ಚಂಡೀಗಢದಲ್ಲಿ ಕಾಮುಕ ಪಾದ್ರಿಯು ತಾನೇ ಅತ್ಯಾಚಾರ ಮಾಡಿರುವ ಸಂತ್ರಸ್ತೆಯ ಕೆನ್ನೆಗೆ ಹೊಡೆದನು !

2018 ರಲ್ಲಿ ಮತ್ತೊಬ್ಬ ಮಹಿಳೆಯ ಮೇಲೆ ಅತ್ಯಾಚಾರವೆಸಗಿದ್ದಕ್ಕಾಗಿ ಜೈಲುವಾಸ ಅನುಭವಿಸಿದ್ದನು !

ಜಾಲಂಧರ (ಪಂಜಾಬ) – ಪವಾಡಗಳಿಂದ ರೋಗಗಳನ್ನು ಗುಣಪಡಿಸುವುದಾಗಿ ಹೇಳಿಕೊಳ್ಳುವ ಜಾಲಂಧರನ ಪಾದ್ರಿ ಬಜಿಂದರ ಸಿಂಗನು ಓರ್ವ ಮಹಿಳೆ ಮತ್ತು ಯುವಕನ ಕೆನ್ನೆಗೆ ಹೊಡೆದಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ವಿಡಿಯೋ ಫೆಬ್ರವರಿ 14 ರಂದು ನಡೆದ ಘಟನೆಯದ್ದು ಎಂದು ಹೇಳಲಾಗುತ್ತಿದೆ. ಈ ಘಟನೆಯು ಚಂಡೀಗಡದ ಬಜಿಂದರ ಸಿಂಗನ
ಕಚೇರಿಯಲ್ಲಿ ನಡೆದಿದೆ. ಸಂಬಂಧಿತ ಮಹಿಳೆಯು ಪಾದ್ರಿಯ ಮೇಲೆ ತನಗೆ ಲೈಂಗಿಕ ಕಿರುಕುಳ ನೀಡಿರುವ ಬಗ್ಗೆ ಆರೋಪಿಸಿದ್ದಳು ಹಾಗೂ ಈ ಬಗ್ಗೆ ಪೊಲೀಸರಿಗೆ ದೂರು ಕೂಡ ನೀಡಿದ್ದರು. ಆದುದರಿಂದ ಅವನು ಕಚೇರಿಗೆ ಬಂದಿದ್ದ ಆ ಮಹಿಳೆಯೊಂದಿಗೆ ಈ ರೀತಿ ವರ್ತಿಸಿದ್ದಾನೆ ಎನ್ನಲಾಗಿದೆ. ಅವರ ಅನುಯಾಯಿಗಳು ಅವರನ್ನು ‘ಯೇಸು-ಯೇಸುವಾಲೆ ಧರ್ಮಗುರು’ ಎಂದು ಕರೆಯುತ್ತಾರೆ.

1 .ಈ ವಿಡಿಯೋದಲ್ಲಿ ಕೋಪದಿಂದ ಉನ್ಮತ್ತನಾದ ಪಾದ್ರಿ ಬಜಿಂದರ ಸಿಂಗ ತನ್ನ ಕಚೇರಿಗೆ ಬಂದ ಯುವಕನ ಮೇಲೆ ಮೊದಲು ದೂರವಾಣಿ ಮತ್ತು ನಂತರ ಬ್ಯಾಗ್ ಎಸೆಯುತ್ತಾನೆ. ನಂತರ ಆತನ ಕೆನ್ನೆಗೆ ಹೊಡೆಯುತ್ತಾನೆ. ನಂತರ ಅವನು ಈ ಹಿಂದೆ ಲೈಂಗಿಕ ಕಿರುಕುಳ ನೀಡಿದ್ದ ಸಂತ್ರಸ್ತ ಮಹಿಳೆಯ ಮೇಲೆ ಪುಸ್ತಕ ಎಸೆದು ನಂತರ ಆಕೆಯ ಕೆನ್ನೆಗೆ ಹೊಡೆಯುತ್ತಾನೆ. ಈ ವಿಡಿಯೋ ಬಗ್ಗೆ ಬಜಿಂದರ ಸಿಂಗನು ಯಾವುದೇ ಸ್ಪಷ್ಟನೆ ನೀಡಿಲ್ಲ.

2. ಪಾದ್ರಿ ಬಜಿಂದರ ಸಿಂಗ ಕ್ಯಾನ್ಸರನಂತಹ ಕಾಯಿಲೆಗಳನ್ನು ಗುಣಪಡಿಸುವ ಮತ್ತು ಸತ್ತವರನ್ನು ಪುನಃ ಬದುಕಿಸುವುದಾಗಿ ಹೇಳಿಕೊಳ್ಳುತ್ತಾನೆ. ಅವನ ಕಾರ್ಯಕ್ರಮಗಳಲ್ಲಿ ಅನೇಕ ಚಲನಚಿತ್ರ ನಟರು ಕೂಡ ಭಾಗವಹಿಸುತ್ತಾರೆ.

3. 2018 ರಲ್ಲಿಯೂ ಅವನ ಮೇಲೆ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ಮಾಡಿರುವ ಆರೋಪವಿತ್ತು. ಆ ಪ್ರಕರಣದಲ್ಲಿ ಅವನನ್ನು ಬಂಧಿಸಲಾಗಿತ್ತು. ನಂತರ ಮಹಿಳೆಯು ಆರೋಪವನ್ನು ಹಿಂಪಡೆದಳು.

ಸಂಪಾದಕೀಯ ನಿಲುವು

ಹಿಂದೂ ಸಂತರ ಮೇಲೆ ಹೇಳಿಕೆಯ ಅತ್ಯಾಚಾರದ ಆರೋಪಗಳಾದಾಗ ಅವರ ಮೇಲೆ ಕೆಸರೆರಚುವ ಮಾಧ್ಯಮಗಳು, ಪ್ರಗತಿಪರರು ಮುಂತಾದವರು ಅಹಿಂದೂ ಧರ್ಮಗುರುಗಳ ಮೇಲೆ ಇಂತಹ ಆರೋಪಗಳು ಬಂದಾಗ ಮೌನವಾಗಿರುತ್ತಾರೆ. ಈ ಮಹನೀಯರ ಭಯಾನಕ ಮೌನದ ಬಗ್ಗೆ ಹಿಂದೂಗಳು ಈಗ ಪ್ರಶ್ನಿಸಬೇಕು ಮತ್ತು ಅವರ ನಿಲುವನ್ನು ಸ್ಪಷ್ಟಪಡಿಸಲು ಒತ್ತಾಯಿಸಬೇಕು !