ ಕಸಿದುಕೊಳ್ಳುವ ಕ್ರೂರ ಹಕ್ಕನ್ನು ಇತರ ಧರ್ಮಗಳಿಗೆ ನೀಡಿದೆ. ವಕ್ಫ್ ಮಂಡಳಿಯು ಅಕ್ರಮವಾಗಿ ಕಸಿದುಕೊಂಡ ಭೂಮಿಯನ್ನು ಹಿಂದೂ ಕಾನೂನಿನಿಂದ ಹಿಂದಿರುಗಿಸಲು ಸಾಧ್ಯವಿಲ್ಲ ಅಥವಾ ಅದರ ವಿರುದ್ಧ ದೂರು ನೀಡಲು ಸಾಧ್ಯವಿಲ್ಲ. ಈ ಎರಡೂ ಕಾನೂನುಗಳನ್ನು ರದ್ದುಪಡಿಸುವುದು ಹಿಂದೂಗಳ ಆದ್ಯತೆಯಾಗಿರಬೇಕು ಎಂದು ಸುಪ್ರೀಂ ಕೋರ್ಟ್‌ನ ನ್ಯಾಯವಾದಿ ವಿಷ್ಣು ಶಂಕರ ಜೈನ್ ಹೇಳಿದ್ದಾರೆ. ಇಲ್ಲಿ ಆಯೋಜಿಸಲಾಗಿದ್ದ ಮಹಾರಾಷ್ಟ್ರ ಮಂದಿರ – ನ್ಯಾಸ ಪರಿಷತ್ತನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು. ಮಹಾರಾಷ್ಟ್ರ ಮಂದಿರ ಮಹಾಸಂಘ, ಹಿಂದೂ ಜನಜಾಗೃತಿ ಸಮಿತಿ, ಶ್ರೀ ಟೇಕಡಿ ಗಣಪತಿ ಮಂದಿರ, ನಾಗಪುರ, ಶ್ರೀ ಜಗದಂಬಾ ದೇವಸ್ಥಾನ ಕೊರಾಡಿ, ಶ್ರೀ ಪಂಚಮುಖಿ ಸಂಕಟಮೋಚನ ಹನುಮಾನ ಮಂದಿರ, ಹಿಲ್ ಟಾಪ್ ದುರ್ಗಾಮಾತಾ ಮಂದಿರ ಇವರ ಸಹಯೋಗದಲ್ಲಿ ಇಲ್ಲಿ ದ್ವಿತೀಯ ಮಹಾರಾಷ್ಟ್ರ ಮಂದಿರ ನ್ಯಾಸ ಅಧಿವೇಶನವನ್ನು ಆಯೋಜಿಸಲಾಗಿತ್ತು. ನಾಗಪುರ ನಗರ ಮತ್ತು ತಾಲೂಕಿನ 250 ಕ್ಕೂ ಹೆಚ್ಚು ಮಂದಿರಗಳ ಟ್ರಸ್ಟಿಗಳು ಅಧಿವೇಶನದಲ್ಲಿ ಉಪಸ್ಥಿತರಿದ್ದರು.

ನ್ಯಾಯವಾದಿ ವಿಷ್ಣು ಶಂಕರ ಜೈನ್ ಅವರನ್ನು ಸನ್ಮಾನಿಸುತ್ತಿರುವ ಶ್ರೀಮಂತ ರಾಜೇ ಮುಧೋಜಿ ಭೋಸಲೆ

ಅಧಿವೇಶನದ ಆರಂಭವನ್ನು ಸನಾತನ ಸಂಸ್ಥೆಯ ಸಂತ ಪೂಜ್ಯ ಅಶೋಕ ಪಾತ್ರಿಕರ್, ಹಿಂದೂ ವಿಧಿಜ್ಞ ಪರಿಷತ್ತಿನ ಪೂಜ್ಯ ಸುರೇಶ್ ಕುಲಕರ್ಣಿ, ‘ಗುರುಸೇವಾ ಆಶ್ರಮ’ದ ಅಧ್ಯಕ್ಷ ಪೂಜ್ಯ ಭಾಗೀರಥಿ ಮಹಾರಾಜ, ಸುಪ್ರೀಂ ಕೋರ್ಟ್‌ನ ನ್ಯಾಯವಾದಿ ಶ್ರೀ. ವಿಷ್ಣು ಶಂಕರ ಜೈನ್, ಶ್ರೀಮಂತ ಮುಧೋಜಿ ರಾಜೇ ಭೋಸಲೆ, ಶ್ರೀ ಮಾರ್ಟಂಡ ದೇವ ಸಂಸ್ಥಾನ, ಜೆಜೂರಿಯ ಟ್ರಸ್ಟಿ ಡಾ. ರಾಜೇಂದ್ರ ಖೇಡೇಕರ್, ನ್ಯಾಯವಾದಿ ಪಾಂಡುರಂಗ ಥೋರವೆ ಅವರ ಹಸ್ತದಿಂದ ದೀಪ ಬೆಳಗಿಸುವ ಮೂಲಕ ಮಾಡಲಾಯಿತು. ಸನಾತನ ಸಂಸ್ಥೆಯ ಸಂಸ್ಥಾಪಕ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಬಾಳಾಜಿ ಆಠವಳೆ ಅವರ ಸಂದೇಶವನ್ನು ಸನಾತನ ಸಂಸ್ಥೆಯ ಪೂಜ್ಯ ಅಶೋಕ ಪಾತ್ರಿಕರ್ ಅವರು ಓದಿದರು.

ಗಣ್ಯರ ಮಾರ್ಗದರ್ಶನ

ಮಂದಿರ ಮಹಾಸಂಘದ ಕಾರ್ಯದಲ್ಲಿ ಭೋಸಲೆ ರಾಜ ಪರಿವಾರವು ಸಹಾಯ ಮಾಡಲು ಸಿದ್ಧ! – ಶ್ರೀಮಂತ ರಾಜೇ ಮುಧೋಜಿ ಭೋಸಲೆ, ನಾಗಪುರ

ಮಂದಿರ ಮಹಾಸಂಘವು ಉತ್ತಮ ಕಾರ್ಯವನ್ನು ಕೈಗೆತ್ತಿಕೊಂಡಿದೆ. ಹಿಂದೂ ಹಿತದ ಕಾನೂನುಗಳನ್ನು ಸರಕಾರವು ಜಾರಿಗೆ ತರಲು ನಾವೆಲ್ಲರೂ ಒಟ್ಟಾಗಿ ಒತ್ತಡ ಹೇರಬಹುದು. ಮಂದಿರ ಸಂಸ್ಕೃತಿಯ ರಕ್ಷಣೆ ಮತ್ತು ಸಂವರ್ಧನೆಯ ಈ ಅಭಿಯಾನದಲ್ಲಿ ಭೋಸಲೆ ರಾಜ ಪರಿವಾರವು ಯಾವಾಗಲೂ ಜೊತೆಗಿರುತ್ತದೆ ಮತ್ತು ನಾವೆಲ್ಲರೂ ಒಟ್ಟಾಗಿ ಸಂಘಟಿತವಾಗಿ ಈ ಕಾರ್ಯವನ್ನು ಮುಂದುವರಿಸುತ್ತೇವೆ! ಎಂದು ಹೇಳಿದರು.

ಮಂದಿರಗಳು ಸುರಕ್ಷಿತವಾಗಿದ್ದಾಗ ಮಾತ್ರ ದೇವರು, ಧರ್ಮ ಮತ್ತು ದೇಶ ಸುರಕ್ಷಿತವಾಗಿರುತ್ತದೆ! – ಪೂಜ್ಯ ಭಾಗೀರಥಿ ಮಹಾರಾಜ

ಸರಕಾರವು ಮಂದಿರಗಳನ್ನು ಕಾಪಾಡುವುದಿಲ್ಲ. ಅವುಗಳನ್ನು ಕಾಪಾಡಲು ನಾವು ಶ್ರಮಿಸಬೇಕಾಗುತ್ತದೆ, ಹೋರಾಡಬೇಕಾಗುತ್ತದೆ. ಮಂದಿರಗಳು ಸನಾತನ ಧರ್ಮದ ಶಕ್ತಿ ಕೇಂದ್ರಗಳಾಗಿವೆ; ಆದ್ದರಿಂದ ಯಾವುದೇ ಅಹಿತಕರ ಘಟನೆ ಸಂಭವಿಸಿದಾಗ, ಮೊದಲು ಮಂದಿರಗಳ ಮೇಲೆ ಆಕ್ರಮಣ ಮಾಡಲಾಗುತ್ತದೆ. ಮಂದಿರಗಳ ಮೂಲಕವೇ ಧರ್ಮನಿಷ್ಠ ಹಿಂದೂಗಳ ಬೃಹತ್ ಸಂಘಟನೆ ನಡೆಯಲಿದೆ. ಇದರಿಂದಲೇ ಮುಂದೆ ಹಿಂದೂ ರಾಷ್ಟ್ರ ಸ್ಥಾಪನೆಯ ಮಾರ್ಗ ಸುಗಮವಾಗಲಿದೆ. ನಾವು ಹಿಂದೂ ರಾಷ್ಟ್ರ ಸ್ಥಾಪನೆಯ ಬೃಹತ್ ಗುರಿಯನ್ನು ಮುಂದಿಟ್ಟುಕೊಂಡು ಮುನ್ನಡೆಯಬೇಕಾಗಿದೆ, ಎಂದು ಹೇಳಿದರು.

ಧರ್ಮಕ್ಕಾಗಿ ಎಲ್ಲಾ ಹಿಂದೂಗಳು ಒಗ್ಗೂಡಬೇಕು! – ನ್ಯಾಯವಾದಿ ಪೂಜ್ಯ ಸುರೇಶ್ ಕುಲಕರ್ಣಿ, ಹಿಂದೂ ವಿಧಿಜ್ಞ ಪರಿಷತ್ತು

(ಪೂ.) ನ್ಯಾಯವಾದಿ ಸುರೇಶ ಕುಲಕರ್ಣಿ

ತುಳಜಾಪುರ ದೇವಸ್ಥಾನದ ಹಗರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ಹೋರಾಟದ ಮೂಲಕ 8.5 ಕೋಟಿ ರೂಪಾಯಿಗಿಂತಲೂ ಹೆಚ್ಚು ದೇವನಿದಿಯ ದುರುಪಯೋಗವನ್ನು ತಡೆಯಲು ಮಹಾರಾಷ್ಟ್ರ ಮಂದಿರ ಮಹಾಸಂಘ ಮತ್ತು ಹಿಂದೂ ವಿಧಿಜ್ಞ ಪರಿಷತ್ತು ಯಶಸ್ವಿಯಾಗಿವೆ. ಹಾಗೆಯೇ, ದೊಡ್ಡ ಪ್ರಮಾಣದ ದೇವನಿದಿಯನ್ನು ದುರುಪಯೋಗಪಡಿಸಿಕೊಂಡ ಸರಕಾರಿ ನೌಕರರು, ಅಧಿಕಾರಿಗಳು, ಮಂದಿರ ಟ್ರಸ್ಟಿಗಳಿಗೆ ಕಡಿವಾಣ ಹಾಕಲಾಗಿದೆ. ಈ ರೀತಿ ಧರ್ಮಕ್ಕಾಗಿ ಎಲ್ಲಾ ಹಿಂದೂಗಳು ಒಗ್ಗೂಡಬೇಕು.

ದೇಶದ ಮಂದಿರಗಳ ಒಂದು ಇಂಚು ಭೂಮಿಯನ್ನೂ ನಾವು ಯಾರಿಗೂ ಬಿಟ್ಟುಕೊಡುವುದಿಲ್ಲ! – ಸುನೀಲ್ ಘನವಟ್, ಮಂದಿರ ಮಹಾಸಂಘದ ರಾಷ್ಟ್ರೀಯ ಸಂಘಟಕ, ಹಾಗೆಯೇ ಹಿಂದೂ ಜನಜಾಗೃತಿ ಸಮಿತಿಯ ಮಹಾರಾಷ್ಟ್ರ ಮತ್ತು ಛತ್ತೀಸ್‌ಗಢ ರಾಜ್ಯ ಸಂಘಟಕ

ಶ್ರೀ. ಸುನಿಲ ಘನವಟ

ಭ್ರಷ್ಟಾಚಾರದ ನೂರಾರು ಪ್ರಕರಣಗಳಿದ್ದರೂ ಸರಕಾರವು ಯಾವುದೇ ಚರ್ಚ್, ದರ್ಗಾಗಳನ್ನು ವಶಪಡಿಸಿಕೊಳ್ಳುವುದಿಲ್ಲ, ಕೇವಲ ಮಂದಿರಗಳನ್ನು ಮಾತ್ರ ವಶಪಡಿಸಿಕೊಳ್ಳುತ್ತದೆ. ದೇವರಿಗೆ ಮನ್ನಣೆ ನೀಡದ ಸರಕಾರಗಳಿಗೆ ಮಂದಿರಗಳನ್ನು ವಶಪಡಿಸಿಕೊಳ್ಳುವ ಯಾವುದೇ ಹಕ್ಕಿಲ್ಲ. ದೇಶದ ಮಂದಿರಗಳ ಒಂದು ಇಂಚು ಭೂಮಿಯನ್ನೂ ನಾವು ಯಾರಿಗೂ ಬಿಟ್ಟುಕೊಡುವುದಿಲ್ಲ. ನೂರಾರು ವರ್ಷಗಳ ಆಕ್ರಮಣದ ನಂತರವೂ ನಮ್ಮ ಮಂದಿರಗಳು ಸಹಸ್ರಾರು ವರ್ಷಗಳಿಂದ ಹೆಮ್ಮೆಯಿಂದ ನಿಂತಿವೆ; ಏಕೆಂದರೆ ನಮ್ಮ ಪೂರ್ವಜರು ಅವುಗಳನ್ನು ಪ್ರಾಣವನ್ನು ಪಣಕ್ಕಿಟ್ಟು ರಕ್ಷಿಸಿದರು, ಇಂದು ಆ ಜವಾಬ್ದಾರಿ ನಮ್ಮದಾಗಿದೆ.

ಶ್ರೀ ಮಾರ್ತಂಡ ದೇವ ಸಂಸ್ಥಾನ, ಜೆಜೂರಿಯ ಟ್ರಸ್ಟಿ ಡಾ. ರಾಜೇಂದ್ರ ಖೇಡೇಕರ್ ಅವರು ಮಂದಿರದ ಮೂಲಕ ನಡೆಸಲಾಗುವ ವೈದ್ಯಕೀಯ ನಿರ್ವಹಣೆಯ ಕುರಿತು ಅನುಭವ ಹಂಚಿಕೊಂಡರು.

ಅಧಿವೇಶನದಲ್ಲಿ ವಿವಿಧ ನಿರ್ಣಯಗಳು ಅಂಗೀಕಾರ

ಅಧಿವೇಶನದಲ್ಲಿ ಆಯೋಜಿಸಲಾಗಿದ್ದ ಗುಂಪು ಚರ್ಚೆಯಲ್ಲಿ 25 ಸ್ಥಳಗಳಲ್ಲಿ ಸಾಮೂಹಿಕ ಆರತಿ ಮಾಡುವುದು, 45 ಮಂದಿರಗಳಲ್ಲಿ ವಸ್ತ್ರ ಸಂಹಿತೆ ಫಲಕಗಳನ್ನು ಅಳವಡಿಸುವುದು, 20 ಮಂದಿರಗಳಲ್ಲಿ ಧರ್ಮ ಶಿಕ್ಷಣ ತರಗತಿಗಳನ್ನು ನಡೆಸುವುದು ಮತ್ತು 15 ಮಂದಿರಗಳಲ್ಲಿ ಧರ್ಮ ಶಿಕ್ಷಣ ಫಲಕಗಳನ್ನು ಅಳವಡಿಸುವುದು ಮುಂತಾದ ಕಾರ್ಯಗಳನ್ನು ಮಂದಿರ ಟ್ರಸ್ಟಿಗಳು ನಿರ್ಧರಿಸಿದರು. ಸಾಮೂಹಿಕ ಬ್ರಹ್ಮಧ್ವಜ ನಿರ್ಮಾಣ ಮತ್ತು ಗ್ರಂಥಾಲಯ ಪ್ರಾರಂಭಿಸುವ ಕಾರ್ಯಕ್ರಮಗಳಲ್ಲಿಯೂ ಅನೇಕ ಮಂದಿರ ಟ್ರಸ್ಟಿಗಳು ನಿಯಮಿತವಾಗಿ ಭಾಗವಹಿಸಲಿದ್ದಾರೆ. ಅಧಿವೇಶನದಲ್ಲಿ 11 ನಿರ್ಣಯಗಳನ್ನು ‘ಹರ ಹರ ಮಹಾದೇವ’ ಘೋಷಣೆಯೊಂದಿಗೆ ಸರ್ವಾನುಮತದಿಂದ ಅಂಗೀಕರಿಸಲಾಯಿತು.

ಹಿಂದೂ ಜನಜಾಗೃತಿ ಸಮಿತಿಯ ಹಿಂದೂ ಸಂಘಟಕ ಶ್ರೀ. ಆಶಿಷ್ ನಾಗಪುರಕರ್ ಅವರು ವಂದನಾರ್ಪಣೆ ಮಾಡಿದರು. ಕಾರ್ಯಕ್ರಮದ ನಿರೂಪಣೆಯನ್ನು ಸೌ. ಗೌರಿ ಜೋಶಿ ಮತ್ತು ಸೌ. ಕೇತಕಿ ಸಹಸ್ರಬುದ್ಧೆ ಮಾಡಿದರು.