|
ಮುಂಬಯಿ, ಮಾರ್ಚ್ 24 (ವಾರ್ತೆ) – ಸಾಮಾಜಿಕ ಮಾಧ್ಯಮದಲ್ಲಿ ವ್ಯಂಗ್ಯ ಗೀತೆಯ ವೀಡಿಯೊದಲ್ಲಿ ಸ್ಟ್ಯಾಂಡ್ ಅಪ್ ಕಾಮಿಡಿಯನ್ ಕುನಾಲ್ ಕಾಮ್ರಾ ಶಿವಸೇನೆಯ ನಾಯಕ ಮತ್ತು ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಏಕನಾಥ್ ಶಿಂದೆ ಅವರ ಹೆಸರನ್ನು ಉಲ್ಲೇಖಿಸದೆ ಅವರನ್ನು ‘ದ್ರೋಹಿ’ ಎಂದು ಉಲ್ಲೇಖಿಸಿದ್ದಾನೆ. ಮಾರ್ಚ್ 24 ರಂದು ವಿಧಾನಸಭೆಯಲ್ಲಿ ಇದರ ಪ್ರತಿಧ್ವನಿಗಳು ಕೇಳಿಬಂದವು. ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು, “ಸ್ಟ್ಯಾಂಡ್ ಅಪ್ ಕಾಮಿಡಿ ಮಾಡುವ ಹಕ್ಕು ಎಲ್ಲರಿಗೂ ಇದೆ; ಆದರೆ ಸ್ವಾತಂತ್ರ್ಯದ ದುರ್ಬಳಕೆಯನ್ನು ಸಹಿಸಲು ಸಾಧ್ಯವಿಲ್ಲ” ಎಂದು ಕುನಾಲ್ ಗೆ ಎಚ್ಚರಿಕೆ ನೀಡಿದರು. ಈ ವಿಷಯದಲ್ಲಿ, “ಕಾಮ್ರಾ, ಶಿಂದೆ ಅವರಲ್ಲಿ ಕ್ಷಮೆಯಾಚಿಸಬೇಕು, ಇಲ್ಲದಿದ್ದರೆ ಆತನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು” ಎಂದು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಎಚ್ಚರಿಸಿದ್ದಾರೆ.